ಬೀದರ್: ವಿದ್ಯುತ್ ತಗುಲಿ ಮೃತಪಟ್ಟ ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಗ್ರಾಮದ ಸತೀಶ್ ಮೇಲಕೇರಿ ಅವರ ಕುಟುಂಬಕ್ಕೆ ಜೆಸ್ಕಾಂ ರೂ. 5 ಲಕ್ಷ ಪರಿಹಾರ ಒದಗಿಸಿದೆ.
ಗ್ರಾಮ ಪಂಚಾಯಿತಿ ವತಿಯಿಂದ ಬೀದಿ ದೀಪ ಅಳವಡಿಸುವ ಕೆಲಸ ಮಾಡುತ್ತಿದ್ದ ಸತೀಶ್ 2024ರ ಡಿಸೆಂಬರ್ 29 ರಂದು ವಿದ್ಯುತ್ ತಗುಲಿ ಮೃತಪಟ್ಟಿದ್ದರು.
ಸಂತ್ರಸ್ತರ ಕುಟುಂಬದ ಮನವಿ ಮೇರೆಗೆ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರದಾರ್ ಅವರು ಈ ಕುರಿತು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಗಮನ ಸೆಳೆದಿದ್ದರು. ಬಡ ಕುಟುಂಬಕ್ಕೆ ಪರಿಹಾರ ಕಲ್ಪಿಸಿ ನೆರವಾಗಲು ಮನವಿ ಮಾಡಿದ್ದರು.
ಇಂಧನ ಸಚಿವರ ನಿರ್ದೇಶನದ ಮೇರೆಗೆ ತಮ್ಮ ಕುಟುಂಬಕ್ಕೆ ಜೆಸ್ಕಾಂನಿಂದ ರೂ. 5 ಲಕ್ಷ ಪರಿಹಾರ ಕಲ್ಪಿಸಲಾಗಿದೆ. ಪರಿಹಾರ ದೊರಕಿಸಿಕೊಡಲು ಶ್ರಮಿಸಿದ ಸಂಜಯ್ ಜಾಗೀರದಾರ್ ಹಾಗೂ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಮೃತರ ಪತ್ನಿ ಮರಿನಾ ತಿಳಿಸಿದ್ದಾರೆ.

——————