ತಾನಾಜಿ ಸಗರಗೆ ಡಾಕ್ಟರೇಟ್
ಬೀದರ್: ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ತಾನಾಜಿ ಸಗರ್ ಅವರಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಗ್ಲೊಬಲ್ ಹ್ಯೂಮನ್ ಪೀಸ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.
ಚೆನ್ನೈನ ದಿವ್ಯ ಭಾರತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ತಾನಾಜಿ ಸಗರ್ ಎರಡು ದಶಕಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ವಿವಿಧ ಸಂಘ- ಸಂಸ್ಥೆಗಳೊಂದಿಗೆ ಒಡನಾಟ ಹೊಂದಿದ್ದಾರೆ.
ಸಮಾರಂಭದಲ್ಲಿ ವಿಶ್ವದ್ಯಾಲಯದ ಪ್ರಮುಖರು, ಗಣ್ಯರು ಹಾಜರಿದ್ದರು