Friday, January 16, 2026
HomeUncategorizedಜಿಲ್ಲಾಧಿಕಾರಿಗಳ ತಾತ್ಕಾಲಿಕ ಕಛೇರಿಗೆ ಬಸ್ ಓಡಿಸಿ

ಜಿಲ್ಲಾಧಿಕಾರಿಗಳ ತಾತ್ಕಾಲಿಕ ಕಛೇರಿಗೆ ಬಸ್ ಓಡಿಸಿ

ಜಿಲ್ಲಾಧಿಕಾರಿಗಳ ತಾತ್ಕಾಲಿಕ ಕಛೇರಿಗೆ ಬಸ್ ಓಡಿಸಿ

ಬೀದರ್ : ಜಿಲ್ಲಾಧಿಕಾರಿಗಳ ಕಛೇರಿ ಕಟ್ಟಡವು ಶಿಥಿಲಗೊಂಡಿರುವುದರಿಂದ ಬೀದರ ನಗರದ ಚಿಕ್ಕಪೇಟ್ ಬಳಿ ಇರುವ ಗಾಂಧಿ ಭವನಕ್ಕೆ ಸ್ಥಳಾಂತರಿಸಲಾಗಿದೆ. ಈ ಕಟ್ಟಡಕ್ಕೆ ಹೋಗಿ ಬರಲು ಸಾರ್ವಜನಿಕರಿಗೆ ತೀವ್ರ ತೊಂದರೆಯುAಟಾಗುತ್ತಿದೆ. ಆಟೋ ಚಾಲಕರು ಹೆಚ್ಚಿನ ಹಣ ಪಡೆಯುತ್ತಿರುವುದರಿಂದ ಜನತೆಗೆ ಕಷ್ಟ ಅನುಭವಿಸಬೇಕಾಗುತ್ತಿದೆ. ಆದರಿಂದ ಮಾನ್ಯ ಜಿಲ್ಲಾಧಿಕಾರಿಗಳು ತಕ್ಷಣವೇ ತಾತ್ಕಾಲಿಕ ಕಛೇರಿಗೆ ಎನ್.ಈ.ಕೆ.ಆರ್.ಟಿ.ಸಿ ಬಸ್ ಅಥವಾ ಪ್ರವಾಸೋಧ್ಯಮ ಬಸ್‌ಗಳನ್ನು ಓಡಿಸುವಂತೆ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುನೀಲ ಭಾವಿಕಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಬಸ್ ರೂಟ್ – 1
ಬಸ್ ಸಂಚಾರ ನಗರ ಕೇಂದ್ರ ಬಸ್ ನಿಲ್ದಾಣದಿಂದ ಮಡಿವಾಳ ಚೌಕ್, ಡಾ.ಸಿದ್ದಾರೆಡ್ಡಿ ಆಸ್ಪತ್ರೆ, ಸಿದ್ಧಾರ್ಥ ಕಾಲೇಜು ಕ್ರಾಸ್, ನಾವದಗೇರಿ, ವಿಜಯ ಕಾಲೋನಿ, ಚಿಕ್ಕಪೇಟ್-ಗುರುದ್ವಾರಾ ಕ್ರಾಸ್ ಮೂಲಕ ಗಾಂಧಿ ಭವನದಲ್ಲಿರುವ ಡಿ.ಸಿ ಕಛೇರಿ ವರೆಗೆ ಓಡಿಸಬೇಕು.

ಬಸ್ ರೂಟ್ – 2
ಇನ್ನೊಂದು ರೂಟ್ ಕೇಂದ್ರ ಬಸ್ ನಿಲ್ದಾಣದಿಂದ ಖಂಡ್ರೆ ಪೆಟ್ರೋಲ್ ಪಂಪ್, ರಂಗ ಮಂದಿರ, ಕನ್ನಡಾಂಬೆ ರೋಟರಿ ಚೌಕ್, ಹಳೆ ಬಸ್ ನಿಲ್ದಾಣ, ಶಿವಾಜಿ ಚೌಕ್, ಡಾ.ಬಿ.ಆರ್.ಅಂಬೇಡ್ಕರ್ ಚೌಕ್, ಕೇಂದ್ರ ಗಂಥಾಲಯ, ಸಿದ್ಥಾರ್ಥ ಕಾಲೇಜು, ನಾವದಗೇರಿ, ವಿಜಯ ಕಾಲೋನಿ, ಚಿಕ್ಕಪೇಟ್-ಗುರುದ್ವಾರಾ ಕ್ರಾಸ್ ಮೂಲಕ ಗಾಂಧಿ ಭವನದಲ್ಲಿರುವ ಡಿ.ಸಿ ಕಛೇರಿ ವರೆಗೆ ಸಿಟಿ ಬಸ್‌ಗಳನ್ನು ಸಂಚರಿಸುವಂತೆ ವ್ಯವಸ್ಥೆ ಮಾಡಿಸಬೇಕೆಂದು ಭಾವಿಕಟ್ಟಿ ಕೋರಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3