ಸಾಮರಸ್ಯದ ಸಂಕೇತವಾಗಿ ಬೀದರ್‌ನಲ್ಲಿ ರಕ್ಷಾಬಂಧನ ಆಚರಣೆ
ಬೀದರ್ : ನಗರದ ಮಂಗಲಪೇಟ ಬಡಾವಣೆಯಲ್ಲಿ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ಮಡಿವಾಳೇಶ್ವರ ಶಿಶುಮಂದಿರ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಇಂದು ರಕ್ಷಾಬಂಧನವನ್ನು ಭಾವಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಡಿವಾಳೇಶ್ವರ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಪ್ರತಿಭಾ ತೆಲಿ ಅವರು ಅತಿಥಿಯಾಗಿ ಮಾತನಾಡಿ, “ರ” ಎಂದರೆ ರಕ್ಷಣಾ, “ಕ್ಷ” ಎಂದರೆ ಕ್ಷಮೆ, ಭದ್ರತೆ, ಧೈರ್ಯ ಮತ್ತು ನಗು ಎಂಬ ಅರ್ಥಗಳನ್ನು ಹೊಂದಿವೆ ಎಂದು ವಿವರಿಸಿದರು. ಪರಸ್ಪರ ಸಹೋದರತ್ವ ಮತ್ತು ಸಾಮರಸ್ಯದ ಭಾವನೆಯಿಂದ ರಕ್ಷಾಬಂಧನವನ್ನು ಆಚರಿಸೋಣ ಎಂದು ಕರೆ ನೀಡಿದರು.
ಪ್ರೌಢ ಶಾಲೆಯ ಮುಖ್ಯಗುರು ಶರಣು ಪಾಟೀಲ್ ಅಧ್ಯಕ್ಷೀಯ ಭಾಷಣದಲ್ಲಿ, ಹಬ್ಬ-ಹರಿದಿನಗಳು ಸನಾತನ ಸಂಸ್ಕೃತಿಯಿಂದ ಬಂದ ಪರಂಪರೆ ಎಂದು ತಿಳಿಸಿದರು. “ಆಚಾರಕ್ಕೆ ವಿಚಾರ ಬೇಕು, ವಿಚಾರಕ್ಕೆ ಆಚಾರ ಬೇಕು. ಕೌಟುಂಬಿಕ ಮೌಲ್ಯಗಳು, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ವಸ್ತುಗಳ ಬಳಕೆ ಮತ್ತು ನಾಗರಿಕ ಶಿಷ್ಟಾಚಾರ — ಈ ಐದು ಅಂಶಗಳಲ್ಲಿ ಬದಲಾವಣೆ ಬಂದಾಗ ಸದೃಢ ಸಮಾಜ ನಿರ್ಮಾಣವಾಗುತ್ತದೆ” ಎಂದು ಅವರು ಹೇಳಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸೂರ್ಯಕಾಂತ ನಿನ್ನೆಕರ ಮತ್ತು ಪ್ರಾಥಮಿಕ ಶಾಲೆಯ ಮುಖ್ಯಗುರು ಶ್ರೀಮತಿ ಅರ್ಚನಾ ಶಿರಗೇರೆ ಹಾಜರಿದ್ದರು.
ವಿದ್ಯಾರ್ಥಿನಿಯರಾದ ಐಶ್ವರ್ಯಸ್ವಾಗತಿಸಿರು, ಲಾವಣ್ಯ ವೈಯಕ್ತಿಕ ಗೀತೆ, ಭವಾನಿ ವಂದನೆ ಮತ್ತು ಸಂಜನಾ ನಿರ್ವಹಣೆ ನಡೆಸಿದರು.
