Saturday, May 24, 2025
Homeಬೀದರ್ಹೊಲಿಗೆ ತರಬೇತಿ ಸಮಾರೋಪ ಸಮಾರಂಭ

ಹೊಲಿಗೆ ತರಬೇತಿ ಸಮಾರೋಪ ಸಮಾರಂಭ

ಬೀದರ್: ನಗರದ ಮಂಗಲಪೇಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೀ ಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಸಮಾರೋಪ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾನ್ಯ ಜಿಲ್ಲಾ ನಿರ್ದೇಶಕರು ಪ್ರವೀಣ್ ಕುಮಾರ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ತಂದಿದ್ದು ಹೊಲಿಗೆ ತರಬೇತಿ ಮಹಿಳೆಯರ ಸ್ವಾವಲಂಬನೆ ಬದುಕಿನತ್ತ ನಡೆಸುವುದು ಇದಕ್ಕೆ ಉದಾಹರಣೆಯಾಗಿ ಧರ್ಮಸ್ಥಳದ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಇದೇ ರೀತಿಯಾಗಿ ಬೆಳೆದು ಬಂದಿದೆ, ಧರ್ಮಸ್ಥಳದ ರೂಟ್ ಸೆಡ್ ತರಬೇತಿ ಕೇಂದ್ರವು ವ್ಯೆಕ್ತಿಯ ಕೌಶಲ್ಯ ಅಭಿವೃದ್ಧಿಗಾಗಿ ಸಾಕಷ್ಟು ತರಬೇತಿಗಳನ್ನು ಆಯೋಜಿಸುತ್ತದೆ ಅದೇ ರೀತಿಯಾಗಿ ಬೀದರ್ ಜಿಲ್ಲೆಯಲ್ಲಿಯೂ ಕೂಡ ಪ್ರತಿ ವರ್ಷ ಹೊಲಿಗೆ ತರಬೇತಿ ಮತ್ತು ಇತರ ಕೌಶಲ್ಯ ಅಭಿವೃದ್ಧಿಯ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತದೆ, ಉತ್ತಮ ರೀತಿಯಲ್ಲಿ ತರಬೇತಿಯನ್ನು & ಪ್ರಮಾಣ ಪತ್ರವನ್ನು ಪಡೆದುಕೊಂಡು ಮುಂದಿನ ಬದುಕಿನಲ್ಲಿ ಈ ಬಗ್ಗೆ ಸ್ವ ಅಭಿವೃದ್ಧಿಯ ಆಸಕ್ತಿಯನ್ನು ಎಲ್ಲಾ ಮಹಿಳೆಯರು ಹೊಂದಬೇಕಾಗಿ ತಿಳಿಸಿದರು,
ಈ ಬಗ್ಗೆ ಎಂಡಿ ಗುಲಾಮ್ರವರು ಪಂಚಾಯಿತಿ ಸದಸ್ಯರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವನ್ನು ಶ್ಲಾಘಿಸಿದರು.
ಸರಸ್ವತಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರು ಶರಣು ಪಾಟೀಲ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಕಾರ್ಯಗಳು ಗ್ರಾಮಗಳ ಅಭಿವೃದ್ಧಿ ಗಾಗಿಯೇ ಶ್ರಮಿಸುತ್ತಿದೆ ಈಗ ಪರಿಸರ ಸಂರಕ್ಷಣೆಯಲ್ಲಿಯೂ ಅವರ ಕೊಡುಗೆ ಅಪಾರ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಫಿಲೋಮಿನ ರಾಜ್ ಮಾಜಿ ಸಿಂ ಎಂ ಸಿ ಅಧ್ಯಕ್ಷರು ಮತ್ತು ವೆಲ್ ಮೇಘನಾ ಹಾಸ್ಪಿಟಲ್ ಅಧ್ಯಕ್ಷರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಸಹಕಾರವೂ ಕೂಡ ಬಹುಮುಖ್ಯವಾಗಿದ್ದು ನಮ್ಮೆಲ್ಲರ ಸಹಕಾರ ಕ್ಷೇತ್ರದೊಂದಿಗೆ ಇದೆ ಎಂದು ನುಡಿದರು, ಕಾರ್ಯಕ್ರಮದಲ್ಲಿ ತಾಲೂಕು ಯೋಜನೆ ಅಧಿಕಾರಿಗಳಾದ ಧರ್ಮೇಂದ್ರ ರವರು ಜಿಲ್ಲಾ ನೀರು ಉಳಿಸು ಸಮನ್ವಯಾಧಿಕಾರಿ ಬಸವಲಿಂಗಯ್ಯ ಸ್ವಾಮಿ ವಲಯ ಮೇಲ್ವಿಚಾರಕರಾದ ಶ್ರೀಮತಿ ಶಿಲ್ಪ ರವರು ವಲಯದ ಸೇವಾ ಪ್ರತಿನಿಧಿಯವರು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
——————
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3