ಈಜು ಕೊಳದ ದರ ಮರು ಪರೀಕ್ಷರಣೆ ಮಾಡಿ ಸಾರ್ವಜನಿಕರಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕು –
ಉಮೇಶ ಕೆ. ಮುದ್ನಾಳ
ಯಾದಗಿರಿ; ಗಿರಿನಗರದಲ್ಲಿ ಬೀಸಿಲಿನ ತಾಪ ಹೆಚ್ಚುತ್ತಿದಂತೆ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೋಳ ಪ್ರಾರಂಭ ಮಾಡಿದರು ಸಾಲದು ಹೈಟೆಕ್ ಮೂಲ ಸೌಲಭ್ಯ ಒದಗಿಸಿ ನಾಗರಿಕರಿಗೆ ಕ್ರೀಡಾಪಟುಗಳಿಗೆ ವಿದ್ಯಾರ್ಥೀಗಳಿಗೆ, ಮಹಿಳೆಯರಿಗೆ ಅನುಕೂಲವಾಗುವಂತೆ ಹೈಟೆಕ್ ಸ್ಪರ್ಶ ನೀಡಬೇಕು. ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ ಹೇಳಿದರು.

ಸಂಜೆ ೫.೦೦ ರಿಂದ ೬ ಗಂಟೆೆಯವರಿಗೆ ಮಹಿಳೆಯರಿಗೆ, ಮತ್ತು ಆ ಸಮಯದಲ್ಲಿ ಮಹಿಳಾ ಸಿಬ್ಬಂದಿಯನ್ನು ನೇಮಸಿ ಮಹಿಳಿಯರಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕು.
ಸಾರ್ವಜನಿಕರ ದೂರಿನ ಮೇರೆಗೆ ಜಿಲ್ಲಾ ಈಜುಕೋಳಕ್ಕೆ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥಗಳ ಮೂಲಭೂತ ಸೌಕರ್ಯ ಇಲ್ಲದ ಕಾರಣ ಕಿಡಿಕಾರಿ ಮಾತನಾಡಿದ ಅವರು, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ೨೦೦೯ರಲ್ಲಿ ೧.೭೦ ಕೋಟಿ ರೂ.ಗಳಲ್ಲಿ ಖರ್ಚು ಮಾಡಿ ನಿರ್ಮಾಣ ಮಾಡಲಾಗಿದ್ದು, ಆದರೆ ಈ ಕಾಮಗಾರಿ ಕಳಪೆ ಮಟ್ಟದಲ್ಲಿ ಮೇಲ ನೋಟಕ್ಕೆ ಕಂಡುಬರುತ್ತಿದ್ದು ಇದರ ಅನುಕೂಲ ಸಾರ್ವಜನಿಕರಿಗೆ ಉಪಯೋಗಕ್ಕೆ ಬರದಂತಾಗಿದೆ ಜಿಲ್ಲಾಡಳಿತ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ, ಹೈಟೆಕ್ ಸ್ಪರ್ಶಕ್ಕೆ ಕ್ರಮಕೈಗೊಳ್ಳಬೇಕು. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಸಿಗೆ ಕಾಲದಲ್ಲಿ ಈಗಾಗಲೇ ಬಿಸಿಲಿನ ತಾಪದಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ತಾಪದಿಂದ ದಣಿವರಿಸಲು ಈಜುಕೋಳ ಅವಶ್ಯಕತೆ ಇದೆ. ಆದರೆ ಸರ್ಕಾರದಿಂದ ನಿರ್ಮಾಣವಾಗಿರುವ ಈಜುಕೋಳ ಜನರಿಗೆ ಸರಿಯಾಗಿ ಬಳಕೆಯಾಗುತ್ತಿಲ್ಲ. ಇದರ ನಿರ್ವಾಹಣೆ ಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ದೂರಿದ್ದಾರೆ.

ಜಿಲ್ಲಾ ಕ್ರೀಡಾಂಗಣಕ್ಕೆ ಪ್ರತಿದಿನ ಬೆಳಿಗ್ಗೆ ವಾಯುವಿಹಾರಕ್ಕೆ ಅಧಿಕಾರಿಗಳು, ಕ್ರೀಡಾಪಟುಗಳು, ಪ್ರತಿಷ್ಠಿತ ವ್ಯಕ್ತಿಗಳು ಆಗಮಿಸಿದ್ದರೂ ಈಜುಕೋಳ ಬಗ್ಗೆ ಗಮನಹರಿಸದಿರುವದು ದುರಾದೃಷ್ಟಕರವಾಗಿದ್ದು, ಯಾದಗಿರಿ ಹಿಂದುಳಿಯಲು ಇದೊಂದು ನಿದರ್ಶನವಾಗಿದೆ ಎಂದು ಅವರು ಅಸಮಾಧಾನವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತದ ನಿರ್ಲಕ್ಷ್ಯ ದಿಂದ ಖಾಸಗಿ ಈಜುಕೋಳದ ಮಾಲೀಕರಿಗೆ ಲಾಭವಾಗುತ್ತಿದೆ. ದೊಡ್ಡವರಿಗೆ ೧೦೦/- ರೂ. ಸಣ್ಣ ಮಕ್ಕಳಿಗೆ ೫೦ ರೂ. ಪಡೆಯುತ್ತಿದ್ದಾರೆ. ಈ ದರವನ್ನು ಸಾರ್ವಜನಿಕರಿಗೆ ಹೊರೆಯಾಗದೆ. ದೊಡ್ಡವರಿಗೆ ೫೦/- ಮಕ್ಕಳಿಗೆ ೨೫/- ರೂ ದರವನ್ನು ತಕ್ಷಣದಲ್ಲೇ ನಿಗದಿಪಡಿಸಿ ಜಿಲ್ಲಾಡಳಿತ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.
