ಜು.1ಕ್ಕೆ ಜನವಾಡಾದಲ್ಲಿ ತಾಲ್ಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮ
ಬೀದರ್ : ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜಂಟಿ ಉಪಸ್ಥಿತಿಯಲ್ಲಿ ಬೀದರನ ಜನವಾಡಾ ಗ್ರಾಮದ ನಾಡ ಕಛೇರಿ ಆವರಣದಲ್ಲಿ ಜುಲೈ.1 ರಂದು ಬೆಳಿಗ್ಗೆ 10.30 ಗಂಟೆಗೆ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರಣ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕಾರ್ಯಕ್ರಮಕ್ಕೆ ಸಮಯದ ಮುಂಚಿತವಾಗಿ ಬೆಳಿಗ್ಗೆ 10 ಗಂಟೆಯಿAದ ತಮ್ಮ ಸಿಬ್ಬಂದಿಯೊAದಿಗೆ ಹಾಜರಿದ್ದು ಬಂದಿರುವ ಅಹವಾಲು ಸ್ವೀಕರಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.