“ಜಗತ್ತನ್ನು ಗೆಲ್ಲಬೇಕಾದರೆ ಕೇವಲ ಶಿಕ್ಷಣವೇ ಮಾರ್ಗ” — ಪ್ರೊ. ಪರಮೇಶ್ವರ ನಾಯಕ
ಬೀದರ್, ಅಖಿಲ ಭಾರತೀಯ ಶಿಕ್ಷಾ ಸಂಬAಧಿತ ವಿದ್ಯಾಭಾರತಿ ಕರ್ನಾಟಕ, ಬೀದರ ಜಿಲ್ಲೆ ವತಿಯಿಂದ ಜಿಲ್ಲಾ ಗಣಿತ-ವಿಜ್ಞಾನ ಮೇಳ ಹಾಗೂ ಸಂಸ್ಕೃತಿ ಮಹೋತ್ಸವವು ಮಂಗಳವಾರ ನಗರದ ಸರಸ್ವತಿ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಪರಮೇಶ್ವರ ನಾಯಕ ಅವರು ಮಾತನಾಡಿ, “ಜಗತ್ತನ್ನು ಗೆಲ್ಲಬೇಕಾದರೆ ಅದು ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ವೈದ್ಯರು ಅಥವಾ ಇಂಜಿನಿಯರ್‌ಗಳಾಗುವುದರ ಪೂರಕವಾಗಿ ವಿಜ್ಞಾನಿಗಳಾಗಬೇಕು. ವಿಜ್ಞಾನಿಗಳಾಗಲು ಸಂಶೋಧನಾ ಮನೋಭಾವವನ್ನು ಈಗಿನಿಂದಲೇ ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.

ಅವರು ಮುಂದುವರೆದು, ವಿದ್ಯಾರ್ಥಿ ಜೀವನದಲ್ಲಿ ಧನಾತ್ಮಕ ಚಿಂತನೆ, ಉನ್ನತ ಗುರಿ ಹಾಗೂ ಪ್ರಾಯೋಗಿಕ ದೃಷ್ಟಿಕೋನ ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಹಿತವಚನ ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಕಾರ್ಯದರ್ಶಿ ಹನುಮಂತರಾವ ಪಾಟೀಲ ಅವರು, ವಿದ್ಯಾರ್ಥಿಗಳು ವೈಜ್ಞಾನಿಕ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷರಾಗಿ ಮಾತನಾಡಿದ ವಿದ್ಯಾಭಾರತಿಯ ಜಿಲ್ಲಾ ಅಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ, ವಿದ್ಯಾಭಾರತಿ ನಡೆಸುವ ಜ್ಞಾನ-ವಿಜ್ಞಾನ ಮೇಳವು ವಿದ್ಯಾರ್ಥಿಗಳನ್ನು ಭವಿಷ್ಯದ ವಿಜ್ಞಾನಿಗಳಾಗಿ ರೂಪಿಸುವ ಮಹತ್ವದ ವೇದಿಕೆ ಎಂದು ಹೇಳಿದರು. ಜಿಲ್ಲಾ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ಸೆಪ್ಟೆಂಬರ್ 5 ರಿಂದ 7 ರವರೆಗೆ ಮೈಸೂರಿನಲ್ಲಿ ನಡೆಯಲಿರುವ ಪ್ರಾಂತ ಮಟ್ಟದ ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಕಾರ್ಯದರ್ಶಿ ಭಗುಸಿಂಗ್ ಜಾಧವ್ ಅವರು ಮೇಳದ ಉದ್ದೇಶವನ್ನು ವಿವರಿಸಿದರು. ಸಮಾರೋಪದಲ್ಲಿ ಉಪಾಧ್ಯಕ್ಷ ನಾಗೇಶ ಚಿನ್ನಾರೆಡ್ಡಿ ಅವರು ವಿದ್ಯಾರ್ಥಿಗಳು ಸೋಲು-ಗೆಲುವಿಗೆ ಮೀರಿದ ಪ್ರಯತ್ನಶೀಲ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ವಿಜೇತರಾದ ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯಾಭಾರತಿ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಶು ವಿಭಾಗದಲ್ಲಿ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯು ಅತಿ ಹೆಚ್ಚು ಪ್ರಶಸ್ತಿ ಪಡೆದ ಪ್ರಯುಕ್ತ ಶಾಲಾ ಸರ್ವಶ್ರೇಷ್ಠ ಪ್ರಶಸ್ತಿಯನ್ನು ಮಾನನೀಯ ಅತಿಥಿಗಳಾದ ಶ್ರೀ ಗಣಪತಿ ಸೋಲಪುರ ಅವರು ವಿತರಿಸಿದರು. ಬಾಲ ವಿಭಾಗದಲ್ಲಿ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯು ಅತಿ ಹೆಚ್ಚು ಪ್ರಶಸ್ತಿ ಪಡೆದ ಪ್ರಯುಕ್ತ ಶಾಲಾ ಸರ್ವಶ್ರೇಷ್ಠ ಪ್ರಶಸ್ತಿಯನ್ನು ಮಾನನೀಯ ಅತಿಥಿಗಳಾದ ಶ್ರೀಮತಿ ಗೀತಾ ಗಡ್ಡಿ ಅವರು ವಿತರಿಸಿದರು ಹಾಗೂ ಕಿಶೋರ ವಿಭಾಗದಲ್ಲಿ ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯು ಅತಿ ಹೆಚ್ಚು ಪ್ರಶಸ್ತಿ ಪಡೆದ ಪ್ರಯುಕ್ತ ಶಾಲಾ ಸರ್ವಶ್ರೇಷ್ಠ ಪ್ರಶಸ್ತಿಯನ್ನು ಮಾನನೀಯ ಶ್ರೀ ನಾಗೇಶ ಚಿನ್ನಾರೆಡ್ಡಿ ಅವರು ವಿತರಿಸಿದರು. ಶ್ರೀ ಮಡಿವಾಳೇಶ್ವರ ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀ ಶಿವಶರಣಪ್ಪಾ ಪಾಟೀಲರು ಕಾರ್ಯಕ್ರಮವನ್ನು ನಿರೂಪಿಸಿದರೆ, ಅದೇ ಶಾಲೆಯ ಸಹ-ಶಿಕ್ಷಕಿ ಶ್ರೀಮತಿ ಚೆನ್ನಮ್ಮ ಪಾಂಚಾಳ ಅವರು ವಂದನೆಗಳನ್ನು ಸಲ್ಲಿಸಿದರು.
