Saturday, May 24, 2025
HomePopularಬಸವಕಲ್ಯಾಣ: ಮೇ.26 ರಂದು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳ ವಿತರಣೆ

ಬಸವಕಲ್ಯಾಣ: ಮೇ.26 ರಂದು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳ ವಿತರಣೆ

ಬಸವಕಲ್ಯಾಣ: ಮೇ.26 ರಂದು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳ ವಿತರಣೆ
ಬೀದರ್ :  ಬಸವಕಲ್ಯಾಣ ತಾಲ್ಲೂಕಿನಲ್ಲಿ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಮೇ.26 ರಂದು ಬಸವಕಲ್ಯಾಣ ಶಾಸಕರಾದ ಶರಣು ಸಲಗರ ಚಾಲನೆ ನೀಡಲಿದ್ದಾರೆಂದು ಬಸವಕಲ್ಯಾಣ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವಕಲ್ಯಾಣ ತಾಲ್ಲೂಕಿನಲ್ಲಿ 2025 ರ ಮುಂಗಾರು ಹಂಗಾಮಿನಲ್ಲಿ ಸೋಯಾಅವರೆ, ತೊಗರಿ, ಉದ್ದು ಮತ್ತು ಹೆಸರು ಪ್ರಮುಖ ಬೆಳೆಗಳಾಗಿದ್ದು 13800 ಕ್ವಿಂಟಾಲ್ ಸೋಯಾಅವರೆ ಇಂಡೆಂಟ ನೀಡಲಾಗಿರುತ್ತದೆ ಇಲ್ಲಿಯವರೆಗೆ 6752.00 ಕ್ವಿಂಟಾಲ್ ಸೋಯಾಅವರೆ ಬಿತ್ತನೆ ಬೀಜಗಳು ತಾಲ್ಲೂಕಿನ 06 ರೈತ ಸಂಪರ್ಕ ಕೇಂದ್ರಗಳು ಹಾಗೂ 20 ಹೆಚ್ಚುವರಿ ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ ದಾಸ್ತಾನಾಗಿರುತ್ತದೆಂದು ಅವರು ತಿಳಿಸಿದ್ದಾರೆ.
ಪ್ರಮುಖ ಬೆಳೆಗಳ ಬಿತ್ತನೆ ಬೀಜಗಳ ದರ: ಸೋಯಾಅವರೆಎS-335 ತಳಿ 30 ಕೆ.ಜಿ. ಚೀಲಕ್ಕೆ ರೈತರ ವಂತಿಕೆಯು ಸಾಮಾನ್ಯ 1363.50 ರೂ., ಪ.ಜಾತಿ/ಪ.ಪಂಗಡ 988.50 ರೂ., ತೊಗರಿ ಃSಒಖ-736 ತಳಿ 05 ಕೆ.ಜಿ. ಚೀಲಕ್ಕೆ ರೈತರ ವಂತಿಕೆಯು ಸಾಮಾನ್ಯ 625 ರೂ., ಪ.ಜಾತಿ/ಪ.ಪಂಗಡ 562.50/ ರೂ., ಉಖಉ-811 ತಳಿ ಸಾಮಾನ್ಯ 600 ರೂ., ಪ.ಜಾತಿ/ಪ.ಪಂಗಡ 537.50 ರೂ., ಉದ್ದು ಆಃಉಗಿ-5 ತಳಿ 05 ಕೆ.ಜಿ. ಚೀಲಕ್ಕೆ ರೈತರ ವಂತಿಕೆಯು ಸಾಮಾನ್ಯ 567.50 ರೂ., ಪ.ಜಾತಿ/ಪ.ಪಂಗಡ 505 ರೂ., ಹೆಸರು ಃಉS-9 ತಳಿ 05 ಕೆ.ಜಿ. ಚೀಲಕ್ಕೆ ರೈತರ ವಂತಿಕೆಯು ಸಾಮಾನ್ಯ 575 ರೂ., ಪ.ಜಾತಿ/ಪ.ಪಂಗಡ 512.50 ರೂ.. ಆಗಿರುವುದು.

ಎಫ್‍ಐಡಿ ಹೊಂದಿರುವ ರೈತರು ತಮ್ಮ ಜಮೀನಿನ ಪಹಣಿ ಅಥವಾ ಹೋಲ್ಡಿಂಗ್, ಆಧಾರ್ ಕಾರ್ಡ, ಪ.ಜಾತಿ/ಪ.ಪಂಗಡ ರೈತರು ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಪುಸ್ತಕಗಳ ನಕಲು ಪ್ರತಿಗಳೊಂದಿಗೆ (ಝೆರಾಕ್ಸ್ ಪ್ರತಿಗಳು) ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರು ಕಡ್ಡಾಯವಾಗಿ ಎಫ್‍ಐಡಿ ಮಾಡಿಕೊಂಡು ಬಿತ್ತನೆ ಬೀಜವನ್ನು ಪಡೆಯಬೇಕು ಹಾಗೂ ಎಫ್‍ಐಡಿ ಹೊಂದಿರುವ ರೈತರು ತಮ್ಮ ಮೂಲ ಆಧಾರ ಕಾರ್ಡ ಮತ್ತು ಎಫ್‍ಐಡಿ ಚೀಟಿಯನ್ನು ತೆಗೆದುಕೊಂಡು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ/ಹೆಚ್ಚುವರಿ ಬೀಜ ವಿತರಣಾ ಕೇಂದ್ರದಲ್ಲಿ ಬಿತ್ತನೆ ಬೀಜಗಳನ್ನು ತಾಳ್ಮೆಯಿಂದ ಪಡೆಯಲು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ತಾಲ್ಲೂಕಿನ ರೈತರು ರಸಗೊಬ್ಬರವನ್ನು ಖರೀದಿಸುವಾಗ ರಸಗೊಬ್ಬರವನ್ನು ಕಡ್ಡಾಯವಾಗಿ ಪಿಓಎಸ್ ಉಪಕರಣದ ಮೂಲಕವೇ ಖರೀದಿಸಿ ಯಾಂತ್ರಿತ ಬಿಲ್ಲು ಪಡೆಯಬೇಕು. ಗರಿಷ್ಠ ಮಾರಾಟ ಬೆಲೆಗಿಂತ ಯೂರಿಯಾ 266 ರೂ. ಪ್ರತಿ 45 ಕೆ.ಜಿ. ಚೀಲಕ್ಕೆ, ಡಿ.ಎ.ಪಿ 1350 ರೂ. ಪ್ರತಿ 50 ಕೆ.ಜಿ. ಚೀಲಕ್ಕೆ, ಎನ್.ಪಿ.ಕೆ 10:26:26 ರೂ.1470 ರಿಂದ 1750 ಪ್ರತಿ 50 ಕೆ.ಜಿ. ಚೀಲಕ್ಕೆ, ಎನ್.ಪಿ.ಕೆ 12:32:16 ರೂ.1470 ರಿಂದ 1725 ಪ್ರತಿ ಪ್ರತಿ 50 ಕೆ.ಜಿ. ಚೀಲಕ್ಕೆ, ಎನ್.ಪಿ.ಕೆ 20:20:0:13 ರೂ.1225 ರಿಂದ 1450 ಪ್ರತಿ 50 ಕೆ.ಜಿ. ಚೀಲಕ್ಕೆ ದರ ನಿಗದಿಯಾಗಿದ್ದು, ಹೆಚ್ಚಿನ ದರಕ್ಕೆ ಯಾರಾದರೂ ಮಾರಾಟ ಮಾಡಿದರೆ ಕೂಡಲೇ ಸಮೀಪದ ಸಹಾಯಕ ಕೃಷಿ ನಿರ್ದೇಶಕರು ಕಛೇರಿಗೆ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ತಿಳಿಸಬೇಕೆಂದು ತಿಳಿಸಿದ್ದಾರೆ.
ರಸಗೊಬ್ಬರ ಮಾರಾಟಗಾರರು ರೈತರಿಗೆ ರಸಗೊಬ್ಬರವನ್ನು ಕಡ್ಡಾಯವಾಗಿ ಪಿ.ಒ.ಎಸ್. ಯಂತ್ರದ ಮುಖಾಂತರವೇ ವಿತರಿಸತಕ್ಕದ್ದು, ಅದಲ್ಲದೇ ರಸಗೊಬ್ಬರ ಮಾರಾಟಗಾರರು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಅಂತಹ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಾಲ್ಲೂಕಿನ ರೈತರು ಕೆವಲ ಸೋಯಾಅವರೆ ಒಂದೇ ಬೆಳೆ ಖರಿದಿಸದೇ ತೋಗರಿ, ಉದ್ದು, ಹೆಸರು, ಜೋಳ ಮತ್ತು ಇತರೆ ತೃಣ ಧಾನ್ಯಗಳನ್ನು ಖರಿದಿ ಮಾಡಲು ಮತ್ತು ಅವುಗಳನ್ನು ಸಮಗ್ರ ಕೃಷಿ ಪದ್ದತಿ, ಅಂತರಬೆಳೆ, ಮಿಶ್ರ ಬೆಳೆಯಾಗಿ ಬೆಳೆದಿದ್ದಲ್ಲಿ ಬೆಳೆ ವೈವಿಧ್ಯತೆ ಕಾಪಾಡುವುದರ ಜೋತೆಗೆ ಬಹುಬೆಳೆ ಪದ್ಧತಿ ಬೆಳೆದಿದ್ದಲ್ಲಿ ಒಳ್ಳೆಯ ಇಳುವರಿ ಮತ್ತು ಲಾಭವನ್ನು ಪಡೆಯಬಹುದಾಗಿದೆ. ಡಿ.ಎ.ಪಿ ರಸಗೊಬ್ಬರ ಬದಲಾಗಿ ಇತರೆ ಸಂಯುಕ್ತ ರಸಗೊಬ್ಬರಗಳಾದ 12:32:16, 20:20:0:13, 10:26:26 ಹಾಗೂ 14:35:14 ರಸಗೊಬ್ಬರಗಳು ಪರ್ಯಾಯವಾಗಿ ಬಳಸಬೇಕೆಂದು ಬಸವಕಲ್ಯಾಣ ಸಹಾಯಕ ಕೃಷಿ ನಿರ್ದೇಶಕರು ಸಲಹೆ ನೀಡಿರುತ್ತಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3