ಬೀದರ್: ನವ ಭಾರತ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ಡಾ. ರೇಣುಕಾ ಸ್ವಾಮಿ ಹೇಳಿದರು.
ಬೀದರ್ ನಗರದ ಅಲ್ಲಮಪ್ರಭು ನಗರದಲ್ಲಿ ಭಾನುವಾರ ಅಕ್ಕ ಮಹಾದೇವಿ ಮಹಿಳಾ ಸಂಘ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ನಡೆದ ಧಾರ್ಮಿಕ ಚಳುವಳಿ ಮಹಿಳಾ ವಿನೋಚನಾ ದೃಷ್ಟಿಯಿಂದ ಮಾದರಿಯಾಗಿದೆ. ಹೆಣ್ಣು ಮಾಯೆ ಎಂಬುರು “ಹೆಣ್ಣು ಮಾಯೆ ಅಲ್ಲ, ಮನದ ಮುಂದಣ ಆಸೆಯೇ ಮಾಯೆ” ಎಂದು ಅಲ್ಲಮ ಪ್ರಭುಗಳು ತಿಳಿಸಿದರು. “ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ” ಎಂದು ಜೇಡರ ದಾಸಿಮಯ್ಯ, “ಹೆಣ್ಣು ಸಾಕ್ಷಾತ್ ಮಹಾದೇವಿ” ಎಂದು ಬಸವಣ್ಣ ಹೇಳಿದರು ಎಂದು ತಿಳಿಸಿದರು.
ಡಾ. ಶೈಲಜಾ ಮಾತನಾಡಿ ಹೆಣ್ಣು ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಎಂದರು. ಈಶ್ವರಮ್ಮ ಮಾತನಾಡಿ ಮಹಿಳೆ ಕಷ್ಟಗಳನ್ನು ಎದುರಿಸಿ ಸಹನಶೀಲಳಾಗಿ ಒಳ್ಳೆ ಸಂಸ್ಕಾರ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಧಕ ಮಹಿಳೆ ಸುನಿತಾ ಹಾಗೂ ಸಂಗೀತಾ ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ಎಎಸ್ಐ ಸಂಗೀತಾ, ರತ್ನಮ್ಮ ಅಣ್ಯೆಪ್ಪ ಶೇರಿಕಾರ, ಈಶ್ವರಮ್ಮ ಮತ್ತಿತರರು ಇದ್ದರು. ಕುಮಾರಿ ಸಂಗೀತಾ ಸ್ವಾಗತಿಸಿದರು. ಸುಧಾರಾಣಿ ಬಿರಾದಾರ ನಿರೂಪಿಸಿದರು. ಅಶ್ವಿನಿ ಪಾಟೀಲ ವಂದಿಸಿದರು.
——————