Friday, January 16, 2026
HomePopularನಮ್ಮ ಓದು ವಿಸ್ತಾರವಾಗಬೇಕು - ಡಾ. ಪುರುಷೋತ್ತಮ ಬಿಳಿಮಲೆ

ನಮ್ಮ ಓದು ವಿಸ್ತಾರವಾಗಬೇಕು – ಡಾ. ಪುರುಷೋತ್ತಮ ಬಿಳಿಮಲೆ

ನಮ್ಮ ಓದು ವಿಸ್ತಾರವಾಗಬೇಕು – ಡಾ. ಪುರುಷೋತ್ತಮ ಬಿಳಿಮಲೆ

ಬೀದರ್ : ಇತ್ತೀಚಿನ ದಿನಗಳಲ್ಲಿ ಕನ್ನಡ ಪಾಠ ಮಾಡುವ ಮೇಷ್ಟ್ರುಗಳಲ್ಲಿ ಸಹ ಓದುವ ಆಸಕ್ತಿ ತುಂಬಾಕಡಿಮೆಯಾಗಿದೆ. ಅದಕ್ಕಾಗಿ ನಮ್ಮ ಓದು ವಿಸ್ತಾರವಾಗಬೇಕು. ವಿಷಯ ಕರಗತ ಮಾಡಿಕೊಳ್ಳಬೇಕು. ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ
ಅಭಿಪ್ರಾಯಪಟ್ಟರು.

ಅವರು ಬೀದರ ತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾ ಕನ್ನಡ ಸಾಹಿತ್ತಿನ ಕನ್ನಡ ಭವನದಲ್ಲಿ ಆಯೋಜಿಸಿದ ಓದುವ ಮಂಟಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ಓದು ಆರಂಭದಲ್ಲಿ ಶಿಲ್ಪ ರೂಪದಲ್ಲಿತ್ತು. ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿ ಇರುವಂತಹ ಒಂದು ಕಂಬದಲ್ಲಿ ಓದುವ ಚಿತ್ರವಿದೆ. ಅಲ್ಲಿ ಒಬ್ಬ ಓದುವುದು ಅವರ ಮುಂದೆ ಕೆಲವರು ಕುಂತು ಕೇಳುವುದು. ಅಂದರೆ 9ನೇ ಶತಮಾನದಲ್ಲಿ ಈ ಓದು ಎನ್ನುವುದು ಸಾಮಾಜಿಕ ಪ್ರಕ್ರಿಯೆಯಾಗಿತ್ತು ಎಂಬುದು ಈ ಚಿತ್ತದಿಂದ ತಿಳಿದು ಬರುತ್ತದೆ.

ಈ ಪರಂಪರೆ 11ನೇ ಶತಮಾನದವರಿಗೆ ಒಂದು ಪ್ರಕ್ರಿಯೆಯಾಗಿತ್ತು. ತದನಂತರದಲ್ಲಿ 12ನೇ ಶತಮಾನದಲ್ಲಿ ಅದು ಬದಲಾವಣೆಗೊಂಡು ಏಕಕಾಲಕ್ಕೆ ವಚನಸಾಹಿತ್ಯದ ಕಾಲಕ್ಕೆ ಓದುವುದರ ಜೊತೆಗೆ ಅದನ್ನು ಹಾಡುವ ಹಂತಕ್ಕೆ ತಲುಪಿತು. ಒಂದು ಹಾಡು ಹಾಡುವುದು ಮತ್ತು ಓದುವುದು ಎಂಬಂತೆ ಓದಿನ ರೀತಿಬದಲಾಯಿತು. ಇದರಿಂದಕೇಳುಗರ ಸಂಖ್ಯೆ ಹೆಚ್ಚಾಗುತ್ತದೆ.

ತದನಂತರದಲ್ಲಿ 14ನೇ ಶತಮಾನದ ಕಾವ್ಯವನ್ನು ಲಯದಲ್ಲಿ ಬರೆಯಲು ಪ್ರಾರಂಭಿಸಿದರು. ಓದುವ ಕ್ರಮವು ಪೂರ್ಣವಾಗಿ ಹಾಡುವ ಕ್ರಮವಾಗಿ ಬೆಳೆಯಿತು. ಅದಕ್ಕಾಗಿಯೇ ಗಮಕಿಗಳು ತಯಾರಾದರೂ ಕವಿ ಗಮಕಿಗಳು ಇಬ್ಬರು ಸೇರಿ ಒಂದು ಪದ್ಯದ ಅರ್ಥವನ್ನು ಹೇಳುವ ಮುಖಾಂತರ ಓದಿನ ಪಯಣ ನಡೆಯಿತು. ತದನಂತರದಲ್ಲಿ ಚಿತ್ರರೂಪ ಪಡೆಯಿತು. ಹೀಗೆ ಈ ಓದುವಿಕೆ ತನ್ನ ದಾರಿಯನ್ನು ಕಂಡುಕೊAಡಿತು ಇಂತಹ ಒಂದು ಪಯಣದದಾರಿಯನ್ನು ಇಂದಿನ ಓದುಗರು ಈ ಓದಿನ ದಾರಿಯನ್ನು ಹಿಡಿದು ಹೋದರೆ ಮಾತ್ರ ಓದಿನ ದಾರಿ ಸುಗಮವಾಗುತ್ತದೆ. ಈ ನಿಟ್ಟಿಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಇಂಥ ಓದುವ ಉತ್ತಮ ಕೆಲಸ ಮಾಡುತ್ತಿರುವುದು ಅಭಿನಂನಾರ್ಹವಾಗಿದೆ ಎಂದು ನುಡಿದರು.

ಕನ್ನಡಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಸಂತೋಷ ಹಾನಗಲ್ ಅವರು ಸಜಹಸ್ಪಂದಿಸಿ ಮಾತನಾಡುತ್ತ ಮಾತನಾಡುತ್ತ ‘ಓದುವ ಮಂಟಪ’ ಹೆಸರು ಅರ್ಥಪೂರ್ಣವಾಗಿದೆ. ಪುಸ್ತಕ ಖರೀದಿಸಿ ಇಕ್ಕುವುದು ಮಾತ್ರ ಕಂಡಿದ್ದೇವೆ. ಮನೆಯಲ್ಲಿ ಪುಸ್ತಕ ಬಹಳಷ್ಟು ಇಟ್ಟಿದ್ದಾರೆ ಆದರೆ ಓದುವಗೋಜಿಗೆ ಹೋಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಓದುವುದು ಕಡಿಮೆಯಾಗಿದೆ. ಸಾಹಿತ್ಯ ಪರಿಷತ್ತು ಇಂತಹ ಓದುವ ಕಾರ್ಯವನ್ನು ಆಯೋಜನೆ ಮಾಡುವ ಮುಖಾಂತರ ಸಾಹಿತಿಗಳಿಗೆ ಉತ್ತೇಜಿಸುವ ಕೆಲಸವಾಗುತ್ತಿದೆ ಆ ನಿಟ್ಟಿನಲ್ಲಿ ಮಾಣಿಕ ನೇಳಗೆ ಅವರ ಧ್ವನಿಯಾಗಿ ಕವನ ಸಂಕಲನದಲ್ಲಿ ಬೀದರ ಭಾವೈಕ್ಯತೆಯ ನಾಡು ಎಂಬ ಕವನ ಹೃದ್ಯವಾಗಿದ್ದು ಭಾವೈಕ್ಯತೆಯ ನಾಡಾದ ಕರ್ನಾಟಕ ವಿಶೇಷವಾಗಿ ಬೀದರ ಜಿಲ್ಲೆ ಈವತ್ತಿಗೂ ಕೋಮುವಾದವಾಗಲಿ, ಮತೀಯ ಕಲಹಗಳಾಗಲಿ ಇಲ್ಲಿ ಜರುಗುವುದಿಲ್ಲ ದನ್ನೆ ಈ ಸಂಕಲನ ಪ್ರಇದೌನಿಸಿದೆ ಎಂದು
ಕಾವ್ಯ ಕುರಿತು ಸುನಿತಾಎಸ್‌ದಾಡಗೆ (ಗೌಡರ್) ಅಭಿಪ್ರಾಯ ವ್ಯಕ್ತಡಿಸುತ್ತ ಅನೇಕರು ನಮ್ಮಲ್ಲಿ ಮುದ್ದಾಂ ಕವಿಗಳು ಸಿಗುತ್ತಾರೆ, ಆದರೆ ಮಾಣಿಕ ನೇಳಗೆ ಅವರು ಉದ್ದಾಂ ಕವಿಗಳಾಗಿದ್ದು ನಿರಂತರವಾಗಿ ವಿಶೇಷ ದಿನ, ವಿಶೇಷ ಘಟನೆ ಮೊದಲಾದವುಗಳನ್ನು ಕೇಂದ್ರವಾಗಿಡ್ಡುಕೊAಡು ಕಾವ್ಯ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ನಿತ್ಯಯಾಗಿದ್ದಾರೆ. ಅವರ ಕವನಗಳು ಸಹೃದಯರ ಮನ ಮುಟ್ಟುವಂತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆಲ್ಲೂಕು ಕಸಾಪ ಅಧ್ಯಕ್ಷರಾದ ಟಿ. ಎಮ್. ಮಚ್ಚೆಯವರು ಮಾತನಾಡುತ್ತ ಇಂದಿನ ಯಾಂತ್ರಕಯುಗದಲ್ಲಿ ಪುಸ್ತಕ ಓದುವುದು ಕಡಿಮೆಯಾದ ಕಾರಣ ಸಾಹಿತಿಗಳನ್ನು ಮತು ಓದುಗರನ್ನು ಒಂದು ಕಡೆ ಮುಖಾಮುಖಿಗೊಳಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಇವರಿಸಿದರು.
ಮಾಣಿಕ ನೇಳಗೆ ಅವರು ಕಾರ್ಯಕ್ರಮದಲ್ಲಿ ತಮ್ಮ 05 ಕವನ ಓದಿದದರು ಮತ್ತುಕಾವ್ಯ ಪ್ರೇರಣೆ ಕುರಿತು ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶಚನ್ನಶೆಟ್ಟಿ ಅವರುಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಅನೇಕ ಸಾಹಿತಿಗಳು, ಕಲಾವಿದರು ಭಾಗವಿಸಿದ್ದರು.

ಕಲ್ಯಾಣರಾವ ಚಳಕಾಪುರೆ ಸ್ವಾಗತಿಸಿದರೇ, ಜಗನ್ನಾಥ ಕಮಲಾಪುರೆ ನಿರೂಪಿಸಿದರು. ಯೋಗೇಂದ್ರ ಯದಲಾಪುರೆ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3