ಹುಮನಾಬಾದ್ : ಅಂಬೇಡ್ಕರ್ ಯುವ ಸೇನೆ ತಾಲೂಕಾ ಪದಾಧಿಕಾರಿಗಳ ಆಯ್ಕೆ
ಬೀದರ್ : ಅಂಬೇಡ್ಕರ್ ಯುವ ಸೇನೆ ತಾಲೂಕ ಸಮಿತಿ ಕುರಿತು ಹುಮ್ನಾಬಾದ್ ಅತಿಥಿಗೃಹದಲ್ಲಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವ ಸೇನೆ ರಾಜ್ಯಾ ಉಪಾಧ್ಯಕ್ಷರಾದ ಸುರೇಶ ಘಾಂಗ್ರೆ ಅವರು ವಹಿಸಿದ್ದರು.
ಕಾಂಗ್ರೆಸ್ ಪಕ್ಷದ ಪರಶಿಷ್ಟ ಜಾತಿ ವಿಭಾಗದ ಜಿಲ್ಲಾ ಕಾರ್ಯದರ್ಶಿ ಚಂದ್ರಕಾಂತ್ ಆರ್. ನಿರಾಟೆ, ಅಂಬೇಡ್ಕರ್ ಯುವ ಸೇನೆ ರಾಜಾಧ್ಯಕ್ಷರಾದ ರಾಜಕುಮಾರ್ ಗೂನಳ್ಳಿ, ಜಿಲ್ಲಾ ಅಧ್ಯಕ್ಷರಾದ ನಿತೀಶ್ ಉಪ್ಪೆ ಹಾಗೂ ದಲಿತ ಸೇನೆ ತಾಲೂಕ ಅಧ್ಯಕ್ಷರಾದ ಸುನಿಲ್ ಶಿವನಾಯಕ, ಮಹೇಂದ್ರ ಕುಮಾರ್, ಮಲ್ಲಿಕಾರ್ಜುನ ಸಮ್ಮುಖದಲ್ಲಿ ನಡೆಯಿತು.

ನೂತನ ಅಂಬೇಡ್ಕರ್ ಯುವ ಸೇನೆ ಹುಮನಾಬಾದ ತಾಲೂಕಾ ಪದಾಧಿಕಾರಿಗಳಾಗಿ ನೀಲಕಂಠ ಶೆಟ್ಟಿ ಜಿಲ್ಲಾ ಉಪಾಧ್ಯಕ್ಷರು, ಶರಣಪ್ಪ ಮೇತ್ರೆ ತಾಲೂಕಾ ಅಧ್ಯಕ್ಷರು, ತಾಲೂಕಾ ಉಪಾಧ್ಯಕ್ಷರಾಗಿ ಉಮೇಶ್ ಖಂದಾರಿ ಕಂದಗುಳ ಹಾಗೂ ಪದಾಧಿಕಾರಿಗಳಾಗಿ ಪ್ರಶಾಂತ್ ಖಂದಾರಿ, ದೇವಿಂದರ ಖಂದಾರಿ, ಶಂಭುಲಿಂಗ್ ಖಂದಾರಿ, ಭೀಮಶಾ, ಮೊಳಕೆರ ಕಂದಗುಳ, ರಾಜಕುಮಾರ್ ಮೊಳಕೆರ ಕಂದಗುಳ, ಚಂದ್ರಕಾಂತ್ ನಿಟ್ಟೂರೆ ಸೀತಾಳಗೇರ, ರಾಜಕುಮಾರ್ ಮಾಳ್ಗೆ, ಸುನೀಲಕುಮಾರ್ ನಿಟ್ಟೂರೆ, ಪ್ರಶಾಂತ್ ಮಾಳ್ಗೆ, ಧೂಳಪ್ಪ ತಾಳಮಡಗಿ ಆಯ್ಕೆಮಾಡಲಾಗಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ.ಜಾತಿ ವಿಭಾಗ ಜಿಲ್ಲಾ ಕಾರ್ಯದರ್ಶಿ ಚಂದ್ರಕಾಂತ್ ನಿರಾಟೆ ರವರಿಗೆ ವಿಧಾನ ಪರಿಷತ್ತಿನ ಸದಸ್ಯರಾದ ಬೀಮರಾವ್ ಪಾಟೀಲ್ ಹಾಗೂ ಸುರೇಶ ಘಾಂಗ್ರೆ ಅವರು ಸನ್ಮಾನಿಸಿ ಶುಭಕೋರಿದರು. ಎಂದು ರಾಜಕುಮಾರ ಗುನಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
