ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ಸಮವಸ್ತ್ರ ದಿನಾಚರಣೆ
ಸಮವಸ್ತ್ರವು ನಿಮ್ಮ ವ್ಯಕ್ತಿತ್ವ ಮತ್ತು ಶಿಸ್ತನ್ನು ಪ್ರತಿಬಿಂಬಿಸುತ್ತದೆ – ಶಿವನಗೌಡ ಪಾಟೀಲ್
ಬೀದರ್: ನಗರದ ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ಇಂದು ಸಮವಸ್ತ್ರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಲಂಕೃತರಾಗಿ ಮಾತನಾಡಿದ ಬೀದರ್ ಡಿ.ಎಸ್.ಪಿ. ಶಿವನಗೌಡ ಪಾಟೀಲ್ ಅವರು ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸಮವಸ್ತ್ರದ ಜೊತೆಗೆ ಶಿಸ್ತನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಜೀವನದಲ್ಲಿ ಶಿಸ್ತು ಬಹಳ ಮುಖ್ಯವಾಗಿದೆ ಹಾಗೂ ಮಕ್ಕಳು ಮಾದಕ ವ್ಯಸನಗಳಿಂದ ದೂರ ಇರುವುದು ಉತ್ತಮ ಎಂದು ತಿಳಿಸಿದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ, ಶೋಷಣೆಯನ್ನು ತಡೆಗಟ್ಟಲು 2012ರಲ್ಲಿ ಪೋಕ್ಸೋ ಕಾಯ್ದೆಯನ್ನು ಜಾರಿಗೆ ತರಲಾಯಿತು. ಸಮಾಜ, ರಾಜ್ಯ, ರಾಷ್ಟ್ರಕ್ಕಾಗಿ ನನ್ನ ಕರ್ತವ್ಯ ಏನು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷಸ್ಥಾನ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ ಅವರು ಮಾತನಾಡುತ್ತ ಸಮವಸ್ತ್ರವು ಜೀವನದ ಶಿಸ್ತನ್ನು ಪಾಲಿಸುತ್ತದೆ ಮತ್ತು ಗುರಿಯ ಸಮಿಪದ ಕಡೆಗೆ ಒಯ್ಯುತ್ತದೆ.ಸಮವಸ್ತ್ರದಿಂದ ಮೇಲು ಕೀಳು, ಮೇಲ್ವರ್ಗ ಕೆಳವರ್ಗ ಎಂಬ ಭೇದಭಾವ ತೊಲಗಿಸುತ್ತದೆ. ಶಿಕ್ಷಣ, ಸಂಸ್ಕಾರ, ಕೌಶಲ್ಯಗಳಿಂದ ಮಾತ್ರ ವ್ಯಕ್ತಿ ನಿರ್ಮಾನ ಸಾಧ್ಯ ಎಂದು ತಿಳಿಸಿದರು. ನಮ್ಮ ಶಾಲೆಯ ಪ್ರಾರ್ಥನೆ ಶಿಸ್ತು ಮತ್ತು ಏಕಾಗ್ರತೆ ಒಂದು ಭಾಗವಾಗಿದೆ. ಮಕ್ಕಳು ಸಮಾಜಕ್ಕೆ ಆಸ್ತಿಯಾಗಬೇಕು. ಹಿರಿಯ ವಿದ್ಯಾರ್ಥಿಗಳಿಂದ ಪ್ರೇರಣೆ ಪಡೆದು ಎತ್ತರಕ್ಕೆ ಬೆಳೆಯಬೇಕು ಎಂದರು.

ಕಾರ್ಯಕ್ರಮದ ವೇದಿಕೆ ಮೇಲೆ ಉಪಸ್ಥಿತರಿದ್ದ ಹಿರಿಯ ವಿದ್ಯಾರ್ಥಿನಿಯಾದ ದಿಪ್ತಿ ಕುಲಕರ್ಣಿ ಮಾತನಾಡುತ್ತ ಪ್ರತಿಯೊಬ್ಬರ ಜೀವನದಲ್ಲಿ ಶಿಸ್ತು ಮುಖ್ಯ. ಸಂಸ್ಕಾರ ಮತ್ತು ಶಿಕ್ಷಣ ಜೀವನದ ಒಂದು ಆಧಾರ. ಭಾರತೀಯರಿಗೆ ಸಮಯ ಪಾಲನೆ ಅನುಸರಿಸುವುದು, ಶಾಖೆ, ಶಿಬಿರ ಮುಂತಾದವುಗಳ ಮೂಲಕ ತಿಳಿದುಕೊಂಡಿರುತ್ತಾರೆ.
ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಪ್ರತಿಭಾ ಚಾಮಾ, ಹಿರಿಯ ವಿದ್ಯಾರ್ಥಿಯಾದ ಶ್ರೀ ಪ್ರಕಾಶ ಮೇರಂಪುರೆ ವಕೀಲರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಪ್ರತಿಭಾ ಚಾಮಾ, ಹಿರಿಯ ವಿದ್ಯಾರ್ಥಿಯಾದ ಶ್ರೀ ಪ್ರಕಾಶ ಮೇರಂಪುರೆ ವಕೀಲರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇನ್ನಿತರ ಹಿರಿಯ ವಿದ್ಯಾರ್ಥಿಗಳು, ಗುರುವೃಂದದವರು ಮತ್ತು ಮಕ್ಕಳು ಭಾಗವಹಿಸಿದರು.
ಶಾಲೆಯ ವಿದ್ಯಾರ್ಥಿಗಳಾದ ರಿತೀಕಾ ರೇವಣಪ್ಪಾ ಸ್ವಾಗತ ಪರಿಚಯ ಮಾಡಿದರೆ ಪುನಿತ ಸಿದ್ಧರಾಮ ವೈಯಕ್ತಿಕ ಗೀತೆ ಹಾಡಿದನು. ಆದಿತ್ಯ ಅನಿಲಕುಮಾರ ವಂದಿಸಿದರೆ ಸುಪ್ರಿಯಾ ಸಂಜುಕುಮಾರ ಕಾರ್ಯಕ್ರಮವನ್ನು ನಿರೂಪಿಸಿದಳು.
ಶಾಲೆಯ ವಿದ್ಯಾರ್ಥಿಗಳಾದ ರಿತೀಕಾ ರೇವಣಪ್ಪಾ ಸ್ವಾಗತ ಪರಿಚಯ ಮಾಡಿದರೆ ಪುನಿತ ಸಿದ್ಧರಾಮ ವೈಯಕ್ತಿಕ ಗೀತೆ ಹಾಡಿದನು. ಆದಿತ್ಯ ಅನಿಲಕುಮಾರ ವಂದಿಸಿದರೆ ಸುಪ್ರಿಯಾ ಸಂಜುಕುಮಾರ ಕಾರ್ಯಕ್ರಮವನ್ನು ನಿರೂಪಿಸಿದಳು.