ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್
ಕಟ್ಟಿಮನಿ ಅಧ್ಯಕ್ಷ, ಪೊಬ್ಬಾ ಕಾರ್ಯದರ್ಶಿ
ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ನೂತನ ಅಧ್ಯಕ್ಷರಾಗಿ ಡಾ. ಉಲ್ಲಾಸ್ ಕಟ್ಟಿಮನಿ, ಕಾರ್ಯದರ್ಶಿಯಾಗಿ ಆನಂದಕುಮಾರ ಪೊಬ್ಬಾ ಹಾಗೂ ಖಜಾಂಚಿಯಾಗಿ ಸಚ್ಚಿದಾನಂದ ಚಿದ್ರೆ ಆಯ್ಕೆಯಾಗಿದ್ದಾರೆ.
ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಸಮೀಪದ ದಾನಾಪಾನಿ ಹೋಟೆಲ್ ಸಭಾಂಗಣದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ಔರಾದ್ ತಹಶೀಲ್ದಾರ್ ಮಹೇಶ ಪಾಟೀಲ ಮಾತನಾಡಿ, ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯ ಸೇವಾ ಚಟುವಟಿಕೆಗಳ ಲಾಭ ಗ್ರಾಮೀಣ ಭಾಗ ಹಾಗೂ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ತಲುಪುವಂತಾಗಬೇಕು ಎಂದು ಹೇಳಿದರು.
ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಪಬ್ಲಿಕ್ ಇಮೇಜ್ ಚೇರ್‍ಮೆನ್ ಬಸವರಾಜ ಧನ್ನೂರ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಹಾವಶೆಟ್ಟಿ ಪಾಟೀಲ ಮಾತನಾಡಿದರು.
ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ ಗಾಯಕಿ ಶಿವಾನಿ ಸ್ವಾಮಿ, ದಿಲೀಪ್ ಸೈಕಲ್ ಸ್ಟೋರ್ಸ್‍ನ ನರೇಂದ್ರ ಸಾಂಗ್ವಿ, ಹೆರಿಗೆ ತಜ್ಞೆ ಡಾ. ವಿಜಯಶ್ರೀ ಬಶೆಟ್ಟಿ, ನುರಿತ ದಂತ ವೈದ್ಯ ಎಸ್.ಎನ್. ಮಠ ಹಾಗೂ ತಿರುಮಲಾ ಸಿಲ್ಕ್ ಶೋ ರೂಂ ಮಾಲೀಕ ಬಾಬುರಾವ್ ಪಸಾರಗೆ ಅವರನ್ನು ಸನ್ಮಾನಿಸಲಾಯಿತು.
ಡಾ. ರಘು ಕೃಷ್ಣಮೂರ್ತಿ, ರವಿ ಮೂಲಗೆ, ಶಿವಕುಮಾರ ಯಲಾಲ್, ಸೂರ್ಯಕಾಂತ ರಾಮಶೆಟ್ಟಿ ಮತ್ತಿತರರು ಇದ್ದರು.
ಕ್ಲಬ್ ನಿಕಟಪೂರ್ವ ಅಧ್ಯಕ್ಷ ಗುಂಡಪ್ಪ ಘೋದೆ ಸ್ವಾಗತಿಸಿದರು. ಪ್ರೊ. ಎಸ್.ಬಿ. ಚಿಟ್ಟಾ ಹಾಗೂ ಝಹೀರ್ ಅನ್ವರ್ ನಿರೂಪಿಸಿದರು.

ರೋಟರಿ ಕ್ಲಬ್‍ಗಳಿಗೆ ಬಸವರಾಜ ಧನ್ನೂರ ದೇಣಿಗೆ
ಸಮಾರಂಭದಲ್ಲಿ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಪಬ್ಲಿಕ್ ಇಮೇಜ್ ಚೇರ್‍ಮೆನ್ ಬಸವರಾಜ ಧನ್ನೂರ ಅವರು ಬೀದರ್‍ನ ರೋಟರಿ ಕ್ಲಬ್‍ಗಳಿಗೆ ರೂ. 50 ಸಾವಿರ ದೇಣಿಗೆ ನೀಡಿದರು.
ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಹಾವಶೆಟ್ಟಿ ಪಾಟೀಲ ಅವರಿಗೆ ದೇಣಿಗೆ ಹಣ ಹಸ್ತಾಂತರಿಸಿದರು.
ನನ್ನ 50ನೇ ಜನ್ಮದಿನದ ಸವಿ ನೆನಪಿಗಾಗಿ ಜನ ಹಿತದ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಕ್ಲಬ್‍ಗಳಿಗೆ ದೇಣಿಗೆ ಕೊಡಲಾಗಿದೆ ಎಂದು ಅವರು ತಿಳಿಸಿದರು.
ರೋಟರಿ ಮೂಲಕ ಕಳೆದ ಎರಡೂವರೆ ದಶಕದಿಂದ ಸಮಾಜಕ್ಕೆ ಸಾಧ್ಯವಾದ ಕೊಡುಗೆ ನೀಡಲು ಪ್ರಯತ್ನಿಸಿದ್ದೇನೆ ಎಂದು ಹೇಳಿದರು.
ರೋಟರಿ ವಿವಿಧ ಕ್ಷೇತ್ರಗಳ ಜನರು ಒಂದೆಡೆ ಸೇರಿ, ಸಮಾಜ ಸೇವೆ ಮಾಡುವ ವೇದಿಕೆಯಾಗಿದೆ ಎಂದು ತಿಳಿಸಿದರು.
