ಕಮಲನಗರ ಮತ್ತು ಔರಾದ ತಾಲೂಕಿನಲ್ಲಿ ಅತಿಯಾದ
ಮಳೆಯಿಂದಾಗಿ ಹಾನಿಯಾದ ಗ್ರಾಮಗಳಿಗೆ ಸಚಿವರು ಭೇಟಿ:
ಮಳೆಯಿಂದಾಗಿ ಹಾನಿಯಾದ ಗ್ರಾಮಗಳಿಗೆ ಸಚಿವರು ಭೇಟಿ:
ತ್ವರಿತವಾಗಿ ಪರಿಹಾರ ನೀಡಲಾಗುವುದು- ಸಚಿವ ಈಶ್ವರ ಬಿ.ಖಂಡ್ರೆ
ಬೀದರ್ : ಕಮಲನಗರ ಮತ್ತು ಔರಾದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ಪ್ರದೇಶಗಳ ಪರಿಶೀಲನೆ ನಡೆಸಿ, ತ್ವರಿತವಾಗಿ ಪರಿಹಾರ ನೀಡಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಹೇಳಿದರು.
ಅವರಿಂದು ಸೋಮವಾರ ಕಮಲನಗರ ಮತ್ತು ಔರಾದ ತಾಲೂಕಿನಲ್ಲಿ ಸುರಿದ ಮಳೆಯ ವಿಕೋಪದಿಂದ ಮನೆ ಹಾನಿ, ಪ್ರಾಣಿ ಹಾನಿ, ಬೆಳೆ ಹಾನಿ, ಸೇತುವೆ ಮತ್ತು ಕೆರೆಕಟ್ಟೆ ಹಾನಿಯಾದ ಸ್ಥಳ ವೀಕ್ಷಣೆ ಮಾಡಿದರು.
ಕಮಲನಗರ ತಾಲೂಕಿನ ಅಕನಾಪೂರನ ಎಂ.ಐ ಟ್ಯಾಂಕ್ ಕೆರೆಯ ವೀಕ್ಷಿಸಿ, ರೈತರ ಸಮಸ್ಯೆ ಆಲಿಸಿದರು.
ಅವರಿಂದು ಸೋಮವಾರ ಕಮಲನಗರ ಮತ್ತು ಔರಾದ ತಾಲೂಕಿನಲ್ಲಿ ಸುರಿದ ಮಳೆಯ ವಿಕೋಪದಿಂದ ಮನೆ ಹಾನಿ, ಪ್ರಾಣಿ ಹಾನಿ, ಬೆಳೆ ಹಾನಿ, ಸೇತುವೆ ಮತ್ತು ಕೆರೆಕಟ್ಟೆ ಹಾನಿಯಾದ ಸ್ಥಳ ವೀಕ್ಷಣೆ ಮಾಡಿದರು.
ಕಮಲನಗರ ತಾಲೂಕಿನ ಅಕನಾಪೂರನ ಎಂ.ಐ ಟ್ಯಾಂಕ್ ಕೆರೆಯ ವೀಕ್ಷಿಸಿ, ರೈತರ ಸಮಸ್ಯೆ ಆಲಿಸಿದರು.

ಮುತಖೇಡನಲ್ಲಿ ಬೆಳೆ ಹಾನಿ ವೀಕ್ಷಿಸಿ, ನಂದಿ ಬೀಜಲಗಾಂವ್ ಬ್ರಿಡ್ಜ್ ಮತ್ತು ಮನೆ ಹಾನಿ ವೀಕ್ಷಿಸಿದರು. ಔರಾದ ತಾಲೂಕಿನ ಬಾವಲಗಾಂವ, ಹಂಗರಗಾ, ಸಾವರಗಾಂವ, ಬೋಂತಿ ಗಾಮಾನಾಯಕ ತಾಂಡಾ ಗಳ ಬೆಳೆ ಹಾನಿ, ರಸ್ತೆ, ಮನೆ, ಸೇತುವೆ ಮುಂತಾದವುಗಳನ್ನು ವೀಕ್ಷಿಸಿ ಮಾತನಾಡಿದ ಸಚಿವರು ಕಮಲನಗರ ಮತ್ತು ಔರಾದ ತಾಲೂಕಿನಲ್ಲಿ 300 ಎಂಎA ಮಳೆಯಾಗಿದ್ದು, ಇದರಿಂದಾಗಿ ಅನೇಕ ರೀತಿಯ ಹಾನಿಗಳು ಉಂಟಾಗಿವೆ ಎಂದರು. ರಸ್ತೆ, ಮನೆ, ಸೇತುವೆ ಮುಂತಾದವುಗಳು ಹಾನಿಗೊಳಗಾಗಿವೆ ಮತ್ತು ಇವುಗಳನ್ನು ತಕ್ಷಣ ಪರಿಹರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅತಿಯಾದ ಮಳೆಯಿಂದಾಗಿ ರೈತರ ಬೆಳೆಗಳಾದ ಹೆಸರು ಉದ್ದು, ಸೋಯಾ, ತೊಗರಿ ಹೆಚ್ಚು ಹಾನಿಯಾಗಿವೆ. ಆದರೆ ರೈತರು ಯಾವುದೇ ಆತಂಕ ಪಡಬೇಕಾಗಿಲ್ಲ, ತ್ವರಿತವಾಗಿ ಪರಿಹಾರ ನೀಡಲಾಗುವುದು ಎಂದರು. ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ಅಡಿಯಲ್ಲಿ ನಿರಾವರಿ ಭೂಮಿಗೆ 18,000 ಹಾಗೂ ಒಣ ಭೂಮಿಗೆ 8,500 ರೂ. ಪ್ರತಿ ಹೆಕ್ಟೇರ್ ಗೆ ಪರಿಹಾರ ನೀಡಲಾಗುವುದು. ಸಮೀಕ್ಷೆಗೆ ಈಗಾಗಲೇ ಆದೇಶ ನೀಡಲಾಗಿದೆ ಹಾಗೂ ಗ್ರಾಮ ಸಭೆ ಮೂಲಕ ಜನರ ಸಮಸ್ಯೆಗಳನ್ನು ಕೃಢೀಕರಿಸಿ, ಪರಿಹರಿಸಲು ತಿಳಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಅವರಿಗೆ ಜಿಲ್ಲೆಯಲ್ಲಿ ಮಳೆಯಿಂದ ಆದ ಹಾನಿಯ ಬಗ್ಗೆ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಾವಲಗಾಂವ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿ, ಶಾಲೆಯಲ್ಲಿ ಕನ್ನಡ ಕಲಿಕೆ ಹೆಚ್ಚಾಗಬೇಕು ಎಂದು ಮುಖ್ಯ ಶಿಕ್ಷಕರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ, ಬೀದರ ಸಹಾಯಕ ಆಯುಕ್ತ ಮೊಹಮದ್ ಶಕೀಲ್, ಕಮಲನಗರ ಮತ್ತು ಔರಾದ ತಹಶೀಲ್ದಾರರು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
*****
