ಸಹಕಾರ ರತ್ನ ಬಾಬುರಾವ ಕುಂಬಾರರವರಿಗೆ
ಅಖಿಲ ಭಾರತೀಯ ಪ್ರಜಾಪತಿ ಕುಂಬಾರ ಮಹಾಸಂಘದ ಹೊಣೆ
ಬೀದರ್, ಕರ್ನಾಟಕ ರಾಜ್ಯ ಸರ್ಕಾರದಿಂದ ಸಹಕಾರ ರತ್ನ ಪ್ರಶಸ್ತಿ ಪಡೆದಿರುವ ಕುಂಬಾರ ಸಮಾಜದ ಮುಖಂಡ ಬಾಬುರಾವ ವೈಜಿನಾಥ ಕುಂಬಾರ ಕೊಳಾರ (ಬಿ) ರವರಿಗೆ ಮತ್ತೊಂದು ಮಹತ್ತರ ಜವಾಬ್ದಾರಿ ದೊರಕಿದೆ. ಅವರು ಅಖಿಲ ಭಾರತೀಯ ಪ್ರಜಾಪತಿ ಕುಂಬಾರರ ಮಹಾಸಂಘದ ರಾಷ್ಟಿಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಕಗೊಂಡಿದ್ದಾರೆ. ನೇಮಕಾತಿ ಪತ್ರವನ್ನು ಸಂಘದ ರಾಷ್ಟಿಯ ಮುಖ್ಯ ಪ್ರಧಾನ ಕಾರ್ಯದರ್ಶಿ ಸಿ.ಎ. ಮನೋಜ ಪ್ರಜಾಪತ್ ಅವರು ಪತ್ರವನ್ನು ನೀಡಿ ತತಕ್ಷಣವೇ ಅಧಿಕಾರ ಸ್ವೀಕರಿಸಿ ಸಂಘದ ಸಂಘಟನೆ, ಬಲವರ್ಧನೆಗೆ ಮತ್ತು ಸಮಾಜದ ಪ್ರಗತಿಗಾಗಿ ದುಡಿಯಲು ಕಾರ್ಯಪ್ರವೃತ್ತರಾಗಬೇಕೆಂದು ಆದೇಶಿಸಿದ್ದಾರೆ.
ಸಮಾಜದ ಅಭಿವೃದ್ಧಿಗಾಗಿ ನಿರಂತರವಾಗಿ ಸಹಕಾರ ಕ್ಷೇತ್ರದಲ್ಲಿ ದುಡಿಯುತಿದ್ದಾರೆ. ಕುಂಬಾರರ ಕರಕುಶಲ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾಗಿ ಶ್ರಮಿಸುತ್ತಾ, ಸಮಾಜದ ಒಳಿತಿಗಾಗಿ, ಸಮಾಜ ಬಾಂಧವರಿಗೆ ಕುಂಬಾರಿಕೆಯ ಮಣ್ಣಿನ ಮಡಿಕೆ-ಕುಡಿಕೆಗಳನ್ನು ತಯಾರಿಸಲು ಅವಶ್ಯಕತೆಯಿರುವ ತಿಗರಿ ಮತ್ತಿತರೆ ವಸ್ತು ಸಾಮಗ್ರಿಗಳನ್ನು ಸರ್ಕಾರದಿಂದ ಕೊಡಿಸಿ ಸಮಾಜ ಬಾಂಧವರಿಗೆ ಸ್ವಾವಲಂಬಿ ಜೀವನ ಸಾಗಿಸಲು ದಾರಿದೀಪವಾಗಿದ್ದಾರೆ.

ಕನ್ನಡ ಹಿಂದಿ, ಇಂಗ್ಲೀಷ್, ತೆಲುಗು, ಭಾಷೆ ಮಾತನಾಡುವ ಎಸ್.ಎಸ್.ಎಲ್.ಸಿ, ಓದಿರುವ ಬಾಬುರಾವ ಕುಂಬಾರ ಅವರು ಪಾಟರ್ ವರ್ಕ್ಸ್ ಮತ್ತು ಪಿ.ಎಂ. ವಿಶ್ವ ಕರ್ಮ ತರಬೇತಿ ಕೇಂದ್ರ, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ ಬೆಂಗಳೂರು ಜಂಟಿ ಕಾರ್ಯದರ್ಶಿಯಾಗಿ ಕೈಗಾರಿಕಾ ವ್ಯಾಪಾರ ಮಾಲೀಕರಾಗಿರುವ ಇವರು ಪಾಟರ್ ಇಂಡಸ್ಟ್ರಿ ಪ್ಲಾಟ್ನೋ 172 ಕೆಐಎಡಿಬಿ ಕೋಲಾರ ಬೀದರ್ ಕರ್ನಾಟಕ ರಾಜ್ಯ ಧ್ವನಿ ಅಧ್ಯಕ್ಷರಾಗಿ, ದಕ್ಷಿಣ ಭಾರತೀಯ ಕುಂಬಾರ (ಪ್ರಜಾಪತಿ) ಒಕ್ಕೂಟದಲ್ಲಿ ಸೇವಾ ನಿರತರಾಗಿದ್ದಾರೆ. ದೇಶದಲ್ಲಿ ಸುಮಾರು 9 ಕೋಟಿಗೂ ಹೆಚ್ಚು ಕುಂಬಾರ ಜನಸಂಖ್ಯೆಯಿದ್ದು, ಅವರ ಆರ್ಥಿಕ ಸಾಮಾಜಿಕ, ಔದ್ಯೋಗಿಕ ಪ್ರಗತಿಗಾಗಿ ರಾಷ್ಟç ಸಂಘ ದುಡಿಯುತಿದ್ದು, ಅವರ ಜೊತೆ ತಾವು ಆಹೋರಾತ್ರಿ ಶ್ರಮಿಸುವೆ ಎಂದು ಕುಂಬಾರ ತಿಳಿಸಿದ್ದಾರೆ.
ತಮ್ಮ ಸೇವೆಗೆ ಗುರುತಿಸಿದ ಕುಂಬಾರ ಮಹಾ ಸಂಘದ ಪದಾಧಿಕಾರಿಗಳಿಗೆ, ಆರ್.ಬಿ.ಕೆ. ಪ್ರಜಾಪತಿ ಸತೀಶ ಪ್ರಜಾಪತಿ, ಸಿ.ಎ. ಪ್ರಜಾಪತಜಿ, ಶಿವಕುಮಾರ ಚೌದಶೆಟ್ಟಿ, ಜಿ. ಅನೀಲಕುಮಾರ ಕಾನಪೂರ, ಗುಲಾಬರಾಮ್ ಕೆ.ಎಸ್. ವೆಂಕಟರಾಜು ಗುಂಡುಪೇಟೆ, ಬಸವರಾಜ ಕುಂಬಾರ ಬೀದರ, ಜಿಲ್ಲಾ ಕುಂಬಾರ ಸಂಘದ ಪ್ರಧಾನ ಕಾರ್ಯದಶಿ ವಿಜಯಕುಮಾರ ಅಂಬುಲಗೆ, ಅವರುಗಳು ಸೇರಿದಂತೆ ಸಮಾಜದ ಗಣ್ಯರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಬಾಬುರಾವ ಕುಂಬಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
