ಯಾದಗಿರಿ ಜಿಲ್ಲೆಯ ಸುರಪುರ ವಿಭಾಗದ ಜೆಸ್ಕಾಂ ಅಧಿಕಾರಿಗಳ ಕಳ್ಳಾಟದಿಂದ ರೈತರು & ವಿದ್ಯಾರ್ಥಿಗಳ ಪರೀಕ್ಷೆ ಇರುವುದರಿಂದ/ ಬೇಸಿಗೆ ಪ್ರಾರಂಭ ಆಗಿರುವುದರಿಂದ ವಿದ್ಯುತ್ ಟ್ರಾನ್ಸಫರ್ಮರ್ ಸುಟ್ಟ 24 ತಾಸುಗಳಲ್ಲಿ ಬೇರೆ ಟಿಸಿ ಅಳವಡಿಕೆ ಮಾಡಬೇಕೆಂಬ ಸರ್ಕಾರದ ನಿಯಮವಿದೆ. ಆದರೆ ಸರ್ಕಾರದ ನಿಯಮ ಗಾಳಿಗೆ ತೂರಿ ಸುರಪುರ ವಿಭಾಗ ವ್ಯಾಪ್ತಿಯ ಜೆಸ್ಕಾಂ ಅಧಿಕಾರಿಗಳು ತೀರಾ ನಿರ್ಲಕ್ಷ್ಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುರಪುರ ಇಇ ರಾಜಶೇಖರ, ಶಹಾಪೂರ ಎಇಇ ಮರೆಪ್ಪ, ದೋರನಹಳ್ಳಿ ಜೆ.ಇ ರಾಜಕುಮಾರ್ ಇವರು ರೈತರ ಮನವಿಗೆ ಸ್ಪಂದಿಸದೇ ದಲ್ಲಾಳಿಗಳ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ವಾಸವಿರುವುದಿಲ್ಲ, ಸುಮಾರು 100 ಕಿಮೀ ಕಲಬುರಗಿಯಿಂದ ಓಡಾಟ ಮಾಡುತ್ತಿರುವುದರಿಂದ ಕೆಳಮಟ್ಟದ ಅಧಿಕಾರಿಗಳಿಗೆ ಭಯ ಇಲ್ಲದಂತಾಗಿದ್ದು, ರೈತರ ಗೋಳು ಕೇಳದಂತಾಗಿದೆ. ಮತ್ತು ನಿಜವಾದ ಲೈನ್ ಮ್ಯಾನ್ ಗಳು ಕೆಲಸ ನಿರ್ವಹಿಸದೇ ಹೊರಗಿನ ವ್ಯಕ್ತಿಗಳನ್ನು ಕೆಲಸಕ್ಕೆ ಇಟ್ಟುಕೊಂಡು ಅವರಿಂದ ಕೆಲಸ ಮಾಡಿಕೊಂಡು, ಅವರಿಗೆ ಸಂಬಳ: ಕೊಡದೇ ರೈತರಿಂದ ವಸೂಲಿ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಇವರಿಗೆ ಏನಾದರೂ ಅನಾಹುತವಾದರೆ ಇದಕ್ಕೆ ಯಾರು ಜವಾಬ್ದಾರರು? ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನಿನ ಕ್ರಮ ಕೈಗೊಂಡು ತಕ್ಷಣದಿಂದಲೇ ಸ್ಥಳದಿಂದಲೇ ವರ್ಗಾವಣೆ ಮಾಡಿ, ರೈತರಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಸದರಿ ಇಲಾಖೆಯಲ್ಲಿ ಟಿ.ಸಿ.ಗಳು ಗೋದಾಮಿನಲ್ಲಿ ಸ್ಟಾಕ್ ಇದ್ದರೂ ಕೂಡಾ ಉದಾ: ಕರಣಗಿ & ಚಟ್ನಳ್ಳಿ ಗ್ರಾಮದ ಟಿ.ಸಿ. ಕೊಡದೇ ಸತಾಯಿಸಿ, ಈಗ ಬೇಸಿಗೆ ಮತ್ತು ಪರೀಕ್ಷೆ ಸಮಯದಲ್ಲಿ ಇಡೀ ಊರು ಕತ್ತಲಲ್ಲಿದ್ದರೂ ಕೂಡಾ ಗಮನಿಸದೇ ಎ.ಸಿ. ರೂಂನಲ್ಲಿ ಕುಳಿತು ಕಾಲಹರಣ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು
ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸುಟ್ಟಿರುವ ಟ್ರಾನ್ಸಫರ್ಮರ್ ಅಳವಡಿಕೆ ಮಾಡಬೇಕು. ಅಂದರೆ ರೈತರಿಗೆ ಬಾಡಿಗೆ ಗಾಡಿ, ಹಾಗೂ ಚೈನ್ ಪೂಲ್ಲಿ ತೆಗೆದುಕೊಂಡು ಬರುವಂತೆ ಹೇಳಿ ಕಳ್ಳಾಟ ಆಡ್ತಿದ್ದಾರೆ. ಇಂದು, ನಾಳೆ ಅಂತ ರೈತರನ್ನ ಸತಾಯಿಸುತ್ತಿದ್ದಾರೆ. ಜೊತೆಗೆ ರೈತರು ದೂರವಾಣಿ ಸಂಪರ್ಕ ಮಾಡಿದಾಗ ಒಬ್ಬರ ಮೆಲೋಬ್ಬರ ಹಾಕಿ ಜಾರಿಕೊಳ್ಳುವ ಮೂಲಕ ಕಾಲಹರಣ ಮಾಡ್ತಿದ್ದಾರೆ. ಇದಕ್ಕೆ ಅವಕಾಶ ನೀಡದ ಇಂತಹ ಪುಡಾಂಗ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಈ ಸಂದರ್ಭದಲ್ಲಿಭೀಮರಾಯ ಸುರೇಶ ನಿಂಗಪ್ಪ ಸಿದ್ದಪ್ಪ ಚಂದ್ರೆಡ್ಡಿ ದುರ್ಗಪ್ಪ ಮಲ್ಲಪ್ಪ ಸಿದ್ದಪ್ಪ ಶಿವರಾಜ್ ಅನಿಲ್ ಬಾಗಣ್ಣ ಸಣ್ಣ ಮುನಿಯಪ್ಪ ಸಿದ್ದಣ್ಣ ಮಾಳಪ್ಪದೌಲ ಸಾಬ್ ನಿಂಗಪ್ಪ ಭೀಮಾಶಂಕರ ಹಣಮಂತ ತಾಯಪ್ಪ ಮರಗಪ್ಪ ಮೋನಪ್ಪ ಮಹೇಶ ಭೀಮಪ್ಪ ಭೀಮರಾಯ ಸುರೇಶ ನಿಂಗಪ್ಪ ಸಿದ್ದಪ್ಪ ಚಂದ್ರೆಡ್ಡಿ ದುರ್ಗಪ್ಪ ಮಲ್ಲಪ್ಪ ಸಿದ್ದಪ್ಪ ಶಿವರಾಜ್ ಅನಿಲ್ ಬಾಗಣ್ಣ ಸಣ್ಣ ಮುನಿಯಪ್ಪ ಸಿದ್ದಣ್ಣ ಮಾಳಪ್ಪ ದೌಲ ಸಾಬ್ ನಿಂಗಪ್ಪ ಭೀಮಾಶಂಕರ್ರಂಗಪ್ಪ ಶೇಖರಪ್ಪ ಆಂಜನೇಯ ತಿಪ್ಪಣ್ಣ
ಹಣಮಂತ ತಾಯಪ್ಪ ಮರಗಪ್ಪಮೋನಪ್ಪ ಮಹೇಶಭೀಮಪ್ಪಹಂಜಪ್ಪರಫೀಕ್ ಪಟೇಲ್
ಸೇರಿದಂತೆ ಅನೇಕರು ಇದ್ದರು.