ಬೀದರ್ : ಮಾ.22 ರಂದು ಡಾ. ಜ್ಯೋತಿ ಯೆರೋಳಕರ್‌ಖೇಣಿ ಅವರಿಗೆ ಕರ್ನಾಟಕ ನಾರಿ ಶಕ್ತಿ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಮಹಿಳೆಯರಿಗೆ ಮತ್ತು ಶಿಕ್ಷಣ, ಆರೋಗ್ಯ, ಕೈಗಾರಿಕೆ, ಕೃಷಿ, ಸಾಮಾಜಿಕ ಮತ್ತು ಒಟ್ಟಾರೆ ಆರ್ಥಿಕ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟೀಯ ಮಟ್ಟದಲ್ಲಿ ಭಾರತದ ಹೆಮ್ಮೆಯ ಪತಾಕೆಯನ್ನು ಹಾರಿಸಿದ ಮಹಿಳೆಯರಿಗೆ ಕಲ್ಯಾಣ ಕರ್ನಾಟಕ ನಾರಿ ಶಕ್ತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು , ಆರೋಗ್ಯ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಡಾ. ಜ್ಯೋತಿ ಯೆರೋಳಕರ್ ಖೇಣಿ ಅವರು ದೇಶದ ವಿವಿಧೆಡೆ ಸೇವೆ ಸಲ್ಲಿಸಿದಲ್ಲದೆ. ಸುರಭಿ ಸಂಸ್ಥೆಯ ಮುಖಾಂತರ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿರುತ್ತಾರೆ.
ಗುರು ನಾನಕ ಪಬ್ಲಿಕ್ ಶಾಲೆ ಆರಂಭಿಸಿ 2025ರ ಜನೆವರಿ 12 ರಂದು 50 ವರ್ಷ ಪೂರೈಸುವ ಪ್ರಯುಕ್ತ ಸೂವರ್ಣ ಮಹೋತ್ಸವ ಸಂದರ್ಭದಲ್ಲಿ ಗುರು ನಾನಕ ಶಿಕ್ಷಣ ಸಂಸ್ಥೆಯೂ ನಗರದ ಮೈಲೂರ ರಸ್ತೆಯಲ್ಲಿರುವ ಗುರು ನಾನಕ ದೇವ್ ಇಂಜೀನಿಯರಿಂಗ್ ಕಾಲೇಜ್‌ನ ಗುರು ನಾನಕ ಭವನದಲ್ಲಿ ಮಾರ್ಚ 22 ರಂದು ಸಂಜೆ 5:00 ಗಂಟೆಗೆ ಕಲ್ಯಾಣ ಕರ್ನಾಟಕ ನಾರಿ ಶಕ್ತಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಡಾ. ಜ್ಯೋತಿ ಯೆರೋಳಕರ್‌ಖೇಣಿ ಅವರು ಕರ್ನಾಟಕ ನಾರಿ ಶಕ್ತಿ ಪ್ರಶಸ್ತಿಗೆ ಆಯ್ಕೆಯಾದ ಪ್ರಯುಕ್ತ ವಿವಿಧ ಸಂಘಟನೆಗಳು, ಸುರಭಿ ಪರಿವಾರದ ಸಿಬ್ಬಂದಿಗಳು, ಪ್ರಯಾವಿ ಆಸ್ಪತ್ರೆಯ ನಿರ್ದೇಶಕ ಮಂಡಳಿ ಹಾಗೂ ಸಂಸ್ಕಾರ ಇಂಟರನ್ಯಾಶನಲ್ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅವರನ್ನು ಅಭಿನಂದಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
——————