ಬೀದರ್: ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಮಹಿಳೆಯರು ಧೈರ್ಯದಿಂದ ಎದುರಿಸಬೇಕು ಎಂದು ಮಾರ್ಕೆಟ್ ಠಾಣೆ ಎಎಸ್‍ಐ ಅನಿತಾ ಪೋಲ್‍ದಾಸ್ ಹೇಳಿದರು.
ಗಣೇಶ್ವರ ಚಾರಿಟಬಲ್ ಟ್ರಸ್ಟ್ ಸಂಚಾಲಿತ ನಗರದ ಕೆಇಬಿ ಕಾಲೊನಿಯ ಪತಂಜಲಿ ಪಬ್ಲಿಕ್ ಶಾಲೆಯಲ್ಲಿ ಬುಧವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ರೀತಿಯ ಅನ್ಯಾಯವಾದಲ್ಲಿ ಕಾನೂನು ನೆರವು ಪಡೆಯಬೇಕು ಎಂದು ತಿಳಿಸಿದರು.

ವಿನೋತಾ ಹಿರೇಮಠ ಮಾತನಾಡಿ, ಬಾಲ್ಯ ವಿವಾಹ ಹಾಗೂ ಹೆಣ್ಣು ಭ್ರೂಣ ಹತ್ಯೆ ಸಂಪೂರ್ಣ ನಿಲ್ಲಬೇಕು ಎಂದು ಹೇಳಿದರು.
ಎಂಜಿನಿಯರ್ ವಿನಯ್ ಗರುಡ್, ಈಶ್ವರಿ ಬೇಲೂರೆ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷೆ ಉಷಾ ಮಾರುತಿ ಮೇತ್ರೆ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಆಡಳಿತಾಧಿಕಾರಿ ಬಸವರಾಜ ಮುಗಟಾಪುರೆ, ಮುಖ್ಯ ಶಿಕ್ಷಕಿ ಸುಪ್ರಿಯಾ ಕುಲಕರ್ಣಿ, ಶಿಕ್ಷಕಿಯರಾದ ಶಾರದಾ ಜ್ಯಾಂತಿಕರ್, ಅನಿತಾ ಕಾಂಬಳೆ, ಪವಿತ್ರಾ ಸ್ವಾಮಿ, ಶ್ರುತಿ ತಲಾರಿ ಉಪಸ್ಥಿತರಿದ್ದರು.
ಶಿವಮಂಗಲಾ ಸ್ವಾಗತಿಸಿದರು. ವನಿತಾ ಕುಲಕರ್ಣಿ ನಿರೂಪಿಸಿದರು. ಪೂಜಾ ಕೋಳಿ ವಂದಿಸಿದರು.
ಶಿವಮಂಗಲಾ ಸ್ವಾಗತಿಸಿದರು. ವನಿತಾ ಕುಲಕರ್ಣಿ ನಿರೂಪಿಸಿದರು. ಪೂಜಾ ಕೋಳಿ ವಂದಿಸಿದರು.
——————