ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿಶೇಷ ಶಿಬಿರ ಸಮಾರೋಪ
ಜೀವನ ಕೌಶಲ ಅರಿಯಲು ಎನ್‍ಎಸ್‍ಎಸ್ ಸಹಕಾರಿಬೀದರ್: ಜೀವನ ಕೌಶಲ ಅರಿಯಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ. ಧನರಾಜ ಬಿರಾದಾರ ಹೇಳಿದರು.
ನಗರದ ಓಡವಾಡದಲ್ಲಿ ನಡೆದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಯೋಜನೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಎಂ.ಜಿ. ದೇಶಪಾಂಡೆ ಮಾತನಾಡಿ, ಎನ್‍ಎಸ್‍ಎಸ್ ಶಿಸ್ತು, ಶ್ರಮದ ಘನತೆ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ನಿಜ ಜೀವನದಲ್ಲಿ ಪಾಲಿಸಬೇಕು ಎಂದು ಹೇಳಿದರು.
ಅಂಜಲಿ, ನಂದಿನಿ, ಪವಿತ್ರಾ, ಮುಹಮ್ಮದಿ ಹಾಗೂ ಭವಾನಿ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿಗೆ ಭಾಜನರಾದರು.
ಸಾಂಚಿ ಹೊನ್ನಮ್ಮ, ರಾಣಿ ಲಕ್ಷ್ಮಿಬಾಯಿ, ಸರೋಜಿನಿ ನಾಯ್ಡು, ಮದರ್ ತೆರೆಸಾ ಹಾಗೂ ಅಕ್ಕ ಮಹಾದೇವಿ ತಂಡಗಳು ಅತ್ಯುತ್ತಮ ಪ್ರಾರ್ಥನೆ, ಅತ್ಯುತ್ತಮ ವೇದಿಕೆ, ಅತ್ಯುತ್ತಮ ಶ್ರಮದಾನ, ಅತ್ಯುತ್ತಮ ಊಟದ ವ್ಯವಸ್ಥೆ, ಅತ್ಯುತ್ತಮ ವಿಡಿಯೋ/ ರೀಲ್‍ಗಾಗಿ ಬಹುಮಾನ ಪಡೆದುಕೊಂಡವು.
ಕಾಲೇಜಿನ ಪ್ರಾಚಾರ್ಯ ಪ್ರೊ. ಮನೋಜಕುಮಾರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಬಿ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ವಿದ್ಯಾ ಪಾಟೀಲ, ಎ ಘಟಕದ ಕಾರ್ಯಕ್ರಮ ಅಧಿಕಾರಿ ಪ್ರೊ. ಶ್ರೀನಿವಾಸ್ ರೆಡ್ಡಿ ಉಪಸ್ಥಿತರಿದ್ದರು. ಪವಿತ್ರಾ ನಿರೂಪಿಸಿದರು. ಮಂಜುಳಾ ಸ್ವಾಗತಿಸಿದರು. ಪೂಜಾ ವಂದಿಸಿದರು.