ಬೀದರ್: ನಗರದ ಡಾ. ಬಿ ಆರ್ ಅಂಬೇಡ್ಕರ ವೃತ್ತದ ಹತ್ತಿರ ಇರುವ ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಜಿಲ್ಲಾ ಹಾಗೂ ರಾಜ್ಯ ಘಟಕ ಬೀದರ ವತಿಯಿಂದ ಪವರ್ ಸ್ಟಾರ್ ಪುನೀತ ರಾಜಕುಮಾರ ರವರು 50 ನೇ ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಮೊದಲಿಗೆ ಡಾ. ಬಿ ಆರ್ ಅಂಬೇಡ್ಕರ ವೃತ್ತದಲ್ಲಿ ಅಪ್ಪು ಭಾವಚಿತ್ರಕ್ಕೆ ಭವ್ಯವಾದ ಹೂಮಾಲೆ ಅರ್ಪಿಸಿ, ಕೆಕ ಕತ್ತರಿಸಿ ಪಠಾಕಿ ಸಿಡಿಸಲಾಯಿತು. ಪಂಚಗ್ಯಾರಂಟಿ ಬೀದರ ಜಿಲ್ಲಾ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೊಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವ ಜಗತ್ತಿನೊಳಗೆ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಶ್ರೀಮಂತವಾಗಿದೆ. ಆಡು ಭಾಷೆ ಹಳ್ಳಿ ಜನರು ಜೀವನಾಡಿಯಾಗಿಸಿಕೊಂಡು ನೆಲದ ಸಾಹಿತ್ಯ ಸಾಂಸ್ಕೃತಿ ಹಬ್ಬ ಹರಿದಿನಗಳು ಜಾತ್ರೆಗಳ ಮೂಲಕ ಉಳಿಸಿ ಬೆಳೆಸುತ್ತಿದ್ದಾರೆ.
ಸಾಹಿತಿ ಡಾ. ಸುಬ್ಬಣ್ಣ ಕರಕನಳ್ಳಿ ಸ್ವಾಗತ ಪ್ರಾಸ್ತಾವಿಕ ಮಾತನಾಡಿ, ಡಾ.ರಾಜಕುಮಾರ ಮನೆತನ ಕನ್ನಡ ಭಾಷೆಗಾಗಿ ಜೀವನ ಮುಡುಪಾಗಿಟ್ಟಿದೆ. 46 ವರ್ಷಗಳ ಜೀವತ ಅವಿದಿಯಲ್ಲಿ ಪುನೀತ ರಾಜಕುಮಾರ 32 ಚಲನಚಿತ್ರಗಳಲ್ಲಿ ನಟಿಸಿ, ಸಾಮಾಜಿಕ ಕಳಕಳಿ ಕಾಳಜೀಯಿಂದ ತನ್ನ ದುಡಿಮೆಯಲ್ಲಿ ಲಕ್ಷಾಂತರ ಅನಾಥ ಮಕ್ಕಳಿಗೆ ಶಿಕ್ಷಣ ಕಲ್ಪಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸದ ಕರವೇ ಕಾವಲು ಪಡೆ ರಾಜ್ಯಾಧ್ಯಕ್ಷ ಎಚ್ ಸುರೇಶ ಮಾತನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿಕೊಂಡಿರುವ ಪ್ರತಿಯೊಂದು ಸಂಘಟನೆ ಒಂದಾಗಿ ಮುಂದಾಗಿ ಸಮೃದ್ದ ಕರ್ನಾಟಕ ನಿರ್ಮಾಣಕ್ಕೆ ಕೈ ಜೋಡಿಸಬೇಕು. ಗೋಕಾಕ ಚಳುವಳಿ ಕನ್ನಡ ನಾಡಿನ ವಿಶ್ವ ಚಳುವಳಿಯಾಗಿದೆ. ಅಂತಹ ಸಿಸ್ವಾರ್ಥ ಸೇವೆಗೆ ಕನ್ನಡಿಗರೇಲ್ಲರೂ ಮುಂದಾಗಬೇಕೆಂದು.
ಖ್ಯಾತ ಗಾಯಕಿ ರೇಖಾ ಅಪ್ಪರಾವ ಸೌದಿ, ಸಬಸ್ಟೀನ್ ದೇವಪ್ಪ ಹಿಪ್ಪಳಗಾಂವ ಶಾದ್ರಕ್ ಹಿಪ್ಪಳಗಾಂವ ಅಪ್ಪು ಅಭಿನಯದ ಚಲಚಿತ್ರಗೀತೆಗಳನ್ನು ಹಾಡಿದರು.

ನವಜೀವನ ವಿಶೇಷ ಚೇತನ ಮಕ್ಕಳಿಗೆ ಸನ್ಮಾನ 5000 ಬಹುಮಾನ ನೀಡಲಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬ್ಯಾಗ್ ನೋಟ ಬುಕ್ ಪೇನಗಳನ್ನು ನೀಡಲಾಯಿತು.
ವೇದಿಕೆ ಮೇಲೆ ಕರವೇ ರಾಜ್ಯ ಉಪಾಧ್ಯಕ್ಷ ಕೆ ಅನೀಲಕುಮಾರ, ಬಳ್ಳಾರಿ ಜಿಲ್ಲಾಧ್ಯಕ್ಷ ಸಾಗರ, ನಗರ ಅಧ್ಯಕ್ಷ ರಾಘವೇಂದ್ರ, ಅಭಿ ಕಾಳೆ, ಕನ್ನಡಿಗರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಕಾಂತ ಭವಾನಿ, ಕರವೇ (ಶಿವರಾಮೆ ಗೌಡ) ಜಿಲ್ಲಾಧ್ಯಕ್ಷ ಪ್ರಶಾಂತ ಭಾವಿಕಟ್ಟಿ ನಾಗೂರ ಗ್ರಾಮ ಪಂಚಾಯತ ಉಪಾದ್ಯಕ್ಷ ನರಸಪ್ಪ ಜ್ಯಾನಕೆ, ಸಲ್ಮಾನ ಖಾನ್ ಹಣ್ಮೂ ಪಾಜಿ, ರಾಹುಲ ನಂದಿ, ಅಲ್ಬರ್ಟ ಕೋಟೆ, ಮೋಜೆಸ ನಿರ್ಣಾಕರ್, ಡಾ. ಸ್ಯಾಂಡಿ ಸ್ಯಾಮವೇಲ್ ಮುಂತಾದವರಿದ್ದರು. ಜಿಲ್ಲಾಧ್ಯಕ್ಷ ಅವಿನಾಶ ಬುದೇರಾಕರ್ ಜಿಲ್ಲಾ ಉಪಾಧ್ಯಕ್ಷ ಸ್ಟೀಪನ ಪೌಲ್ ನೇತ್ರತ್ವದಲ್ಲಿ ಜೈ ಭಾರತ ಸೇವಾ ಸಮಿತಿ ರಾಷ್ಟೀಯ ಅಧ್ಯಕ್ಷರಾದ ಪೂಜ್ಯ ಶ್ರೀ ಹವಾ ಮಲ್ಲಿನಾಥ ಸ್ವಾಮಿಜಿ ದಿವ್ಯ ಸಾನಿದ್ಯದಲ್ಲಿ ಭೀಮರಾವ ಹೂಗಾರ, ಸುಭಾಷ ಕೆನಾಡೆ, ಪ್ರಸಾದ ಡೋಣಗೇಕರ್ ರಾಕೇಶ ಕ್ಯಾಶಿಯಾರ, ಡಾ. ಶ್ರೀಮಂತ ಸಪಾಟೆ, ಅಂಜಲಿ ಮಿತ್ರಾ, ರಮೇಶ ಮಿರ್ಜಾಪೂರ ಅನೀಲಕುಮಾರ್ ನಿರೂಪಕಿ ಶ್ರೀಮತಿ ಅಪರ್ಣ, ಅಂಬಾದಾಸ ಸೋನಿ, ವಿಜಯಕುಮಾರ ಭಂಡೆ, ರಾಕೇಶ ಸಿಂಧೆ, ಕುಂದನ ವಾಡೆಕರ್, ಸಂಜಯ ಜೆಸ್ಸಿ, ದಯಾನಂದ ಶೇಟ್ಟಿ, ಸುನೀತಾ ಆನಂದ, ಡಾ. ಸಂದೀಪ ಗಾದ, ಸುನೀಲ, ಸಂದೀಪ ಕಾಂಚೆ, ಶೇಖರ ಬಿರಾದರ, ಕೃಷ್ಣ ಕಾಶಿನಾಥ, ಗೀರಿಜಾ, ಅಬ್ರಾಹ್ಮ, ಶಿವಣ್ಣ ಹಿಪ್ಪಳಗಾವ, ಇಮಾನವೇಲ್ ಕೋಟೆ, ನಾಗಶೇನ್ ಬನ್ನೆರ, ಸುಂದರಾಜ ಫಿರಂಗೆ, ಡಾ. ವಿನೋದಕುಮಾರ, ವಿ ಎಂ ಭಂಗೂರೆ, ಆಕಾಶ ಕೋಟೆ, ಅಮರ ರಾಸೂರೆ, ಅಮೃತ ಸಿಕೇನಪೂರು, ಸೂರ್ಯಕಾಂತ ಸದಾಶಿವ, ವಿಜಯಲಕ್ಷ್ಮಿ , ಲೋಕೇಶ, ಹಣಮಂತ, ಪ್ರಶಾಂತ ಘೊಡಂಪಳ್ಳಿ, ವಿದ್ಯಾಸಾಗರ ಮೇತ್ರೆ, ಸೇರಿದಂತೆ 70 ಜನ ಸಾಧಕರಿಗೆ ಕರ್ನಾಟಕ ರತ್ನ ಪುನೀತ ರಾಜಕುಮಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
—————