ನಾಡ ತಹಸಿಲ್ದಾರ್ ಅಶೋಕ ರಾಜಗೀರಾ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಕೆ
ಬೀದರ್ : ತಾಲೂಕಿನ ಜನವಾಡ ನಾಡ ತಹಸೀಲ್ದಾರ ಅಶೋಕ ರಾಜಗೀರ ಅವರನ್ನು ಬೀದರ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಲು ಒತ್ತಾಯಿಸಿ ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿಯಿಂದ ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಬೀದರ ತಾಲೂಕಿನ ಜನವಾಡ ನಾಡ ತಹಸೀಲ್ದಾರರು ಅವರ ಕಛೇರಿಗೆ ಸಾರ್ವಜನಿಕರು ವಿವಿಧ
ಅರ್ಜಿಗಳನ್ನು ಸಲ್ಲಿಸಿದರೆ, ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ಅರ್ಜಿಯನ್ನು ತಿರಸ್ಕರಿಸಿರುತ್ತಾರೆ. ಈ ವಿಷಯದ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸುಮಾರು ಸಲ ಮನವಿ ಪತ್ರವನ್ನು ನೀಡಿರುತ್ತೇವೆ. ಆದರೆ ಯಾವುದೇ ಕ್ರಮ ವಹಿಸದೇ ಇರುವುದು ವಿಪರ್ಯಾಸ ಎಂದು ಮನವಿಯಲ್ಲಿ ದೂರಿದ್ದಾರೆ.
ಈ ಸಂದರ್ಭದಲ್ಲಿ ಸಂದೀಪ ಕಾಂಟೆ, ಮಹೇಂದ್ರಕುಮಾರ ಹೊಸಮನಿ, ವಿಶಾಲ ದೊಡ್ಡಿ, ಸಂಗಮೇಶ ಭಾವಿದೊಡ್ಡಿ ಸೇರಿದಂತೆ ಹಲವರಿದ್ದರು.
