—-
ಬೀದರ್ : ಭಾರತದ ವೀರ ಸುಪುತ್ರ, ಪರಾಕ್ರಮಿ, ಹಿಂದವಿ ಸ್ವರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆ ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.
ಔರಾದ(ಬಿ) ತಾಲ್ಲೂಕಿನ ಜಂಬಗಿಯಲ್ಲಿ ಜೂನ್ 1ರಂದು ನಡೆದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೀರಯೋಧರಾಗಿದ್ದ ಶಿವಾಜಿ ಮಹಾರಾಜರು ಅಪ್ಪಟ ದೇಶಭಕ್ತ, ಶಿಸ್ತಿನ ಸಿಪಾಯಿ, ಬಡವರು, ಹಿಂದುಳಿದವರ ಆಶ್ರಯದಾತ. ಶೌರ್ಯ, ಯುದ್ದ, ಪರಾಕ್ರಮ, ಯುದ್ದ ತಂತ್ರಗಳಿಗೆ ಹೆಸರುವಾಸಿಯಾಗಿದ್ದ ಅವರು ಎಲ್ಲಾ ರೀತಿಯ ಯುದ್ದಕಲೆಗಳನ್ನು ಕರಗತ ಮಾಡಿಕೊಂಡಿದ್ದರು. ಭಾಷೆ, ಗಡಿ ಮೀರಿ ಸೈನಿಕರನ್ನು ಸಂಘಟಿಸಿದವರು. ಮೊಘಲರು ಮತ್ತು ಸುಲ್ತಾನರ ದಬ್ಬಾಳಿಕೆಯನ್ನು ದಿಟ್ಟತನದಿಂದ ಹಿಮ್ಮೆಟ್ಟಿಸಿ ಸ್ವತಂತ್ರ್ಯ ಸಾಮ್ರಾಜ್ಯವನ್ನು ಕಟ್ಟಿದರಲ್ಲದೇ ಸನಾತನ ಧರ್ಮವನ್ನು ಸಂರಕ್ಷಿಸಿದ ಧರ್ಮ ರಕ್ಷಕರು ಎಂದರು.

ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದ್ದರು. ದೇಶದ ಅನೇಕ ಕೋಟೆಗಳನ್ನು ಗೆದ್ದು ಸಾಮ್ರಾಜ್ಯವನ್ನು ವಿಸ್ತರಿಸಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತಹದ್ದು, ಅವರ ಶೌರ್ಯ, ಸಾಹಸ, ದೇಶಭಕ್ತಿ ಪ್ರತಿಯೊಬ್ಬ ಭಾರತೀಯನಿಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಅವರು ಇಡೀ ಭಾರತೀಯರಿಗೆ ಸೇರಿದವರು. ದೇಶ ಕಂಡ ಅಪರೂಪದ ನಾಯಕರು, ಇಂತಹ ಮಹಾ ಪುರುಷರ ಚರಿತ್ರೆಯನ್ನು, ಸಾಧನೆ ಮತ್ತು ಸಂದೇಶಗಳನ್ನು ಮುಂದಿನ ಯುವ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು. ಇಂತಹ ಕಾರ್ಯಕ್ರಮಗಳು ಎಲ್ಲ ಕಡೆಗಳಲ್ಲಿ ನಡೆಯಬೇಕು. ಧಾರ್ಮಿಕ ಸಾಧಕರ ಸಮಾಗಮವಾಗಬೇಕು. ಎಲ್ಲ ಕಡೆಗಳಲ್ಲಿ ಶಿವಾಜಿಯವರ ಮೂರ್ತಿಗಳಾಗಬೇಕು ಎಂದು ಹೇಳಿದರು.
ಜಂಬಗಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದೇನೆ. ಎಲ್ಲ ಅವಶ್ಯಕತೆಗಳನ್ನು ಆದ್ಯತೆಗೆ ಅನುಸಾರವಾಗಿ ಪೂರೈಸುವ ಕೆಲಸ ಮಾಡುತ್ತಿದ್ದೇನೆ. ಅಭಿವೃದ್ದಿಗೆ ಗ್ರಾಮಸ್ಥರ ಸಹಭಾಗಿತ್ವವು ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮದ ಅಭಿವೃದ್ಧಿಗಾಗಿ ಒಂದು ಸಮಿತಿಯನ್ನು ರಚಿಸಿ ಹಣಕಾಸು ವ್ಯವಹಾರಕ್ಕೆ ಒಂದು ಬ್ಯಾಂಕ್ ಖಾತೆಯನ್ನು ತೆರೆಯಬೇಕು. ಗ್ರಾಮಸ್ಥರು ಹಣ ಜೋಡಿಸಿ ಬಡವರು, ಅತ್ಯಂತ ಹಿಂದುಳಿದವರ ನೆರವು ಮಾಡುವ ಕೆಲಸ ಮಾಡಬೇಕು. ಇದಕ್ಕೆ ನಾನು ಕೂಡ ಸಹಕರಿಸುತ್ತೇನೆ ಎಂದು ಸಲಹೆ ನೀಡಿದರು.

ಪಂಢರಾಪುರ ವಿಠಲ ರುಕ್ಮಿಣಿ ಮಂದಿರದ ಅಧ್ಯಕ್ಷರಾದ ಪುಜ್ಯ ಸದ್ಗುರು ಗಹನಿನಾಥ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿದ್ದರು. ಬೆಂಗಳೂರಿನ ಪೂಜ್ಯ ಜಗದ್ಗುರು ವೇದಾಂತಾಚಾರ್ಯರು, ಪೂಜ್ಯ ಶಂಕರ ಭಾರತಿ ಮಹಾರಾಜ ಸಂಜೀವಿನಿಗಡ ನಗರ, ಪೂಜ್ಯ ಶಿವಾನಂದ ಶಿವಾಚಾರ್ಯರು ತಮಲೂರು, ಪೂಜ್ಯ ಶಿವಯೋಗಿ ಮಚಿಂದ್ರನಾಥ ಮಹಾರಾಜ ಔದತಪೂರ, ಪೂಜ್ಯ ರಾಜ ಗುರು ಮಹಾರಾಜ ವಲ್ಲೇಪೂರ, ಪೂಜ್ಯ ಮಧುಕರ ಮಹಾರಾಜ ಬಾಳೂರಕರ, ಮುಖಂಡರಾದ ಈಶ್ವರ ಸಿಂಗ್ ಠಾಕೂರ್, ಮಾರುತಿ ಮೂಳೆ, ಉಮಾಕಾಂತ ನಾಗಮಾರಪಳ್ಳಿ, ಪದ್ಮಾಕರ ಪಾಟೀಲ, ಶಿವಾಜಿರಾವ ಪಾಟೀಲ ಮುಂಗನಾಳ, ಬಾಬುರಾವ ಕಾರಬಾರಿ, ರಾಮಶೆಟ್ಟಿ ಪನ್ನಾಳೆ, ನಾರಾಯಣ ಗಣೆಶ, ಪ್ರತೀಕ ಚವ್ಹಾಣ, ರಘುನಾಥ ಜಾಧವ, ಶಿವರಾಜ ಅಲ್ಮಾಜೆ, ಜನಾರ್ಧನ ಬಿರಾದಾರ, ದಿಗಂಬರರಾವ ಮಾನಕಾರಿ, ಶಿವಾಜಿರಾವ ವಾಗ್ಲೆ, ಖಂಡೋಬಾ ಕಂಗಟೆ, ವೆಂಕಟರಾವ ಮಹಿಂದೆ, ಪ್ರವೀಣ ಕಾರಬಾರಿ, ಖಂಡೇರಾವ ರಂದವೆ, ದಿಗಂಬರರಾವ ಮಾನಕಾರಿ, ಸಚಿನ ರಾಠೋಡ, ರುಕ್ಮಿಣಿಬಾಯಿ ಪಂಡರಿ, ಯೋಗೇಶ ಪಾಟೀಲ ದಾಬಕಾ, ನಾರಾಯಣರಾವ ಪಾಟೀಲ, ಜನಾರ್ಧನ ಪಾಟೀಲ ದೆಹಲಿ, ಸಚಿನ ಬಿರಾದಾರ, ಪ್ರಕಾಶ ಜೀರ್ಗೆ, ಪ್ರಕಾಶ ಖಾನಾಪೂರ, ಬಾಲಾಜಿ ವಾಗಮಾರೆ, ಗುರುನಾಥರೆಡ್ಡಿ ಚಿಂತಾಕಿ, ಸಂಗು ಬೋರ್ಗಿ, ಸುಮನಬಾಯಿ ಪಾಟೀಲ, ಬಾಬುರಾವ ವಲ್ಲೇಪೂರ, ಸಂಗಪ್ಪ ಸೋರಳ್ಳಿ, ನವನಾಥ ಭಾಲ್ಕೆ, ಅಭಂಗ ತಾಡಮಲ್ಲೆ, ಖಂಡೇರಾವ ಪಾಟೀಲ, ಶಿವಾಜಿರಾವ ತಾಡಮಲ್ಲೆ, ಮಲ್ಲಿಕಾರ್ಜುನ ಜಂಬಗಿ, ಪಂಢರಿನಾಥ ಭಾಲ್ಕೆ, ಜನಾರ್ಧನ ಗಾದಗೆ, ಕಾಶಿನಾಥ ಬಿರಾದಾರ, ಶಿವಶಂಕರ ನಾಗೋರಾ, ಅಶೋಕ ಕಾಂಬಳೆ, ವಿಠಲರಾವ ಚಪಟಾ, ಅಪ್ಪಾರಾವ ಇಟಗ್ಯಾಳ, ದಿಗಂಬರ ಭಾಲ್ಕೆ, ವಾಮನರಾವ ಬಿರಾದಾರ, ಮಧುಕರ ಸಾವಳೆ, ವಿಶ್ವನಾಥ ಪಾಂಚಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬಾಲಾಜಿ ತಾಡಮಲ್ಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
