Friday, May 23, 2025
Homeಕ್ರೀಡೆಜಗತ್ತಿಗೆ ಶಾಂತಿ, ಸಮಾನತೆ ಹಾಗೂ ಸರಳತೆಯ ಸಂದೇಶ ನೀಡಿದರು ಗೌತಮಬುದ್ಧರು - ಸಚಿವ ಈಶ್ವರ ಬಿ.ಖಂಡ್ರೆ.

ಜಗತ್ತಿಗೆ ಶಾಂತಿ, ಸಮಾನತೆ ಹಾಗೂ ಸರಳತೆಯ ಸಂದೇಶ ನೀಡಿದರು ಗೌತಮಬುದ್ಧರು – ಸಚಿವ ಈಶ್ವರ ಬಿ.ಖಂಡ್ರೆ.

ಜಗತ್ತಿಗೆ ಶಾಂತಿ, ಸಮಾನತೆ ಹಾಗೂ ಸರಳತೆಯ ಸಂದೇಶ ನೀಡಿದರು ಗೌತಮಬುದ್ಧರು- ಸಚಿವ ಈಶ್ವರ ಬಿ.ಖಂಡ್ರೆ.
ಬೀದರ್ : ಜಗತ್ತಿಗೆ ಶಾಂತಿ, ಸಮಾನತೆ, ಸರಳತೆಯ ಸಂದೇಶ ನೀಡಿದರು ಗೌತಮಬುದ್ಧರು ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಹೇಳಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಭಗವಾನ್ ಬುದ್ಧ ಜಯಂತ್ಯುತ್ಸವ ಅಂಗವಾಗಿ ಭಗವಾನ್ ಬುದ್ಧ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಸಮಾಜದಲ್ಲಿ ಮೌಢ್ಯತೆ, ಅಸಮಾನತೆ, ದೌರ್ಜನ್ಯ ಮುಂತಾದ ಅನೇಕ ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದವು . ಇಂತಹವುಗಳ ವಿರುದ್ಧವಾಗಿ ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸಮಾನತೆ, ಪ್ರೀತಿ ವಿಶ್ವಾಸಗಳನ್ನು ಮೂಡಿಸಿದರು ಬುದ್ಧ. ರಾಜಮನೆತನದಲ್ಲಿ ಹುಟ್ಟಿದರು ಕೂಡ ಸರ್ವವೂ ತ್ಯಾಗ ಮಾಡಿ, ಬೋಧಿವೃಕ್ಷದ ಕೆಳಗೆ ತಪಸ್ಸು ಮಾಡಿ ಜ್ಞಾನವನ್ನು ಪಡೆದರು. ದೇಶದ ಹಲವೆಡೆ ಸಂಚಾರ ಕೈಗೊಂಡು ತಮ್ಮ ತತ್ವಗಳನ್ನು ಬೋಧಿಸಿದರು. ಜಗತ್ತಿನಲ್ಲಿ ಏನೇ ಅನಾಹುತ ಆಗಲು ಆಸೆಯೇ ಕಾರಣ, ಆಸೆ ದುಃಖಕ್ಕೆ ಮೂಲ ಕಾರಣವಾಗಿದೆ, ಆಸೆ ಬೀಡುವುದರಿಂದ ದುಃಖ ಕಡಿಮೆಯಾಗುತ್ತದೆ ಹಾಗೂ ಆಸೆ ಹೋಗಬೇಕೆಂದರೆ ಅಷ್ಟಾಂಗ ಮಾರ್ಗ ಪಾಲನೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗೌತಮಬುದ್ಧರ ಭಾವಚಿತ್ರದ ರಥ ಮೆರವಣಿಗೆಗೆ ಸಚಿವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಸೇರಿದಂತೆ ಇತರರು ಉಪಷ್ಥಿತರಿದ್ದರು.

ರಥ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಹಾದು ಪೂಜ್ಯ ಚನ್ನಬಸವ ಪಟ್ಟದೇವರು ರಂಗಮAದಿರ ತಲುಪಿತು. ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಉದ್ಘಾಟಿಸಿ ಮಾತನಾಡಿ, ಭಗವಾನ್ ಬುದ್ಧರು ಸಮಾಜದಲ್ಲಿ ಮಾನವೀಯತೆ, ಸಮಾನತೆ, ಸಹಬಾಳ್ವೆಯಿಂದ ಜನರು ಬದುಕಲು ಮಾರ್ಗ ಹಾಕಿಕೊಟ್ಟಿದ್ದಾರೆ. ನಾವೆಲ್ಲರೂ ಸರಳತೆಯ ಜೀವನವನ್ನು ಅನುಸರಿಸಬೇಕು ಮತ್ತು ಪ್ರೀತಿ ವಿಶ್ವಾಸದಿಂದ ಕೂಡಿ ಬಾಳಬೇಕು. ಬುದ್ಧ,ಬಸವ, ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆದು ಉತ್ತಮವಾದ ಸಮಾಜವನ್ನು ಕಟ್ಟಬೇಕು ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲರು ಹಾಗೂ ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ವಿಠ್ಠಲದಾಸ ಪ್ಯಾಗೆ ಅವರು ಅತಿಥಿ ಉಪನ್ಯಾಸದಲ್ಲಿ ಮಾತನ್ನಾಡಿ ಬುದ್ಧರ ಜೀವನ ಹಾಗೂ ಬೌದ್ಧ ಧರ್ಮದ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಮಹಮ್ಮದ ಗೌಸ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಪೂಜ್ಯ ಭಂತ್ತೆ ಅಶೋಕ , ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ವಿಜಯಕುಮಾರ ಸೊನಾರೆ, ಮಾರುತಿ ಬೌದ್ಧೆ, ಅನೀಲ ಬೆಲ್ದಾರ, ಬಾಬು ಪಾಸ್ವಾನ್, ಕಾಶಿನಾಥ ಚೆಲುವ,ರಾಜಪ್ಪ ಗೂನಳ್ಳಿ, ತಾನಾಜಿ ಸಗರ, ಶಿವಶರಣಪ್ಪ ಹುಗ್ಗೆ ಪಾಟೀಲ್, ಓಂ ಪ್ರಕಾಶ್ ರೊಟ್ಟೆ, ಚಕ್ರಧರ ಹೊಸಳಿ ಸೇರಿದಂತೆ ಸಮಾಜದ ವಿವಿಧ ಮುಖಂಡರು ಉಪಸ್ಥಿತರಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3