ಅಸೋಸಿಯೇಷನ್‍ನಿಂದ ಬಸವರಾಜ ಧನ್ನೂರ ಜನ್ಮದಿನ ಆಚರಣೆ
ಬೀದರ್: ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ವತಿಯಿಂದ ಇಲ್ಲಿಯ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಅಸೋಸಿಯೇಷನ್ ಅಧ್ಯಕ್ಷರೂ ಆದ ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಅವರ 50ನೇ ಜನ್ಮದಿನ ಆಚರಿಸಲಾಯಿತು.
ಕಾರು ಹಾಗೂ ಬೈಕ್‍ಗಳ ರ್ಯಾಲಿ ಮೂಲಕ ಅವರನ್ನು ದೇವಸ್ಥಾನಕ್ಕೆ ಕರೆ ತರಲಾಯಿತು. ಬಳಿಕ ಕೇಕ್ ಕತ್ತರಿಸಿ ಜನ್ಮದಿನ ಆಚರಣೆ ಮಾಡಲಾಯಿತು.
ಅಸೋಸಿಯೇಷನ್ ಪದಾಧಿಕಾರಿಗಳು, ಗಾಂಧಿಗಂಜ್ ವ್ಯಾಪಾರಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಜನ್ಮದಿನ ಕಾರ್ಯಕ್ರಮ ಆಯೋಜಿಸಿ ತೋರಿದ ಪ್ರೀತಿ, ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ ಎಂದು ಬಸವರಾಜ ಧನ್ನೂರ ಹೇಳಿದರು.
ನಾನು ಗಾಂಧಿಗಂಜ್‍ಗೆ ಬಂದು 32 ವರ್ಷಗಳಾಗಿವೆ. ಎಲ್ಲರ ಪ್ರೀತಿ, ವಿಶ್ವಾಸ ಹಾಗೂ ಸಹಕಾರದಿಂದಾಗಿ ಉದ್ಯಮ ಬೆಳೆಸಲು ಹಾಗೂ ಎರಡನೇ ಅವಧಿಗೆ ಗಾಂಧಿಗಂಜ್ ಅಸೋಸಿಯೇಷನ್ ಅಧ್ಯಕ್ಷನಾಗಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಬಸವಣ್ಣನವರ ತತ್ವದಡಿ ಬದುಕಲು ಪ್ರಯತ್ನಿಸುತ್ತಿರುವೆ. ಸ್ವಂತಕ್ಕಾಗಿ ಬದುಕುತ್ತಾ ಸಮಾಜಕ್ಕಾಗಿ ಬದುಕುವ ಜೀವನವೇ ಶ್ರೇಷ್ಠ ಎಂದು ಬಸವಣ್ಣನವರು ಹೇಳಿದ್ದಾರೆ. ನನ್ನ ಮುಂದಿನ ಜೀವನದಲ್ಲಿ ಇನ್ನೂ ಹೆಚ್ಚಿನ ಸಮಾಜ ಸೇವೆಗೈಯಲು ಪ್ರಯತ್ನಿಸುವೆ ಎಂದು ಹೇಳಿದರು.
ಅಸೋಸಿಯೇಷನ್ ಉಪಾಧ್ಯಕ್ಷ ನಾಗಶೆಟ್ಟೆಪ್ಪ ದಾಡಗಿ, ಕಾರ್ಯದರ್ಶಿ ಭಗವಂತ ಔದತ್ತಪುರ, ಖಜಾಂಚಿ ಬಂಡೆಪ್ಪ ಗಡ್ಡೆ, ಸಹ ಕಾರ್ಯದರ್ಶಿ ನಾಗಶೆಟ್ಟೆಪ್ಪ ಕಾರಾಮುಂಗಿ, ನಿರ್ದೇಶಕರಾದ ಬಾಲಾಜಿ, ವ್ಯಾಪಾರಸ್ಥರಾದ ಚಂದ್ರಪ್ಪ ಹಳ್ಳಿ, ಅಣ್ಣೆಪ್ಪ ಹುಡಗೆ, ಗಿರೀಶ್ ಪಾಟೀಲ ಚಿದ್ರಿ, ವೀರಭದ್ರಪ್ಪ ಪಾಟೀಲ ಕನ್ನಳ್ಳಿ, ಬಸವರಾಜ ಲಾಧಾ, ನಾಗರಾಜ ನಂದಗಾಂವ್, ಸಂತೋಷ್ ನಂದಗಾಂವ್, ರಾಜಕುಮಾರ ಹಜ್ಜರಗಿ, ವಿಜಯಕುಮಾರ ಮಾಳಗೆ, ಚನ್ನಪ್ಪ, ಪ್ರಕಾಶ್ ಮುದ್ದಾ, ಶಿವು, ಸಂತೋಷ್ ರತ್ನಾಪುರ, ರಾಜಕುಮಾರ ಶಹಾಪುರ, ತುಕಾರಾಮ ಚಿಲ್ಲರ್ಗಿ, ಸಂತೋಷ್ ಕೆರಪಳ್ಳೆ, ದೇವಾನಂದ, ಶಿವಕುಮಾರ ಸ್ವಾಮಿ, ಯಲ್ಲಾಲಿಂಗ, ಪಂಚಾಕ್ಷರಿ, ವೀರೂ ಪುಲಗೇರಾ, ಸತೀಶ್, ವಿಜಯಕುಮಾರ ಸೋನಾರೆ, ನಾಗಶೆಟ್ಟಿ ಧರಮಪೂರ್, ಸುನೀಲ ಭಾವಿಕಟ್ಟಿ, ಶರದ ಘಂಟೆ, ಗಾಂಧಿಗಂಜ್‍ನ ಅನೇಕ ಗಣ್ಯ ವ್ಯಾಪಾರಿಗಳು, ಮುನೀಮರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.