ಮನ್ನಳ್ಳಿ: ಎನ್‍ಎಸ್‍ಎಸ್ ಶಿಬಿರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಚಾಲನೆ
ಬೀದರ್: ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಈಚೆಗೆ ಆರಂಭಗೊಂಡಿತು.
ಸಸಿಗೆ ನೀರೆರೆದು ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು, ದೇಶದ ಪ್ರಗತಿಯಲ್ಲಿ ಯುವಕರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಸದ್ಯ ತಂತ್ರಜ್ಞಾನದ ಯುಗ ಇದೆ. ತಂತ್ರಜ್ಞಾನ ಬಲ್ಲವರಿಗೆ ಎಲ್ಲೆಡೆ ಬೇಡಿಕೆ ಇದೆ. ಹೀಗಾಗಿ ಎ.ಐ. ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಅರಿಯಬೇಕು ಎಂದು ತಿಳಿಸಿದರು.

ವ್ಯಕ್ತಿತ್ವ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪಾತ್ರದ ಕುರಿತು ನಿವೃತ್ತ ಪ್ರಾಚಾರ್ಯರಾದ ಮಧುಕರ ದೇಶಪಾಂಡೆ, ಗಂಗಾಧರ ಕೋರಿ ಮಾತನಾಡಿದರು. ಎನ್‍ಎಸ್‍ಎಸ್ ಸಂಯೋಜಕ ಡಾ. ಪೃಥ್ವಿರಾಜ ಹಾಲಪ್ಪಗೋಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೋಜಿನ ಜಾತ್ರೆ ಹಾಗೂ ಜಾನಪದ ಉತ್ಸವ ನಿಮಿತ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಪ್ರೊ. ಧನರಾಜ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ಅನಿಲ್ ಪನ್ನಾಳೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಶಿಬಾಯಿ ಬಕ್ಕಪ್ಪ, ಪ್ರಮುಖರಾದ ಮಲ್ಲಿಕಾರ್ಜುನ, ವಿಜಯಕುಮಾರ, ಅಬ್ದುಲ್ ಎಸ್, ಡಾ. ರಾಜಕುಮಾರ ಟಿ, ಡಾ. ಜಯಶೀಲಾ, ಶಿವಕುಮಾರ ಬಿರಾದಾರ, ಸುರೇಂದ್ರಸಿಂಗ್, ದಶವಂತ ಬಂಡೆ, ಡಾ. ಶಾಜಿಯಾ ಅಂಜುಮ್, ಮಮತಾ ಮತ್ತಿತರರು ಇದ್ದರು. ಸವಿತಾ ಪಾಟೀಲ ನಿರೂಪಿಸಿದರು.