ಬಸವಣ್ಣನವರ ವಚನಗಳಲ್ಲಿ ವಿಶ್ವ ಶಾಂತಿ ಸೂತ್ರ
ಬೀದರ್: ಬಸವಣ್ಣನವರ ವಚನಗಳಲ್ಲಿ ವಿಶ್ವ ಶಾಂತಿಯ ಸೂತ್ರ ಅಡಗಿದೆ ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು.
ಔರಾದ್ ತಾಲ್ಲೂಕಿನ ಗಡಿಕುಶನೂರ ಗ್ರಾಮದಲ್ಲಿ ಈಚೆಗೆ ನಡೆದ ಬಸವ ಜಯಂತಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವಣ್ಣನವರ ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಪ್ರತಿಯೊಬ್ಬರೂ ಅವರ ವಚನಗಳನ್ನು ಓದಬೇಕು. ಅವುಗಳ ಸಂದೇಶವನ್ನು ನಿಜ ಜೀವನದಲ್ಲಿ ಪಾಲಿಸಬೇಕು ಎಂದು ಹೇಳಿದರು.
ವಿವಿಧ ಪರೀಕ್ಷೆಗಳಲ್ಲಿ ಸಾಧನೆಗೈದ ರಾಹುಲ್ ಚಂದ್ರಕಾಂತ ಪಟ್ನೆ, ಬಸವಕಿರಣ ಶಿವರಾಜ ಪಟ್ನೆ, ದಿನೇಶ್ ಚಂದ್ರಕಾಂತ ಮಾಮನಕೇರೆ, ಚಂದ್ರಕಾಂತ ಹುಲಸೂರೆ, ಸಿಂಚನ ಸತೀಶ್, ಸುನೀಲ್ ಮಾಶೆಟ್ಟಿ, ದಿವ್ಯಾ, ಶಿವಲೀಲಾ ಅವರನ್ನು ಸನ್ಮಾನಿಸಲಾಯಿತು.
ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ, ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಮಹಾಲಿಂಗ ದೇವರು ಸಾನಿಧ್ಯ ವಹಿಸಿದ್ದರು.
ಮುಖಂಡರಾದ ಸೋಮಶೇಖರ ಪಾಟೀಲ ಗಾದಗಿ, ಜೈರಾಜ ಖಂಡ್ರೆ, ಕಂಟೆಪ್ಪ ಗಂದಿಗುಡೆ, ಚಂದ್ರಶೇಖರ ಹೆಬ್ಬಾಳೆ, ವಿಜಯಕುಮಾರ ಪಟ್ನೆ, ವೀರಶೆಟ್ಟಿ ತೆಗಂಪುರ, ಸುಭಾಷ್ ಪಟ್ನೆ, ಚಂದ್ರಕಾಂತ ಪಟ್ನೆ, ಶಿವರಾಜ ಪಟ್ನೆ, ಹನುಮಂತರಾವ್ ಪಾಟೀಲ, ಅಶೋಕ ಮಾಶೆಟ್ಟಿ, ಸುಭಾಷ್ ಹುಲಸೂರೆ, ಸುಧಾಕರ ಬಚರೆ, ಮಲಶೆಟ್ಟೆಪ್ಪ ಮಾಶೆಟ್ಟಿ, ಘಾಳೆಪ್ಪ ಪಾಟೀಲ, ರಸೂಲಮಿಯ, ಬಾಬುರಾವ್ ಶೇರಿಕಾರ್ ಇದ್ದರು.
