ಬೀದರ್: ತಾಲ್ಲೂಕಿನ ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಜಾನಕನೋರ ಅವರಿಗೆ ಸಮಾಜ ಸೇವೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ರಾಜ್ಯಮಟ್ಟದ ಕರ್ನಾಟಕ ರತ್ನ ಪುನೀತ್ ರಾಜಕುಮಾರ ಪ್ರಶಸ್ತಿ ದೊರೆತಿದೆ.
ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ವೇದಿಕೆ ಕಾವಲು ಪಡೆ ವತಿಯಿಂದ ಸೋಮವಾರ ನಡೆದ ಚಿತ್ರನಟ ಪುನೀತ್ ರಾಜಕುಮಾರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ ಪ್ರಶಸ್ತಿ ಪ್ರದಾನ ಮಾಡಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ವೇದಿಕೆ ಕಾವಲು ಪಡೆಯ ರಾಜ್ಯ ಅಧ್ಯಕ್ಷ ಸುರೇಶ, ಜಿಲ್ಲಾ ಅಧ್ಯಕ್ಷ ಅವಿನಾಶ್ ಬುಧೇರಾಕರ್ ಮತ್ತಿತರರು ಇದ್ದರು.
——————-