Friday, January 16, 2026
HomePopularಸ್ವಾತಂತ್ರ‍್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಹೋರಾಟಗಾರರನ್ನು ದೇಶ ಎಂದಿಗೂ ಮರೆಯಲಾರದು - ಸಚಿವ ಈಶ್ವರ ಬಿ.ಖಂಡ್ರೆ

ಸ್ವಾತಂತ್ರ‍್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಹೋರಾಟಗಾರರನ್ನು ದೇಶ ಎಂದಿಗೂ ಮರೆಯಲಾರದು – ಸಚಿವ ಈಶ್ವರ ಬಿ.ಖಂಡ್ರೆ

ಸ್ವಾತಂತ್ರ‍್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಹೋರಾಟಗಾರರನ್ನು ದೇಶ ಎಂದಿಗೂ ಮರೆಯಲಾರದು- ಸಚಿವ ಈಶ್ವರ ಬಿ.ಖಂಡ್ರೆ
ಬೀದರ್ :  ಸ್ವಾತಂತ್ರ‍್ಯಕ್ಕಾಗಿ ತ್ಯಾಗ-ಬಲಿದಾನ ಮಾಡಿದ ಹೋರಾಟಗಾರರನ್ನು ದೇಶ ಎಂದಿಗೂ ಮರೆಯಲಾರದು ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತç ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಹೇಳಿದರು.
ಅವರು ಶುಕ್ರವಾರ ಜಿಲ್ಲಾಡಳಿತ ಬೀದರ ವತಿಯಿಂದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರೊö್ಯÃತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟç ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
1947 ಆಗಸ್ಟ್ 15 ರಂದು ಬ್ರಿಟಿಷರ ದಾಸ್ಯದ ಮುಕ್ತಿ ಪಡೆದು, ಹೊಸ ಮನ್ವಂತರಕ್ಕೆ ನಾಂದಿ ಹಾಡಿದ ಐತಿಹಾಸಿಕ ದಿನವಾಗಿದೆ. ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಇತಿಹಾಸ ಅತ್ಯಂತ ರೋಚಕವಾಗಿದೆ. ಸತ್ಯ, ಶಾಂತಿ, ಅಹಿಂಸೆಯ ಸಾತ್ವಿಕ ಹೋರಾಟದಿಂದ ಸ್ವಾತಂತ್ರ‍್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು. 1857ರ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದಿAದ 1947 ರವರೆಗೆ ಅನೇಕ ಹೋರಾಟಗಳು, ಚಳುವಳಿಗಳು, ಸತ್ಯಾಗ್ರಹಗಳು ನಡೆದವು. ಸಿಪಾಯಿಗಳು, ಮಂದಗಾಮಿಗಳು, ತಿವ್ರಗಾಮಿಗಳು, ಕ್ರಾಂತಿಕಾರಿಗಳು ಮುಂತಾದವರು ಹೋರಾಟದ ಪ್ರತಿಫಲವಾಗಿ ನಮಗೆ ಸ್ವಾತಂತ್ರ‍್ಯ ದೊರಕಿದೆ ಎಂದರು.

ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಜವಾಹರ ಲಾಲ್ ನೆಹರು, ಸರ್ದಾರ್ ವಲ್ಲಭಭಾಯ್ ಪಟೇಲ್, ಸರೋಜನಿ ನಾಯ್ಡು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಬಾಲಗಂಗಾಧರ ತಿಲಕ್ ಮೊದಲಾದವರು ಈ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ್ದಾರೆ. ಅನೇಕ ಹೋರಾಟಗಾರರು ತಮ್ಮ ಯೌವನವನ್ನು ಜೈಲಿನಲ್ಲಿ ಕಳೆದಿದ್ದಾರೆ. 1857 ಸ್ವಾತಂತ್ರ‍್ಯ ಹೋರಾಟಕ್ಕೂ ಮೊದಲು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು ಹಾಗೂ ಇಂದು ಸಂಗೊಳ್ಳಿರಾಯಣ್ಣ ಹುಟ್ಟಿದ ದಿನ ಕೂಡ ಆಗಿದೆ ಎಂದರು. ಬೀದರ ಜಿಲ್ಲೆಯಲ್ಲಿ ಕೂಡ ಹಲವಾರು ಹೋರಾಟಗಾರರು ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ್ದಾರೆ. ಪ್ರಭುರಾವ ಕಂಬಳಿವಾಲೆ, ಆರ್.ವಿ.ಬಿಡಪ್ಪ, ರಾಮಚಂದ್ರ ವೀರಪ್ಪ ಹಾಗೂ ತಮ್ಮ ತಂದೆಯವರಾದ ಭಿಮಣ್ಣ ಖಂಡ್ರೆ ಮೊದಲಾದವರು ಸ್ವಾತಂತ್ರö್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಅವರೆಲ್ಲರಿಗೂ ನಾನು ಈ ಸಂದರ್ಭದಲ್ಲಿ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಬೀದರ ಜಿಲ್ಲೆ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಸೋದರತ್ವದ, ಭಾವೈಕ್ಯತೆಯ ಜೀವನ ಈ ಜಿಲ್ಲೆಯಲ್ಲಿ ಕಾಣಬಹುದು ಹಾಗೂ ಬಸವಾದಿ ಶರಣರ ನಾಡು. ಜಗತ್ತಿನ ಮೊದಲ ಪ್ರಜಾಪ್ರಭುತ್ವದ ಸಂಸತ್ತು ಎಂದು ಕರೆಸಿಕೊಳ್ಳುವ ಅನುಭವ ಮಂಟಪ ನಮ್ಮ ಜಿಲ್ಲೆಯಲ್ಲಿದೆ. ಇಲ್ಲಿ ಹಲವಾರು ಧರ್ಮ, ಜಾತಿ, ಜನಾಂಗಗಳಿದ್ದರು ನಾವೆಲ್ಲರೂ ಸಹೋದರರಂತೆ ಬಾಳುತ್ತಿದ್ದೇವೆ ಎಂದು ಹೇಳಿದರು.

ಬಂಧುಗಳೇ ದೇಶ 79ನೇ ಸ್ವಾತಂತ್ರö್ಯ ದಿನವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ವಿವಿಧ ಇಲಾಖೆಯಗಳ ಸಾಧನೆಯ ಸಿಂಹಾವಲೋಕನ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಪಕ್ಷಿನೋಟ ಬೀರಲು ನಾನು ಇಚ್ಛಿಸುತ್ತೇನೆ.
ಸರ್ಕಾರದ ಮಹತ್ವಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹಲಕ್ಷಿö್ಮÃ, ಅನ್ನಭಾಗ್ಯ, ಯುವನಿಧಿ ಯೋಜನೆಗಳು ಈಗಾಗಲೇ ಜಾರಿ ಮಾಡಲಾಗಿದ್ದು, ದೇಶಕ್ಕೆ ಮಾದರಿಯಾರುವ ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟ ಸುಧಾರಿಸುತ್ತಿವೆ ಮತ್ತು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿವೆ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳಿಗೆ 2300 ಕೋಟಿ ಬಳಕೆಯಿಂದಾಗಿ ಮತ್ತು ಅನ್ನಭಾಗ್ಯ ಯೋಜನೆಯಡಿ 11 ಲಕ್ಷ ಜನರಿಗೆ ಆಹಾರ ಧಾನ್ಯ ನೀಡಿ ಹಸಿವು ಮುಕ್ತ ಜಿಲ್ಲೆಯನ್ನಾಗಿ ಮಾಡಲಾಗಿದೆ ಹಾಗೂ ಗೃಹ ಲಕ್ಷ್ಮೀ ಯೋಜನೆಯಡಿ 3 ಲಕ್ಷ ಹೆಣ್ಣು ಮಕ್ಕಳಿಗೆ ಮಾಹೆ 2000 ರೂಪಾಯಿ ಅಂತೆ ಡಿ.ಬಿ.ಟಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ತಾವು ಸಚಿವರಾದ ಮೇಲೆ ಹಸಿರು ಹೊದುಕೆ ಹೆಚ್ಚಿಸಲು 35 ಲಕ್ಷ ಸಸಿಗಳನ್ನು ನೆಡಲಾಗಿದೆ ಹಾಗೂ ಕೆ.ಕೆ.ಆರ್.ಡಿ.ಬಿ ಯಿಂದ ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳಾದ ಬೀದರ, ಕಲಬುರ್ಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಹಸಿರು ಹೊದುಕೆ ಹೆಚ್ಚಿಸಲು 50 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ ಬರ್ಡ್ ಪಾರ್ಕ್, ಇಕೋ ಪಾರ್ಕ್, ಇಕೋ ಟೂರಿಸಂ ಪಾರ್ಕ್ ಮುಂತಾದವುಗಳನ್ನು ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ 36 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಸೆಂಟರ್ ಆರಂಭ ಮಾಡಲಾಗುವುದು ಮತ್ತು ಕ್ಯಾತ್ ಲ್ಯಾಬ್ ಗೆ ಆದಷ್ಟು ಬೇಗ ಕಾರ್ಡಿಯಾಲಾಜಿಸ್ಟ್ ಮತ್ತು ಟೆಕ್ನಿಷಿಯನ್ ಗಳನ್ನು ನೇಮಿಸಿ ಶೀಘ್ರದಲ್ಲೇ ಆರಂಭ ಮಾಡಲಾಗುವುದು ಎಂದರು. 48 ಕೋಟಿ ವೆಚ್ಚದಲ್ಲಿ ಜಿಲ್ಲಾಡಳಿತ ಸಂಕೀರ್ಣ 18 ತಿಂಗಳ ಒಳಗೆ ಪೂರ್ಣಗೊಳ್ಳಲಿದೆ ಹಾಗೂ ಚಿಟಗುಪ್ಪಾ, ಕಮಲನಗರ ಮತ್ತು ಹುಲಸುರನಲ್ಲಿ ಹೊಸ ಪ್ರಜಾ ಸೌಧ ನಿರ್ಮಾಣ ಮಾಡಲಾಗುವುದು ಎಂದರು.
ಒಂದು ವರ್ಷದೊಳಗೆ ಶಾಲೆಗಳ ಶೀತಲ ಅವಸ್ಥೆಯ ಕೊಣೆಗಳು ಇಲ್ಲದಂತೆ ಮಾಡಲಾಗುವುದು ಮತ್ತು ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ಮತ್ತು ಶಾಲಾಗಳ ನಿರ್ಮಾಣ ಮಾಡಲಾಗುವುದು ಹಾಗೂ ಖಾನಾಪುರದಲ್ಲಿ 31 ಕೋಟಿ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ನಿರ್ಮಾಣ ಮಾಡಲಾಗುವುದು. ನಿರಾವರಿ ಯೋಜನೆಯಡಿ ಕೆರೆಗಳ ಪುನಶ್ಚೇತನ ಮತ್ತು ಗೋದಾವರಿ ನದಿಯ ಮುಖಜ ವ್ಯವಸ್ಥೆ ನೀರನ್ನು ಬಳಸಿಕೊಂಡು ಕೃಷಿಗೆ ಮತ್ತು ಕುಡಿಯಲು ನೀರು ಬಳಸಿಕೊಳ್ಳಲಾಗುವುದು. ರಾಜ್ಯದ ಹಿತ, ಉತ್ತಮ ಆಡಳಿತ, ಜನರ ಜೀವನ ನಮ್ಮ ಗುರಿ. ಈ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಯುವಶಕ್ತಿಯು ರಾಷ್ಟ್ರದ ಶಕ್ತಿಯಾಗಿದ್ದು ದೇಶ ಅಭಿವೃದ್ಧಿಗೆ ಮತ್ತು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳಿಂದ ಸ್ವಾತಂತ್ರö್ಯ ದಿನಾಚರಣೆ ಕುರಿತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಸಂಸದ ಸಾಗರ ಈಶ್ವರ ಖಂಡ್ರೆ, ಬೀದರ ದಕ್ಷಿಣ ಶಾಸಕ ಡಾ. ಶೈಲೇಂದ್ರ ಕೆ.ಬೆಲ್ದಾಳೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಬೀದರ ನಗರ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿರೀಶ್ ಬದೋಲೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಅರಣ್ಯ ಉಪ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಪ್ರೋಬಿಷನರಿ ಐಎಎಸ್ ಅಧಿಕಾರಿ ರಮ್ಯಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3