ವಿನಯಕ್ಕೆ ಪರಮಾತ್ಮನ ಒಲುಮೆ
ಬೀದರ್: ವಿನಯಕ್ಕೆ ಪರಮಾತ್ಮ ಒಲಿಯುತ್ತಾನೆ ಎಂದು ಡಾ. ದೇವಕಿ ನಾಗೂರೆ ಹೇಳಿದರು.
ನಗರದ ಹುಡ್ಕೋ ಕಾಲೊನಿಯಲ್ಲಿ ನಡೆದ ಶ್ರಾವಣ ಪ್ರವಚನ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಿನಯವನ್ನು ದೇವರು ಇಷ್ಟಪಡುತ್ತಾನೆ. ಅಂತೆಯೇ ಶರಣರು ಸದುವಿನಯವೇ ಸದಾಶಿವನ ಒಲುಮೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಬಸವಾದಿ ಶರಣರ ಹೃದಯದಲ್ಲಿ ಪ್ರೀತಿ, ಮನದಲ್ಲಿ ದಯೆ ಹಾಗೂ ನುಡಿಯಲ್ಲಿ ವಿನಯ ತುಂಬಿರುತ್ತಿತ್ತು. ಅವರು ದೇವರು ಮೆಚ್ಚುವ ರೀತಿಯಲ್ಲಿ ಬದುಕಿದ್ದರು. ಶರಣರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶರಣಯ್ಯ ಸ್ವಾಮಿ ಸಾನಿಧ್ಯ ವಹಿಸಿದ್ದರು. ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಶಾಂತ ದೊಡ್ಡಿ, ಅಕ್ಕಮಹಾದೇವಿ ಸಾಂಸ್ಕøತಿಕ ಸಂಘದ ಅಧ್ಯಕ್ಷೆ ಸೂಗಮ್ಮ ಜಿರೋಬೆ, ಸಾಹಿತಿ ಪುಣ್ಯವತಿ ವಿಸಾಜಿ, ಅನುಭವ ಮಂಟಪದ ಸಾಂಸ್ಕøತಿಕ ವಿದ್ಯಾಲಯದ ಸಂಚಾಲಕಿ ಸುವರ್ಣಾ ಚಿಮಕೋಡೆ, ಜೇರಪ್ಪ ಮಮದಾಪುರೆ, ಸುನೀತಾ ಕೂಡ್ಲಿಕರ್ ಇದ್ದರು.
ಕಸ್ತೂರಿ ಸ್ವಾಮಿ ವಚನ ಗಾಯನ ಮಾಡಿದರು. ರಾಜಶ್ರೀ ಶೀಲವಂತ ನಿರೂಪಿಸಿದರು. ಸುನೀತಾ ಜಿರೋಬೆ ಸ್ವಾಗತಿಸಿದರು. ಹೇಮಲತಾ ವೀರಶೆಟ್ಟಿ ವಂದಿಸಿದರು.
