ಬಸವ ನಗರದಲ್ಲಿ ಶ್ರೀ ಗುರು ಬಸವ ಚರಿತ್ರೆ ಪ್ರವಚನ ಸಮಾರೋಪ
ಬೀದರ್ :– ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಸವನಗರ ಬಡಾವಣೆಯ ಉದ್ಯಾನದಲ್ಲಿ, ನೀಲಮ್ಮನ ಬಳಗದ ವತಿಯಿಂದ ಆಯೋಜಿಸಲಾದ **“ಶ್ರೀ ಗುರು ಬಸವ ಚರಿತ್ರೆ ಪ್ರವಚನ”**ದ ಒಂದು ತಿಂಗಳ ಪ್ರವಚನ ಸರಣಿಯ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.
ಸಮಾರಂಭದಲ್ಲಿ ಮಾತನಾಡಿದ ಶರಣೆಯಾದ ವಿದ್ಯಾವತಿ ಬಿ. ಉಂಡೆ ಅವರು, “ವಿಶ್ವಗುರು ಬಸವಣ್ಣನವರ ವಚನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಜೀವನದಲ್ಲಿ ದುಃಖಗಳು ಬರುವುದಿಲ್ಲ. ಎಲ್ಲರೂ ಪ್ರಾಮಾಣಿಕರಾಗಿದ್ದುಕೊಂಡು ಕಾಯಕ ಜೀವನ ನಡೆಸಬೇಕು. ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಉಪ್ಪಿನ ಅವರು, “ಮಹಿಳೆಯರು ಒಗ್ಗಟ್ಟಾಗಿ ನೀಲಮ್ಮನ ಬಳಗವನ್ನು ಕಟ್ಟಿಕೊಂಡು, ಭಜನೆ ಮತ್ತು ಪ್ರವಚನದಂತಹ ಚಟುವಟಿಕೆ ನಡೆಸುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು. ಮಹಾನಂದ ಸ್ವಾಗತಿಸಿದರು, ರಾಣಿಯವರು ವಂದಿಸಿದರು ಸಮಾರಂಭದಲ್ಲಿ ಆರ್ಟ್ ಗ್ಯಾಲರಿಯ ನಿವೃತ್ತ ಚಿತ್ರಕಲಾ ಶಿಕ್ಷಕರಾದ ಚಂದ್ರಶೇಖರ ಸೋಮಶೆಟ್ಟಿ ಅವರಿಗೆ ವಿಶೇಷ ಸನ್ಮಾನ ಸಲ್ಲಿಸಲಾಯಿತು. ಬಡಾವಣೆಯ ಹಿರಿಯ ನಾಗರಿಕರಿಗೂ ಗೌರವಿಸಲಾಯಿತು.
ಬಸವರಾಜ ಉಂಡೆ, ಸುಧೀರ್ ರಾಗಾ, ಶರಣಪ್ಪ ಗುಣವಂತ, ವಿಜಯಕುಮಾರ ಪಾಟೀಲ, ಬಸಣ್ಣ ಬುಡ್ಡಾನೋರ, ಬೆಟ್ಟದ, ಮಮತಾ, ಆಶಾ, ವನಮಾಲಾ, ಕವಿತಾ, ವಿದ್ಯಾವತಿ ಪಾಟೀಲ, ಮಂಗಳ, ರತ್ನಮ್ಮ, ಹರಿಯಾಲ, ಶಕುಂತಲಾ, ಬಸಗೊಂಡ, ರಾಜೇಶ್ವರಿ ಹೆಗ್ಗೆ, ಸವಿತಾ ಬುಡ್ಡಾ, ತನ್ವಿ, ಸಂಗೀತಾ ಪಾಟೀಲ, ಚಿತ್ರಕಲಾ ಅನಿತಾ ಮೊಳಕೇರಿ, ಶ್ರೀದೇವಿ ಹಾಗೂ ಅನೇಕ ಭಕ್ತರು ಹಾಜರಿದ್ದರು.
