ಬೀದರ್: ನೆಹರು ಯುವ ಕೇಂದ್ರ ಬೀದರ್ ಹಾಗೂ ಮಾಣಿಕ ಯುವ ಸಂಸ್ಕೃತಿಕ ಕಲಾ ಸಂಸ್ಥೆ (ರಿ) ಬೀದರ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತಿಚೀಗೆ ನೌಬಾದನ DIET ಶಿಕ್ಷಣ ತರಬೇತಿ ಕೇಂದ್ರದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಜರುಗಿತು.
ರೈಜಿಂಗ ಹ್ಯಾಂಡ್ ಯುತ ನಗರ ಹಾಗೂ ಗ್ರಾಮಿಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸತೀಷ ಬಿಳಕೊಟೆ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿ,, ಕು. ಮಂಗಲಾ ಮರಕಲೆ ಅವರೆ ಅಂಗವಿಕಲರಿಗೆ ಸ್ಪೂರ್ತಿ, ಅವರ ಸಾಧನೆಯೆ ನಮಗೆ ದಾರಿ ಎಂದು ಹೇಳಿದರು. ಪ್ರತಿಯೊಬ್ಬ ಅಂಗವಿಕಲರಲ್ಲೂ ಒಂದು ಕಲೆ, ಇದೆ. ಅವರಿಗೆ ದೇವರು ತಮ್ಮ ದೆಹದಲ್ಲಿ ಒಂದು ಭಾಗ ಕಡಿಮೆ. ಕೊಟ್ಟರು ಅವರ ಒಳಗೆ ಯಾವುದೋ ಒಂದು ಶಕ್ತಿ ಕೊಟ್ಟಿರುತ್ತಾನೆ. ಅದನ್ನು ಅವರು ಹುಡಿಕಿಕೊಂಡು ತಮ್ಮಲ್ಲಿರುವ ಕಲೆ ತಿಳಿದುಕೋಂಡು ಅದರ ಕಡೆ ಗಮನ ಹರಿಸಿ ಸಾಧಿಸಿ ತೋರಿಸುತ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿ ಕು.ಮಂಗಲಾ ಮರಕಲೆ ಮಾತಾನಾಡಿ, ಅಂಗವಿಕಲರೆಂದರೆ ಶಾಪ ಅಲ್ಲ ಅದು ಸಾಧನೆ ಅಡ್ಡಿಯಲ್ಲ. ಅದು ಒಂದು ರೀತಿಯ ಸಾಧನೆಗೆ ಸ್ಫೂರ್ತಿ, ಎಂದು ಹೇಳಿದರು.
ಇದೇ ವೇಳೆ ಸಾಧನೆಗೈದ ಅಂಗಲವಿಕಲರಿಗೆ ಪ್ರಮಾಣ ಪತ್ರ ನೀಡಿ ಗೌರವಿಲಾಯಿತು.. ಕಾರ್ಯಕ್ರಮದಲ್ಲಿ ಮಾಣಿಕ ಯುವ ಸಾಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷೆ ಕು.ಭಾಗ್ಯಶ್ರೀ ಮರಕಲೆ ಸ್ವಾಗತಿಸಿ ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನೌಬಾದನ ಡೈಟ್ ಶಿಕ್ಷಣ ತರಬೇತಿ ಕೇಂದ್ರದ ಮೆಲ್ವಿಚಾರಕ ಪ್ರೇಮದಾಸ, ಕ್ಷೇತ್ರ ಮೆಲ್ವಿಚಾರಕ ಆದಿಸಂನ, ಎಮ್.ಆರ್.ಡಬ್ಲ್ಯು ದೇವೆಂದ್ರ ನಿಡೊದಾ ಹಾಗು ಇತರೆ ಅಂಗವಿಕಲರು ಇದ್ದರು.
—————