ಬೀದರ್: ನೆಹರು ಯುವ ಕೇಂದ್ರ ಬೀದರ್ ಹಾಗೂ ಮಾಣಿಕ ಯುವ ಸಂಸ್ಕೃತಿಕ ಕಲಾ (ರಿ) ಬೀದರ ಇವರ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಇತ್ತಿಚೀಗೆ ನಗರದ ಅಮೂಲ್ಯಾ ಶಾಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಜರುಗಿತು.
ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಕುರ್ಚಿ ಆಟ ಆಡಿಸಿ ಪ್ರಥಮ, ದ್ವೀತಿಯ, ಮತ್ತು ತೃತಿಯ ಸ್ಥಾನದಲ್ಲಿ ಬಂದ ಮಹಿಳೆಯರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ನಾಟ್ಯಶ್ರೀ ನೃತ್ಯಾಲಯದ ಮುಖ್ಯಸ್ಥೆ ರಾಣಿ ಸತ್ಯಮೂರ್ತಿ ಮಾತನಾಡಿ, ನಾವು ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎಲ್ಲದರಲ್ಲೂ ಮುಂದೇ ಇದ್ದೇವೆ. ಗಂಡು ಮಕ್ಕಳೇ ಇರಲಿ ಹೆಣ್ಣು ಮಕ್ಕಳೆ ಇರಲಿ ಅವರಲ್ಲಿ ನಾವು ಏನಾದರೂ ಸಾಧಿಸುತ್ತೇವೆಂಬ ಛಲವಿರಬೇಕು. ಯಾವುದಾದರೂ ಒಂದು ಗುರಿ ಇಟ್ಟುಕೊಳ್ಳಬೇಕು. ನಾವು ಎಲ್ಲ ರೀತಿಯಲ್ಲಿ ಚೆನ್ನಾಗಿದ್ದರೂ ಏನು ಮಾಡುತ್ತಿಲ್ಲ. ಮಂಗಲಾ ಮರಕಲೆ ಅವರು ಅಂಗವಿಕಲರಾಗಿದ್ದರು ಕೂಡ ತಾವು ಅಂಗವಿಕಲರಿಲ್ಲ ಎಂದು ತಿಳಿದುಕೊಂಡು ಎಲ್ಲಾ ರೀತಿಯಲ್ಲೂ ಕೆಲಸ ಮಾಡುತ್ತಾರೆ ಅವರು ನಮ್ಮೆಲ್ಲರಿಗೂ ಸ್ಪೂರ್ತಿ, ಅವರ ರೀತಿ ನಾವು ಕೂಡ ಕೆಲಸ ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಾಹಿತಿ ವಿಜಯಲಕ್ಷ್ಮಿ ಕೌಟಿಗೆ ಮಾತನಾಡಿ, ಹೆಣ್ಣಿನ ಬಗ್ಗೆ ತಾರತಮ್ಯ ಮಾಡುವುದು ನಮ್ಮ ತಾಯಿಯಿಂದ ಶುರುವಾಗುತ್ತದೆ. ಗಂಡು ಮಗು ಹುಟ್ಟಿದರೆ ಬಹಳ ಖುಷಿ ಪಡುತ್ತಾರೆ. ಹೆಣ್ಣು ಮಗು ಹುಟ್ಟಿದರೆ ಅಯ್ಯೋ ಹೆಣ್ಣು ಮಗು ಹುಟ್ಟುತ್ತೆಂದು ಬೇಸರ ಪಡುತ್ತಾರೆ. ಹೆಣ್ಣು ಮಕ್ಕಳ ದೌರ್ಜನ್ಯ ದಿನವನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂತ ಆಚರಿಸುತ್ತಿರುವುದು ಒಂದು ಬೇಸರ ವಿಷಯ. ಎಂದರು.
ವಕೀಲೆ ರಾಜೇಶ್ವರಿ ಖ್ಯಾಮಾ ಮಾತನಾಡಿ,. ಮಹಿಳಾ ದಿನಾಚರಣೆ ಎಂದರೆ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕೊಟ್ಟು ಎಲ್ಲರಿಗೂ ಸಮಾನರಾಗಿ ನೋಡುವ ದಿನ, ಒಂದೇ ದಿವಸ ಮಹಿಳಾ ದಿನಾಚರಣೆ ಅಂತ ಆಚರಿಸುವುದಲ್ಲ ಹೆಣ್ಣು ಮಕ್ಕಳಿಗೆ ಪ್ರತಿದಿನ ಮಹಿಳಾ ದಿನಾಚರಣೆನೇ ಆಗಿರುತ್ತದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾಣಿಕ್ ಯುವ ಸಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷೆ ಕು.ಭಾಗ್ಯಶ್ರೀ ಮರಕಲೆ ವಂದಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕ್ತತರಾದ ಕು. ಮಂಗಲಾ ಮರಕಲೆ, ಅಮೂಲ್ಯ ಶಾಲೆಯ ಅಧ್ಯಕ್ಷೆ ನಾಗಮ್ಮ ಎರನಳ್ಳಿ, ಶಾಲೆಯ ಮುಖ್ಯ ಗುರು ಭಾಗ್ಯವಂತಿ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ,.ಮಕ್ಕಳು, ಮಹಿಳೆಯರು ಭಾಗವಹಿಸಿದರು.
————