ಬೀದರ್: ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಅಂಗವಾಗಿ ನಗರದಲ್ಲಿ ಬುಧವಾರ ಪುಷ್ಪಾಲಂಕೃತ ರಥದಲ್ಲಿ ರೇಣುಕಾಚಾರ್ಯರ ಭಾವಚಿತ್ರ ಹಾಗೂ ಸಿದ್ಧಾಂತ ಶಿಖಾಮಣಿ ಗ್ರಂಥದ ಭವ್ಯ ಮೆರವಣಿಗೆ ನಡೆಯಿತು.
ಡೊಳ್ಳು ಕುಣಿತ, ವೀರಗಾಸೆ, ನಗಾರಿ, ಪುರವಂತಿಕೆ, ಕೋಲಾಟ ಮತ್ತಿತರ ಕಲಾ ತಂಡಗಳು ಮೆರವಣಿಗೆಯ ವೈಭವ ಹೆಚ್ಚಿಸಿದವು.
ಮೆರವಣಿಗೆಯಲ್ಲಿ ಪಾಲ್ಗೊಂಡವರು ತಲೆ ಮೇಲೆ ಪೇಟ, ಭಗವಾ ಟೊಪ್ಪಿಗೆ, ಕೊರಳಲ್ಲಿ ಶಲ್ಯ ಧರಿಸಿ ಗಮನ ಸೆಳೆದರು. ಧರ್ಮ ಧ್ವಜಗಳು ರಾರಾಜಿಸಿದವು.
ಮೆರವಣಿಗೆಯಲ್ಲಿ ಪಾಲ್ಗೊಂಡವರು ತಲೆ ಮೇಲೆ ಪೇಟ, ಭಗವಾ ಟೊಪ್ಪಿಗೆ, ಕೊರಳಲ್ಲಿ ಶಲ್ಯ ಧರಿಸಿ ಗಮನ ಸೆಳೆದರು. ಧರ್ಮ ಧ್ವಜಗಳು ರಾರಾಜಿಸಿದವು.

ಯುವಕರು ಕುಣಿದು ಕುಪ್ಪಳಿಸಿದರು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಇತರ ಗಣ್ಯರು ಕೂಡ ಹೆಜ್ಜೆ ಹಾಕಿ ಪುಳಕಿತಗೊಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡ ಮೆರವಣಿಗೆ ತಹಶೀಲ್ದಾರ್ ಕಚೇರಿ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಭಗತ್ ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ರೋಟರಿ ಕನ್ನಡಾಂಬೆ ವೃತ್ತದ ಮೂಲಕ ಹಾಯ್ದು ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರಕ್ಕೆ ತಲುಪಿ ಸಮಾರೋಪಗೊಂಡಿತು.

ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಡಾ. ರಾಜಶೇಖರ ಶಿವಾಚಾರ್ಯ, ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ರೇಣುಕಾಚಾರ್ಯ ಜಯಂತಿ ಆಚರಣೆ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ, ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬುವಾಲಿ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೊಮನಾಥ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಬುರಾವ್ ಕಾರಬಾರಿ, ಮಾಜಿ ಉಪಾಧ್ಯಕ್ಷ ಕುಶಾಲ್ ಯಾಬಾ, ಮುಖಂಡರಾದ ಶಿವಶರಣಪ್ಪ ವಾಲಿ, ರವೀಂದ್ರ ಸ್ವಾಮಿ, ರಾಮಕೃಷ್ಣ ಸಾಳೆ, ಈಶ್ವರಸಿಂಗ್ ಠಾಕೂರ್, ಶಕುಂತಲಾ ಬೆಲ್ದಾಳೆ, ತರುಣ್ ಎಸ್. ನಾಗಮಾರಪಳ್ಳಿ, ಓಂಪ್ರಕಾಶ್ ರೊಟ್ಟೆ, ವರದಯ್ಯ ಸ್ವಾಮಿ, ಶಿವಕುಮಾರ ಸ್ವಾಮಿ ಬಂಬಳಗಿ, ಗುರುನಾಥ ಜ್ಯಾಂತಿಕರ್, ಬಾಬುರಾವ್ ಮಲ್ಕಾಪುರೆ, ಶಶಿಧರ ಹೊಸಳ್ಳಿ, ದಿಗಂಬರ್ ಮಡಿವಾಳ, ಚಂದ್ರಶೇಖರ ಗಾದಾ, ಮಹೇಶ್ವರ ಸ್ವಾಮಿ, ಅಯ್ಯಪ್ಪ ರೆಡ್ಡಿ, ಶ್ರೀಕಾಂತ ಸ್ವಾಮಿ, ರೂಪಾ ಸ್ವಾಮಿ, ರೇವಣಸಿದ್ದಯ್ಯ ಸ್ವಾಮಿ, ಕಾರ್ತಿಕ ಮಠಪತಿ, ಮಹಾಂತಯ್ಯ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ದಯಾನಂದ ಸ್ವಾಮಿ, ಪಪ್ಪು ಪಾಟೀಲ ಖಾನಾಪುರ, ಅಂಬರೀಷ್ ಸ್ವಾಮಿ ಪ್ರತಾಪನಗರ, ಚಾಮುಂಡೇಶ್ವರಿ ಸ್ವಾಮಿ, ಸಂಜುಕುಮಾರ ಸ್ವಾಮಿ ಕಮಠಾಣ, ಸಮಾಜದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.

ಬೀದರ್: ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಪ್ರಯುಕ್ತ ಶಾಂತೀಶ್ವರಿ ಸಂಸ್ಥೆಗಳ ಸಮೂಹದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಪ್ರಸಾದ ರೂಪದಲ್ಲಿ ಉಪ್ಪಿಟ್ಟು, ಶಿರಾ, ಮಜ್ಜಿಗೆ ಹಾಗೂ ಬಾಳೆಹಣ್ಣು ವಿತರಿಸಲಾಯಿತು.
ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಪಾಟೀಲ ಪ್ರಸಾದ ವಿತರಣೆಗೆ ಚಾಲನೆ ನೀಡಿದರು. ನೌಬಾದ್‍ನ ಜ್ಞಾನಶಿವಯೋಗಾಶ್ರಮದ ಡಾ. ರಾಜಶೇಖರ ಶಿವಾಚಾರ್ಯ, ಶಾಂತೀಶ್ವರಿ ಸಮೂಹದ ಮುಖ್ಯಸ್ಥರೂ ಆದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಜಯಂತಿ ಯುಗಮಾನೋತ್ಸವ ಆಚರಣೆ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಮುಖಂಡರಾದ ರವೀಂದ್ರ ಸ್ವಾಮಿ, ಓಂಪ್ರಕಾಶ್ ರೊಟ್ಟೆ, ವರದಯ್ಯ ಸ್ವಾಮಿ, ಪ್ರವೀಣ್ ಸ್ವಾಮಿ, ನಾಗರಾಜ ಮಠ, ಮಹೇಶ್ ಪಾಟೀಲ, ವಿಘ್ನೇಶ್ ಸ್ವಾಮಿ, ಮಹಾರುದ್ರ ಡಾಕುಳಗಿ, ರಾಕೇಶ್ ಮಠಪತಿ, ನಾಗಯ್ಯ ಸ್ವಾಮಿ, ರೇಣಸಿದ್ದಯ್ಯ ಮಠಪತಿ, ಶಿವಶಂಕರ ಬೆಳಮಗಿ ಮತ್ತಿತರರು ಇದ್ದರು.
————–