ಹಿಂದೂ ಜಾಗರಣ ವೇದಿಕೆಗೆ ಸುನೀಲ್ ದಳವೆ ನೇಮಕ
ಬೀದರ್: ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಘಟಕದ ಸಂಯೋಜಕರಾಗಿ ಸುನೀಲ್ ದಳವೆ ಅವರನ್ನು ನೇಮಕ ಮಾಡಲಾಗಿದೆ.
ನಗರದಲ್ಲಿ ನಡೆದ ವೇದಿಕೆಯ ಸಭೆಯಲ್ಲಿ ಅವರನ್ನು ನೇಮಕ ಮಾಡಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶಿವಶರಣಪ್ಪ(ಪುಟ್ಟು) ಪಾಟೀಲ ತಿಳಿಸಿದ್ದಾರೆ.
ಸುನೀಲ್ ದಳವೆ ಹಲವು ವರ್ಷಗಳಿಂದ ವೇದಿಕೆಯ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.