ಮರಕುಂದಾ ಗ್ರಾಮ ಪಂಚಾಯತದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ
ಬೀದರ್ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಬೀದರ ಮತ್ತು ತಾಲೂಕ ಪಂಚಾಯತ ಬೀದರ, ಗ್ರಾಮ ಪಂಚಾಯತ ಮರಕುಂದಾ ಅವರ ಸಂಯುಕ್ತಾಶ್ರಯದಲ್ಲಿ ಆಗಸ್ಟ್. 11 ರಂದು ಮರಕುಂದಾ ಗ್ರಾಮ ಪಂಚಾಯತದಲ್ಲಿ ಶಾಶ್ವತ ಲೋಕ ಅದಾಲತನ ಮಹತ್ವ ಮತ್ತು ಅದರ ಕಾರ್ಯವೈಖರಿ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ನಡೆಯಿತು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಅರ್ಜುನ ಬನಸೋಡೆ ಕಾರ್ಯಕ್ರಮವನ್ನು ದೀಪ ಬೇಳಗುವುದರ ಮೂಲಕ ಉದ್ಛಾಟಿಸಿ ಅವರು ಶಾಶ್ವತ ಲೋಕ ಅದಾಲತನ ಮಹತ್ವ ಮತ್ತು ಅದರ ಕಾರ್ಯವೈಖರಿ ಬಗ್ಗೆ ಮಾತನಾಡಿದರು.
ನಂತರ ಮರಕುಂದಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಧಮಿಕ ಮತ್ತು ಪ್ರೌಢ ಉರ್ದು ಶಾಲೆಗೆ ಭೇಟಿ ನೀಡಿ ಶಾಲೆಯನ್ನು ವಿಕ್ಷಣೆ ಮಾಡಿದ್ದರು.

ಬೀದರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಷನ್ಮುಖಯ್ಯಾ ಬಿ.ಸ್ವಾಮಿ ಲೋಕ ಅದಾಲತ್‍ಗೆ ಸಂಬಂಧಿಸಿದಂತೆ ಹಾಗೂ ವಕೀಲ ಬಿ.ಎಸ್.ಪಾಟೀಲ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸವಲತ್ತುಗಳ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮರಕುಂದಾ ಗ್ರಾಮ ಪಂಚಾಯತ ಪಿಡಿಓ ಅನೀಲ ಕುಲಕರ್ಣಿ ಸೇರಿದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳು ಹಆಗೂ ಮರಕುಂದಾ ಗ್ರಾಮ ಪಂಚಾಯತ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.