ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹರ್ ಘರ ತಿರಂಗಾ ಕಾರ್ಯಕ್ರಮ – ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೀದರ ಜಿಲ್ಲೆಯಾದ್ಯಂತ ಹರ್ ಘರ ತಿರಂಗಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2025-26ನೇ ಸಾಲಿನ ಹರ್ ಘರ ತಿರಂಗಾ ಅಂಗವಾಗಿ ಮಾನ್ಯ ಕಾರ್ಯದರ್ಶಿ ಸಂಸ್ಕøತಿ ಮಂತ್ರಾಲಯ ಭಾರತ ಸರಕಾರರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮತ್ತು ರಾಷ್ಟ್ರೀಯಅನುಷ್ಠಾನ ಸಮಿತಿ ಅನುಮೋದಿಸಿರುವಂತೆ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಳ್ಳಲು ಭಾರತ ಸರ್ಕಾರವು ನಿರ್ಧರಿಸಿರುತ್ತದೆ.
2025-26ನೇ ಸಾಲಿನ ಹರ್ ಘರ ತಿರಂಗಾ ಅಂಗವಾಗಿ ಮಾನ್ಯ ಕಾರ್ಯದರ್ಶಿ ಸಂಸ್ಕøತಿ ಮಂತ್ರಾಲಯ ಭಾರತ ಸರಕಾರರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮತ್ತು ರಾಷ್ಟ್ರೀಯಅನುಷ್ಠಾನ ಸಮಿತಿ ಅನುಮೋದಿಸಿರುವಂತೆ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಳ್ಳಲು ಭಾರತ ಸರ್ಕಾರವು ನಿರ್ಧರಿಸಿರುತ್ತದೆ.
ಅದರಂತೆ ಜಿಲ್ಲೆಯಾದ್ಯಂತ ಅಭಿಯಾನ ದ್ವಿತೀಯ ಹಂತವು ದಿನಾಂಕ: 12-08-2025 ರವರೆಗೆ ನಡೆಯಲಿದ್ದು, ಈ ಹಂತದಲ್ಲಿ ತಿರಂಗಾ ಮಹೋತ್ಸವ ಎಂಬ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅದರಲ್ಲಿ ತಿರಂಗಾ ಮೇಳೆ ಮತ್ತು ತಿರಂಗಾ ಸಂಗೀತೋತ್ಸವ ಇರುತ್ತವೆ. ತಿರಂಗಾ ಮೇಳೆದಲ್ಲಿ ಹಾರಗಳು, ದ್ವಿಪದಿಗಳು, ಆಹಾರಗಳು, ವಸ್ತುಗಳು, ಕರಕುಶಲ ವಸ್ತುಗಳು ಇತ್ಯಾದಿ ಸ್ಥಳೀಯ ಉತ್ಪನ್ನ ಮಾರಾಟ ತಿರಂಗಾದಿಂದ ಮಾಡುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಿರಂಗಾ ಕುರಿತಾದ ಸೆಲ್ಪಿಗಳನ್ನು ಅಪ್ಲೋಡ್ ಮಾಡುವುದು. ತಿರಂಗಾ ಬೈಕ್, ಸೈಕಲ್ ಈ ರ್ಯಾಲಿಗಳು ಹಾಗೂ ಜನಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.. ತಿರಂಗಾ ಬಟ್ಟೆಗಳನ್ನು ಧರಿಸಿ ಮಾನವ ಸರಪಳಿಗಳನ್ನು ನಿರ್ಮಿಸುವುದು ಮತ್ತು ತಿರಂಗಾ ಧ್ವಜಗಳ ಮಾರಾಟ ಮತ್ತು ವಿತರಣೆ ಮಾಡುವುದು. ತಿರಂಗಾ ಸಂಗೀತೋತ್ಸವದಲ್ಲಿ ದೇಶಭಕ್ತಿ ಕುರಿತಾದ ಹಾಗೂ ಬಾವುಟದ ಘನತೆಯನ್ನು ಬಿಂಬಿಸುವ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಭಿಯಾನದ ತೃತೀಯ ಹಂತವು ದಿನಾಂಕ 13-08-2025 ರಿಂದ 15-08-2025 ರವರಿಗೆ ನಡೆಯಲಿದೆ, ಈ ಹಂತದಲ್ಲಿ ಮನೆ ಮನೆಯಲ್ಲಿ, ಕಛೇರಿಗಳಲ್ಲಿ ಧ್ವಜಾರೋಹಣವನ್ನು ನೆರವೇರಿಸುವುದು ಹಾಗೂ ವಾಹನಗಳಲ್ಲಿ ತ್ರಿವರ್ಣ ಧ್ವಜವನ್ನು ಪ್ರದರ್ಶಿಸುವುದು. ಜಿಲ್ಲಾದ್ಯಂತ ನಡೆದ ಕಾರ್ಯಕ್ರಮಗಳ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ತೆಗೆದು ಹಾಗೂ ತ್ರಿವರ್ಣ ಧ್ವಜದೊಂದಿಗೆ ಸೆಲ್ಪಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು www.harghartiranga.com ಜಾಲತಾಣದಲ್ಲಿ ಹಂಚಿಕೊಳ್ಳಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
