Friday, January 16, 2026
HomePopularಇಂದಿನ ಯಾಂತ್ರಿಕ ಬದುಕಿನಲ್ಲಿ ಶಾಂತಿ, ನೆಮ್ಮದಿ, ಸಮಾಧಾನ ದೊರಕಬೆಕಾದರೆ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು - ವಿವೇಕ ದೀಪಕ...

ಇಂದಿನ ಯಾಂತ್ರಿಕ ಬದುಕಿನಲ್ಲಿ ಶಾಂತಿ, ನೆಮ್ಮದಿ, ಸಮಾಧಾನ ದೊರಕಬೆಕಾದರೆ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು – ವಿವೇಕ ದೀಪಕ ವಾಲಿ

ಇಂದಿನ ಯಾಂತ್ರಿಕ ಬದುಕಿನಲ್ಲಿ ಶಾಂತಿ, ನೆಮ್ಮದಿ, ಸಮಾಧಾನ ದೊರಕಬೆಕಾದರೆ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು -ವಿವೇಕ ದೀಪಕ ವಾಲಿ

ಬೀದರ್ : ಇಂದಿನ ಯಾಂತ್ರಿಕ ಬದುಕಿಗೆ ಶಾಂತಿ, ನೆಮ್ಮದಿ, ಮತ್ತು ಸಮಾಧಾನ ದೊರಕಬೆಕಾದರೆ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು. ಮತ್ತು ಸಾಮೂಹಿಕವಾಗಿ ಭಜನೆಗಳಲ್ಲಿ ಭಗವಹಿಸಬೇಕೆಂದು ಕೋವಿಡ್ ಯುದ್ಧ ಸೇನಾನಿ ಪುರಸ್ಕೃತರಾದ ವಿವೇಕ ದೀಪಕ ವಾಲಿ ನುಡಿದರು.
ಅವರು ಶನಿವಾರ ರಾತ್ರಿ ಬೀದರ ನಗರದ ಹಳೆ ಪ್ರದೇಶದಲ್ಲಿರುವ ಶ್ರೀ ಮಹಾಸಿದ್ಧ ಮಡಿವಾಳೇಶ್ವರ ಮಂದಿರದಲ್ಲಿ ಶ್ರೀ ಮಹಾಸಿದ್ಧ ಮಡಿವಾಳೇಶ್ವರ ಮಂದಿರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಮಂದಿರದ 40ನೇ ಜಾತ್ರಾ ಮಹೋತ್ಸವ ಶ್ರಾವಣ ಸಮಾಪ್ತಿ ನಿಮಿತ್ಯದ ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ, ತತ್ವಪದ, ಹಾಡುಗಳ ಗಾಯನ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತಿದ್ದರು.

ಅಜೀತ ಚಿಲ್ಲರ್ಗಿ ಅವರು ಮಾತನಾಡಿ, ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳ ಮೊರೆ ಹೋಗದೆ ಆನ್‌ಲೈನ್ ಗೇಮಿಂಗ್ ಆಡದೇ ಪ್ರಾರ್ಥನೆ, ಭಜನೆಗಳಂತಹ ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಏಕಾಗ್ರತೆ ಸಮಚಿತ್ತ ಭಾವ ಬೆಳೆಸಿಕೊಳ್ಳುವುದರ ಮೂಲಕ ಸುಭದ್ರ ರಾಷ್ಟç ನಿರ್ಮಾಣಕ್ಕೆ ದುಡಿಯಬೇಕೆಂದು ಕರೆ ನೀಡಿದರು.
ಗಣಪತಿ ಸಕ್ರೆಪ್ಪನೋರ್ ಮಾತನಾಡಿ, ರಾಷ್ಟçಭಕ್ತಿ, ರಾಷ್ಟçಪ್ರೇಮ ಪ್ರತಿಯೊಬ್ಬರೂ ಹೊಂದಿ ದೇಶಕ್ಕಾಗಿ ಸಮರ್ಪಣೆೆ ಭಾವದಿಂದ ದುಡಿಯಬೇಕು ಎಂದು ಕರೆ ನೀಡಿದರು. ಆನಂದ ಕಂದಗುಳ, ಭಾಗ್ಯವಂತಿ ಮೋಟಾರ್ ಡ್ರೆöÊವಿಂಗ್ ಪ್ರಾಂಶುಪಾಲ ಶಿವರಾಜ ಜಮಾದಾರ, ಅನೀಲ ಪೋಲಾ, ಅವರುಗಳು ಮಾತನಾಡಿ, ಶ್ರಾವಣ ಮಾಸ ಕಾಲ ಯುವಕ-ಯುವತಿಯರು ಸತ್ಸಂಗ ಮಾಡಬೇಕೆಂದರು. ಪತ್ರಕರ್ತ ಸುನೀಲ ಭಾವಿಕಟ್ಟಿ, ಚಂದ್ರಕಾಂತ ಹಳ್ಳಿಖೇಡಕರ, ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕಲಾವಿದ ನಾಗಶೆಟ್ಟಿ ಧರಮಪುರ ಭಜನೆ ಹಾಡುಗಳು, ತತ್ವಪದಗಳನ್ನು ಹಾಡಿದರು. ಶ್ರೀಮತಿ ಶಾಂತಮ್ಮ, ಶ್ರೀಮತಿ ಈರಮ್ಮ, ಶ್ರೀಮತಿ ಸಂಗಮ್ಮ, ಸರಸ್ವತಿ ಚಿಲ್ಲರ್ಗಿ, ಹಾಡುಗಳನ್ನು ಹಾಡಿದರು. ಶರಣು ರಾಂಪೂರೆ, ಅಂಬ್ರೇಶ ವಿಜಯಕುಮಾರ ಕೋತಮೀರ್, ಶಿವಕುಮಾರ ಬಸವರಾಜ ಕಮಠಾಣೆ ತಬಲಾ ವಾದನೆ ಮಾಡಿದರು. ರಾಜಕುಮಾರ ಕಮಠಾಣೆ, ವೆಂಕಟೇಶ ರಮೇಶ ದೇವತರಾಜ, ದಮಡಿ ವಾದನ ಮಾಡಿ ಹಾಡುಗಳನ್ನು ಹಾಡಿದರು. ವಿನಾಯಕ ಕೋತಮಿರ್, ಶಿವಕುಮಾರ ಕೋತಮಿರ್ ಸೇರಿದಂತೆ ಅನೇಕರು ಇಡೀ ರಾತ್ರಿಯ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಸುಮಾರು ನೂರಕ್ಕೂ ಹೆಚ್ಚು ಸಾಧಕರನ್ನು ಗೌರವಿಸಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಮೊದಲಿಗೆ ತಿಪ್ಪಯ್ಯ ಸ್ವಾಮಿ ಚಾಂಬೋಳ ಸ್ವಾಗತಿಸಿದರು. ಡಾ. ಧನರಾಜ ಧರಮಪುರ ನಿರೂಪಿಸಿದರು. ಚನ್ನಪ್ಪ ಧತ್ತರಗಿ ಕೊನೆಯಲ್ಲಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3