ನೃತ್ಯ ತರಬೇತಿ ಉದ್ಘಾಟನೆ: ಬಸವರಾಜ ಹೂಗಾರ್ ಹೇಳಿಕೆ
ಜನಪದ ಕಲೆಗಳ ಉಳಿವು ಅಗತ್ಯ
ಜನಪದ ಕಲೆಗಳ ಉಳಿವು ಅಗತ್ಯ
ಬೀದರ್: ಜನಪದ ಕಲೆಗಳ ಉಳಿವು ಅಗತ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ್ ಹೇಳಿದರು.
ತಾಲ್ಲೂಕಿನ ಘೋಡಂಪಳ್ಳಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಜಾನಪದ ನೃತ್ಯ ಕಲಾ ಪ್ರಕಾರದ ಆರು ತಿಂಗಳ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಕಲೆಗಳು ಬಹಳ ಶ್ರೇಷ್ಠವಾಗಿವೆ. ಹೀಗಾಗಿ ಅವುಗಳನ್ನು ಯುವ ಪೀಳಿಗೆಗೆ ಕಲಿಸಬೇಕಾಗಿದೆ ಎಂದು ತಿಳಿಸಿದರು.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ವಿವಿಧ ಕಲೆಗಳನ್ನೂ ಕಲಿಯಬೇಕು. ನೃತ್ಯ ತರಬೇತಿಯ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶರಣಪ್ಪ ಬಿರಾದಾರ ಮಾತನಾಡಿ, ಜಾನಪದ ನೃತ್ಯ ಶ್ರೀಮಂತ ಕಲೆಯಾಗಿದೆ. ಈ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಂಡಿತ, ಮಹಾಂತಪ್ಪ ದೊಡ್ಡಮನಿ, ಸವಿತಾ ಗೋಡಬೋಲೆ, ನೃತ್ಯ ತರಬೇತುದಾರರಾದ ಅಜೀತಕುಮಾರ, ಕ್ಲೆಮೆಂಟಿನಾ, ಯೋಗೇಶ್ ಮಠದ್, ಜಾನ್ ವೆಸ್ಲಿ ಉಪಸ್ಥಿತರಿದ್ದರು. ದೇವಿದಾಸ ಜೋಶಿ ನಿರೂಪಿಸಿದರು.
