ಯೋಗಯಮ ಬೀದರ್: ಪತಂಜಲಿ ಗುರಿ
ಬೀದರ್: ಜಿಲ್ಲೆಯನ್ನು ಸಂಪೂರ್ಣ ಯೋಗಮಯ ಮಾಡುವುದು ಪತಂಜಲಿ ಯೋಗ ಸಮಿತಿಯ ಗುರಿಯಾಗಿದೆ ಎಂದು ಸಮಿತಿಯ ಕರ್ನಾಟಕ ಉಸ್ತುವಾರಿಯಾದ ಖ್ಯಾತ ಅಂತರರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಹೇಳಿದರು.
ನಗರದ ಸಪ್ನಾ ಮಲ್ಟಿಫ್ಲೆಕ್ಸ್ ಸಭಾಂಗಣದಲ್ಲಿ ಶನಿವಾರ ಪ್ರಾಣಾಯಾಯ, ಧ್ಯಾನ, ಯೋಗ ವಿಶೇಷ ಶಿಬಿರ ಹಾಗೂ ಯೋಗ ಶಿಕ್ಷಕರಿಗೆ ಪ್ರಮಾಣ ಪತ್ರ ವಿತರಣೆ ಸಮಾರಂಭವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯೋಗದ ಕುರಿತು ಜನ ಜಾಗೃತಿ ಮೂಡಿಸಲಾಗುವುದು. ಬೀದರ್ ನಗರದ ಎಲ್ಲ 35 ವಾರ್ಡ್‍ಗಳಲ್ಲಿ ಯೋಗ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಕೇಂದ್ರಗಳಿಗೆ ಯೋಗ ಪ್ರಭಾರಿಗಳನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಯೋಗ ಒಂದು ತಪಸ್ಸಾಗಿದೆ. ಇದಕ್ಕೆ ಜಾತಿ, ಧರ್ಮದ ಭೇದವಿಲ್ಲ. ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ನಕಾರಾತ್ಮಕ ಮನೋಭಾವದಿಂದ ಸಕಾರಾತ್ಮಕ ಮನೋಭಾವದೆಡೆಗೆ ಕರೆದೊಯ್ಯುವ ಶಕ್ತಿ ಯೋಗಕ್ಕೆ ಇದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಯೋಗೇಂದ್ರ ಯದಲಾಪುರೆ ಮಾತನಾಡಿ, ಎಲ್ಲರೂ ಭೋಗಿ- ರೋಗಿಗಳಾಗದೆ, ಯೋಗಿಗಳಾಗಿ ಸಮಾಜ ಹಾಗೂ ದೇಶಕ್ಕೆ ಉಪಯೋಗಿ ಆಗಬೇಕು ಎಂದು ಹೇಳಿದರು.

ನಿತ್ಯ ಶ್ರದ್ಧೆಯಿಂದ ಯೋಗ ಮಾಡುವುದರಿಂದ ಅನೇಕ ದೈಹಿಕ ಹಾಗೂ ಮಾನಸಿಕ ಲಾಭಗಳಿವೆ. ಯೋಗದಿಂದ ಸಾತ್ವಿಕ ಗುಣಗಳನ್ನು ಸಹ ಬೆಳೆಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಶಿಬಿರಾರ್ಥಿಗಳಿಗೆ ಯೋಗ ಮಾರ್ಗದರ್ಶಿ ಕಿರು ಹೊತ್ತಿಗೆ ವಿತರಿಸಲಾಯಿತು. ಐಎನ್‍ಒ ನವದೆಹಲಿ ಕಚೇರಿ ಪ್ರಭಾರಿ ತ್ರಿಭವನ್, ರಾಜ್ಯ ಸಂಚಾಲಕ ಗುರುನಾಥ ರಾಜಗೀರಾ, ಜಿಲ್ಲಾ ಘಟಕದ ಅಧ್ಯಕ್ಷ ಗೋರಕನಾಥ ಕುಂಬಾರ, ಪ್ರಧಾನ ಕಾರ್ಯದರ್ಶಿ ಸಂತೋಷ್ ಪಾಟೀಲ, ಸಂಚಾಲಕಿ ಡಾ. ಮಂಜುಳಾ ಮುಚಳಂಬೆ, ಪ್ರಮುಖರಾದ ಕಂಟೆಪ್ಪ ಗಂದಿಗುಡಿ, ರಾಜಕುಮಾರ ಕಮಠಾಣೆ, ಅಣ್ಣೆಪ್ಪ ಸ್ವಾಮಿ, ಜಗನ್ನಾಥ ಭಂಗೂರೆ, ವಿಜಯಕುಮಾರ ಬಾಬಣೆ, ನವೀನ್ ಘುಳೆ, ಶಿವಕುಮಾರ ಸಂಗೋಳಗಿ, ವೈಜಿನಾಥ ಸ್ವಾಮಿ, ರಾಘವೇಂದ್ರ ಕುಲಕರ್ಣಿ, ರಮೇಶ ಬಿರಾದಾರ, ಹುಲೆಪ್ಪ ಬರದಾಬಾದೆ, ಶಿವಮೂರ್ತಿ ಬಟನಾಪುರೆ, ದೇವೇಂದ್ರ, ವೀರೇಶ, ಶಿವಶರಣಪ್ಪ ಮೂಲಗೆ, ಶಿವಶರಣಪ್ಪ ದಾನಾ, ಉಮಾದೇವಿ ಹೂಗಾರ್, ರಾಜೇಶ್ವರಿ ಕಲಮ್, ಲಲಿತಾ ಗಾದಗೆ, ನಾಗರಾಜ ಕಮಠಾಣೆ, ರವಿ ತೆಲಗಾಣೆ, ಗುರುನಾಥ ಮೂಲಗೆ, ಸತ್ಯವಾನ್ ಮುರ್ಕಿ, ಮಲ್ಲಿಕಾರ್ಜುನ ನೆಲವಾಡ, ಕೃಷ್ಣ ರೆಡ್ಡಿ, ಅಶೋಕ ರೆಡ್ಡಿ, ಭಗವಂತ ಎಂಪಳ್ಳಿ, ನಂದಾ ಬಿರಾದಾರ, ಮಹಾನಂದ ಬರದಾಬಾದೆ, ವಿದ್ಯಾವತಿ ಸಜ್ಜನ್, ಶಾರದಾ, ಅನಿತಾ ಪರೀಟ್, ಲಲಿತಾ ಸ್ವಾಮಿ, ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು, ಯೋಗ ಸಾಧಕರು ಹಾಗೂ ಯೋಗಾಸಕ್ತರು ಹಾಜರಿದ್ದರು.