ಬಿತ್ತನೆ ಬೀಜ ಸಕಾಲಕ್ಕೆ ಪೂರೈಸಿ: ಶಾಸಕ ಪ್ರಭು ಚವ್ಹಾಣ
—
ಬೀದರ್ : ಮುಂಗಾರು ಹಂಗಾಮು ಆರಂಭವಾಗಲಿದ್ದು, ರೈತರು ಬಿತ್ತನೆಗೆ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜಗಳನ್ನು ಪೂರೈಸಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ರೈತರಿಗೆ ವಿತರಿಸುತ್ತಿರುವ ಬಿತ್ತನೆ ಬೀಜ ಗುಣಮಟ್ಟದಿಂದ ಕೂಡಿರಬೇಕು. ಈ ಬಗ್ಗೆ ಅಧಿಕಾರಿಗಳು ಮುಂಚಿತವಾಗಿಯೇ ಖಚಿತಪಡಿಸಿಕೊಳ್ಳಬೇಕು. ಔರಾದ(ಬಿ) ಮತ್ತು ಕಮಲಗರ ತಾಲ್ಲೂಕುಗಳಿಗೆ ಬೇಕಾಗುವಷ್ಠು ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ದಾಸ್ತಾನು ಮಾಡಿಕೊಂಡಿರಬೇಕು. ಕಳಪೆ ಬೀಜ ವಿತರಣೆಯಂತಹ ಲೋಪಗಳು ಕಂಡುಬAದಲ್ಲಿ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲವೆಂದು ಎಚ್ಚರಿಸಿದರು.
ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ದರಗಳನ್ನು ಸರಿಯಾಗಿ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ನಿಗದಿತ ದಿನಾಂಕದAದು ಬಿತ್ತನೆ ಬೀಜ ಖರೀದಿಸಲು ಸಾಧ್ಯವಾಗದ ರೈತರಿಗೂ ಕೂಡ ಬೀಜ ಕಲ್ಪಿಸುವ ವ್ಯವಸ್ಥೆ ಮಾಡಬೇಕು. ಪ್ರತಿ ರೈತರಿಗೆ ರಿಯಾಯಿತಿ ದರದ ಬಿತ್ತನೆ ಬೀಜಗಳು ತಲುಪಿಸಬೇಕೆಂದು ಹೇಳಿದರು.
ಕೃಷಿ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಸಾಕಷ್ಟಿದೆ. ಇರುವ ಸಿಬ್ಬಂದಿಗಳನ್ನು ಬಳಸಿಕೊಂಡು ನಿಗದಿತ ಅವಧಿಯೊಳಗಾಗಿ ಬಿತ್ತನೆ ಬೀಜ ಪೂರೈಸುವ ಕೆಲಸವಾಗಬೇಕು. ಸಿಬ್ಬಂದಿಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ರೈತರೊಂದಿಗೆ ಸರಿಯಾಗಿ ವ್ಯವಹರಿಸುವುದಿಲ್ಲ. ಅವಾಚ್ಯ ಪದಗಳನ್ನು ಬಳಕೆ ಮಾಡುತ್ತಾರೆ ಎಂದು ರೈತರು ತಿಳಿಸುತ್ತಿದ್ದಾರೆ. ಇಂಥವುಗಳು ಎಲ್ಲಿಯೂ ಮರುಕಳಿಸಬಾರದು. ರೈತರು ಕೂಡ ಇಲಾಖೆಯ ಕೆಲಸಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಶಾಸಕರು ಕೋರಿದರು.

ಸಹಾಯಕ ಕೃಷಿ ನಿರ್ದೇಶಕರಾದ ಧೂಳಪ್ಪ ಪ್ರಾಸ್ತಾವಿಕ ಮಾತನಾಡಿ, ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಿಗೆ ಅಗತ್ಯವಿರುವಷ್ಟು ಬಿತ್ತನೆ ಬೀಜವನ್ನು ತರಿಸಿಕೊಳ್ಳಲಾಗಿದೆ. ಇನ್ನಷ್ಟು ಬೇಡಿಕೆ ಬಂದಲ್ಲಿ ಹೆಚ್ಚುವರಿ ಬೀಜಗಳನ್ನು ತರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರೈತರು ನಿರಾತಂಕವಾಗಿ ಕೃಷಿ ಚಟುವಟಿಕೆಗಳನ್ನು ಆರಂಭಿಸಬಹುದು. ಕ್ಷೇತ್ರದ ಬಹುತೇಕ ರೈತರು ಸೋಯಾಬೀನ್‌ಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಬಹುಬೆಳೆ ಪದ್ಧತಿ ಅಳವಡಿಸಿಕೊಂಡರೆ ರೈತರು ಲಾಭ ಗಳಿಸಬಹುದು. ಈ ದಿಶೆಯಲ್ಲಿ ರೈತರು ಆಲೋಚಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಶಿವಾನಂದ ವಡ್ಡೆ, ಸತೀಷ ಪಾಟೀಲ, ಬಸವರಾಜ ಪಾಟೀಲ, ರಂಗರಾವ ಜಾಧವ, ಮಾಧವರಾವ ಚಾಂಗೂಣೆ, ಯೋಗೇಶ ಪಾಟೀಲ, ಅನೀಲ ಬಿರಾದಾರ, ಕೇರಬಾ ಪವಾರ, ನಾಗೇಶ ಪತ್ರೆ, ಮಹೇಶ ಸಜ್ಜನ್, ಪ್ರವೀಣ ಕಾರಬಾರಿ, ಸುಶೀಲಾ ಮಹೇಶ ಸಜ್ಜನ್, ಕಾಶಿನಾಥ ಜೀರ್ಗೆ, ಪ್ರಭುರಾವ ಜೀರ್ಗೆ, ಗಿರೀಶ ವಡೆಯರ್, ಧನರಾಜ ಜೀರ್ಗೆ, ಚಂದ್ರಪ್ಪ ಜೀರ್ಗೆ, ಬಂಟಿ ರಾಂಪೂರೆ, ಸಂಜು ಮುರ್ಕೆ, ಉದಯ ಸೋಲಾಪೂರೆ, ಬಾಲಾಜಿ ವಾಗಮಾರೆ ಸೇರಿದಂತೆ ಇತರರಿದ್ದರು.
