ಮಾನವ ಬಂಧುತ್ವ ವೇದಿಕೆಯಿಂದ ಅರ್ಥಪೂರ್ಣ ಆಚರಣೆ
ಬಸವ ಪಂಚಮಿ: ಅಲೆಮಾರಿ ಮಕ್ಕಳಿಗೆ ಹಾಲು ವಿತರಣೆ
ಬಸವ ಪಂಚಮಿ: ಅಲೆಮಾರಿ ಮಕ್ಕಳಿಗೆ ಹಾಲು ವಿತರಣೆ
ಬೀದರ್: ಮಾನವ ಬಂಧುತ್ವ ವೇದಿಕೆ ವತಿಯಿಂದ ತಾಲ್ಲೂಕಿನ ಜನವಾಡ ಗ್ರಾಮದಲ್ಲಿ ಮಂಗಳವಾರ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಲಾಯಿತು.
ಗ್ರಾಮದ ಅಲೆಮಾರಿ ಜನಾಂಗದ ಮಕ್ಕಳಿಗೆ ಹಾಲು ವಿತರಿಸಲಾಯಿತು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರ ಮಾರ್ಗದರ್ಶನದಲ್ಲಿ ವೇದಿಕೆಯು ಹತ್ತು ವರ್ಷಗಳಿಂದ ಮೂಢ ಆಚರಣೆಗಳ ವಿರುದ್ಧ ಜನಜಾಗೃತಿ ಮೂಡಿಸುತ್ತ ಬಂದಿದೆ. ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತಿದೆ ಎಂದು ವೇದಿಕೆ ಸಂಚಾಲಕ ಗೌತಮ ಮುತ್ತಂಗಿಕರ್ ಹೇಳಿದರು.
ವೈಜ್ಞಾನಿಕವಾಗಿ ಹಾವು ಹಾಲು ಕುಡಿಯುವುದಿಲ್ಲ. ಹೀಗಾಗಿ ಹುತ್ತಿಗೆ ಎರೆದು ಹಾಲು ವ್ಯರ್ಥ ಮಾಡುವ ಬದಲು ಅಪೌಷ್ಟಿಕತೆ ಹೋಗಲಾಡಿಸಲು ಮಕ್ಕಳಿಗೆ ಹಾಲು ವಿತರಿಸಲಾಗಿದೆ ಎಂದು ತಿಳಿಸಿದರು.
ಸಂಗನಹಳ್ಳಿಯ ಸಮಾಜ ಸೇವಕ ಜಿತೇಂದ್ರ ಕವಾಲೆ, ಅಶೋಕ ಕಡಮಂಚಿ, ರಾಮು ಚೆಟ್ಟೆಪ್ಪ ಮತ್ತಿತರರು ಇದ್ದರು.
