ಮರ ಬೆಳೆಸಿ ನಿಸರ್ಗದ ಋಣ ತೀರಿಸಿ
ಬೀದರ್: ಪ್ರತಿಯೊಬ್ಬರೂ ತಲಾ ಒಂದು ಸಸಿ ನೆಟ್ಟು, ಬೆಳೆಸಿ ನಿಸರ್ಗದ ಋಣ ತೀರಿಸಬೇಕು ಎಂದು ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಡಿಸಿಗ್ನೆಟೆಡ್ ಮಂಥ್ಸ್ ಚೇರ್‍ಮೆನ್ ಬಸವರಾಜ ಧನ್ನೂರ ಹೇಳಿದರು.
ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ವತಿಯಿಂದ ಇಲ್ಲಿಯ ಐಎಂಎ ಹಾಲ್‍ನಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನ ಬದುಕು ಪ್ರಕೃತಿಯ ಕೊಡುಗೆಯಾಗಿದೆ. ನಿಸರ್ಗ ಉಳಿದರೆ ಮಾತ್ರ ಮನುಷ್ಯನಿಗೆ ಉಳಿಗಾಲ ಇದೆ ಎಂದು ತಿಳಿಸಿದರು.
ಮನುಷ್ಯನನ್ನು ಹೊರತುಪಡಿಸಿ ಉಳಿದ ಎಲ್ಲ ಜೀವ ರಾಶಿಗಳು ಪರಿಸರಕ್ಕೆ ಹಾನಿ ಉಂಟಾಗದಂತೆ ಬದುಕು ಸಾಗಿಸುತ್ತಿವೆ. ಮನುಷ್ಯ ಕೂಡ ಪರಿಸರ ಸ್ನೇಹಿ ಜೀವನ ನಡೆಸಬೇಕಿದೆ ಎಂದು ಹೇಳಿದರು.
ಎಲ್ಲರೂ ಪರಿಸರ ಪ್ರೀತಿ ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆ ಕಾರ್ಯಕ್ಕೆ ಕೈಜೋಡಿಸಬೇಕು. ನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು ಎಂದು ಸಲಹೆ ಮಾಡಿದರು.
ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಶಿವಕುಮಾರ ಪಾಖಾಲ್, ಹಿರಿಯ ರೊಟೇರಿಯನ್‍ಗಳಾದ ಜಹೀರ್ ಅನ್ವರ್ ಹಾಗೂ ಶಿವಕುಮಾರ ಪಾಖಾಲ್ ಮಾತನಾಡಿದರು. ಕ್ಲಬ್ ಸದಸ್ಯರಿಗೆ ಸಸಿ ವಿತರಿಸಲಾಯಿತು.
ಕ್ಲಬ್ ಅಧ್ಯಕ್ಷ ಗುಂಡಪ್ಪ ಘೋದೆ ಅಧ್ಯಕ್ಷತೆ ವಹಿಸಿದ್ದರು. ಡಾ. ಸುಭಾಷ್ ಬಶೆಟ್ಟಿ, ಡಾ. ಎಸ್.ಎಂ. ಪಾಟೀಲ, ಸಚ್ಚಿದಾನಂದ ಚಿದ್ರೆ, ಆನಂದ ಪೊಬ್ಬಾ ಮತ್ತಿತರರು ಇದ್ದರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಕಾರ್ಯದರ್ಶಿ ಪ್ರಭು ತಟಪಟ್ಟಿ ಸ್ವಾಗತಿಸಿದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಆಣದೂರೆ ನಿರೂಪಿಸಿದರು. ರೋಟರಿ ಕ್ಲಬ್ ಆಫ್ ಬೀದರ್ ಫೆÇೀರ್ಟ್ ಕಾರ್ಯದರ್ಶಿ ಡಾ. ಉಲ್ಲಾಸ್ ಕಟ್ಟಿಮನಿ ವಂದಿಸಿದರು.
