ಬೀದರ್: ಮಹಿಳೆ ತನ್ನ ಜೀವನದಲ್ಲಿ ಗುರಿ ಇಟ್ಟುಕೊಂಡು ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಧೃಢಸಂಕಲ್ಪದೊಂದಿಗೆ ಮುನ್ನಗ್ಗಬೇಕೆಂದು ಬೀದರ ವಿಶ್ವವಿದ್ಯಾಲಯದ ಕುಲಸಚಿವೆ ಶ್ರೀಮತಿ ಸುರೇಖಾ ತಿಳಿಸಿದರು.
ನಗರದ ಕರ್ನಾಟಕ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಮಹಿಳಾ ವಿಭಾಗದ ವತಿಯಿಂದ ಆಯೋಜಿಸಿದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಾಧಿಸುವ ನಾರಿಗೆ ಆತ್ಮವಿಶ್ವಾಸವೇ ಒಂದು ಆಯುಧ. ಸಮಯದ ಸದುಪಯೋಗ ಪಡಿಸಿಕೊಳ್ಳುತ್ತ, ಸತತ ಪರಿಶ್ರಮದ ಜೊತೆಗೆ ಸಾಧನೆಯ ಉತ್ತುಂಗ ಶಿಖರಕ್ಕೇರುವ ಸತ್ ಸಂಕಲ್ಪ ಮಾಡಿಕೊಳ್ಳಬೇಕು. ಮಹಿಳೆ ಕ್ಷಮಯಾಧರಿತ್ರಿ ನಿಜ, ಜೊತೆಗೆ ಪ್ರತಿಭಟಿಸುವ ಮನೋಭಾವ, ಹಕ್ಕನ್ನು ಪಡೆದುಕೊಳ್ಳುವ ಶಕ್ತಿ ಮೈಗೂಡಿಸಿಕೊಳ್ಳಬೇಕು. ಆಡು ಮುಟ್ಟದ ಸೊಪ್ಪಿಲ್ಲ, ಮಹಿಳೆ ಇಲ್ಲದ ಕ್ಷೇತ್ರಗಳೇ ಇಲ್ಲ. ಮೊಬೈಲ್‌ನಿಂದ ದೂರವುಳಿದು ಸಾಧನೆಯ ಹಾದಿಯೆಡೆಗೆ ಪಯಣ ಸಾಗಲಿ ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇಂಗ್ಲೀಷ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ಪಾಟೀಲ ಮಾತನಾಡಿ ಮಹಿಳೆಗೆ ಅನ್ಯಾಯವಾದಾಗ ಯಾರೋ ಬಂದು ಕಾಪಾಡುತ್ತಾರೆ ಎನ್ನುವ ಭಾವನೆ ತೊಲಗಿಸಬೇಕು. ನಾನು ಹೆಣ್ಣು, ನನ್ನಿಂದ ಏನೂ ಸಾಧ್ಯವಿಲ್ಲ ಎನ್ನುವ ಕೀಳರಿಮೆಯಿಂದ ಹೊರಬಂದು, ಸಮಾನ ಕೆಲಸಕ್ಕೆ ಸಮಾನ ಸ್ಥಾನಮಾನದ ಹೋರಾಟಕ್ಕೆ ಸಜ್ಜುಗೊಳ್ಳಬೇಕು. ತನ್ನನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳದೆ ಸ್ವಂತ ವಿಚಾರದಿಂದ ಬದುಕಬೇಕು. ನಾವೂ ಮಹಿಳೆಯರು ಯಾರಿಗೂ ಕಡಿಮೆಯಿಲ್ಲ ಎನ್ನುವ ಜ್ವಲಂತ ಇಚ್ಛಾಶಕ್ತಿ ಮೈಗೂಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ಪ್ರತಿಪಾದಿಸಿದರು.
ಕರ್ನಾಟಕ ರಾಷ್ಟಿçಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಕರಾಶಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಚಂದ್ರಕಾಂತ ಶೆಟಕಾರ, ಧೂಳಪ್ಪ ಪಾಟೀಲ, ಚಂದಾ ಶಾಂತಕುಮಾರ, ಮಹಿಳಾ ವಿಭಾಗದ ಸಂಯೋಜಕಿ ಜ್ಯೋತಿ ಪಾಟೀಲ ಮಹಿಳಾ ವಿಭಾಗದ ಕಾರ್ಯಗಳ ಮೇಲೆ ಬೆಳಕು ಚೆಲ್ಲಿದರು.
ಕು. ದಾನೇಶ್ವರಿ ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಆನಿ ಕ್ರಿಸ್ಟಿನಾ ನಿರೂಪಿಸಿದರು. ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಹಂಗರಗಿ ಸ್ವಾಗತಿಸಿದರು. ಡಾ. ಸೋಮೇಶ್ವರಿ ಮುದ್ದಾ ಅತಿಥಿ ಪರಿಚಯ ಮಾಡಿಕೊಟ್ಟರು. ಡಾ. ಮಹಾನಂದ ಮಡಕಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗದ ಪ್ರಾಧ್ಯಾಪಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
—————