ಪ್ರಭು ಚವ್ಹಾಣ ಶಾಸಕರಾಗಿ 2 ವರ್ಷ ಪೂರೈಕೆ: ಅಭಿಮಾನಿ ಬಳಗದಿಂದ ಸನ್ಮಾನ
ಔರಾದ(ಬಿ) ಕ್ಷೇತ್ರ ಮಾದರಿಯಾಗಿಸಲು ಸಂಕಲ್ಪ: ಶಾಸಕ ಪ್ರಭು ಚವ್ಹಾಣ
—-
ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಶಾಸಕರಾಗಿ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಭಿಮಾನಿ ಬಳಗದ ಪ್ರಮುಖರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮೇ.14ರಂದು ಗೃಹ ಕಛೇರಿಯಲ್ಲಿ ಶಾಸಕರನ್ನು ಭೇಟಿಯಾಗಿ ಸಿಹಿ ತಿನ್ನಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಕ್ಷೇತ್ರದ ಮಹಾಜನತೆಯ ಆಶೀರ್ವಾದದಿಂದಾಗಿ ನಾನು ನಾಲ್ಕನೇ ಅವಧಿಗೆ ಶಾಸಕನಾಗಿ ಜನಸೇವೆ ಮಾಡಲು ಸಾಧ್ಯವಾಗಿದೆ. ಜನರ ನಿರೀಕ್ಷೆಯಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ಶಿಕ್ಷಣ, ಆರೋಗ್ಯ, ಕೃಷಿ, ರಸ್ತೆ, ಕುಡಿಯುವ ನೀರು, ಮೂಲಸೌಕರ್ಯಗಳ ಪೂರೈಕೆಯನ್ನು ಆದ್ಯತೆಯನ್ನಾಗಿಟ್ಟುಕೊಂಡು ಕೆಲಸ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ.
ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳಿಗೆ ಸಾರ್ವಜನಿಕರ ಸಹಕಾರವೂ ಅತ್ಯಂತ ಅವಶ್ಯಕವಾಗಿರುತ್ತದೆ. ಕ್ಷೇತ್ರದ ಮಹಾಜನತೆ ಅಭಿವೃದ್ಧಿಯ ಪರವಾಗಿದ್ದು, ಅಭಿವೃದ್ದಿ ಕೆಲಸಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ, ಔರಾದ(ಬಿ) ಕ್ಷೇತ್ರವನ್ನು ಮಾದರಿಯಾಗಿಸುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದೇನೆ. ಇದಕ್ಕೆ ಎಲ್ಲರ ಸಹಕಾರವೂ ಅವಶ್ಯಕ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ ಮಾತನಾಡಿ, ಪ್ರಭು ಚವ್ಹಾಣ ಅವರು ಶಾಸಕರಾದ ನಂತರ ಔರಾದ(ಬಿ) ಕ್ಷೇತ್ರದ ಅಭಿವೃದ್ಧಿಗೆ ಹೊಸ ಆಯಾಮ ಸಿಕ್ಕಿದೆ. ಎಲ್ಲ ಗ್ರಾಮಗಳಿಗೆ ರಸ್ತೆಗಳಾಗಿವೆ. ನೀರಿನ ಸಂಪರ್ಕ, ಶಾಲೆ, ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೇಡಿಕೆಗೆ ಅನುಗುಣವಾಗಿ ವಸತಿ ಶಾಲೆಗಳು, ಐಟಿಐ, ಡಿಪ್ಲೋಮಾ, ಪದವಿ ಕಾಲೇಜುಗಳು, ವಸತಿ ನಿಲಯಗಳ ಸ್ಥಾಪನೆ ಮಾಡಿದ್ದಾರೆ ಎಂದು ಅಭಿವೃದ್ಧಿ ಕೆಲಸಗಳನ್ನು ಕೊಂಡಾಡಿದರು.
ಪ್ರತಿ ವರ್ಷ ಗ್ರಾಮ ಸಂಚಾರ ನಡೆಸಿ ಪ್ರತಿ ಗ್ರಾಮಕ್ಕೆ ಭೇಟಿ ನೀಡುವ ಅಪರೂಪದ ಶಾಸಕರು ಇವರಾಗಿದ್ದು, ಕಾಲಿಗೆ ಗೆಜ್ಜೆ ಕಟ್ಟಿಕೊಂಡಂತೆ ಓಡಾಡಿ ಜನರ ಕಷ್ಟ-ಸುಖಗಳನ್ನು ಆಲಿಸುತ್ತಾರೆ. ಗ್ರಾಮದ ಸಮಸ್ಯೆಗಳನ್ನು ಖುದ್ದಾಗಿ ವೀಕ್ಷಿಸಿ ಆದ್ಯತೆಗೆ ಅನುಗುಣ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಕಷ್ಟವೆಂದು ಹೋಗುವ ಎಲ್ಲರಿಗೂ ಸ್ಪಂದಿಸುತ್ತಾರೆ. ಅನಾಥ ಮಕ್ಕಳನ್ನು ದತ್ತು ಪಡೆದು ಸಲಹುತ್ತಾರೆ, ಉತ್ತಮ ಶಿಕ್ಷಣ ಕೊಡಿಸಿ ಬದುಕು ಕಟ್ಟಿಕೊಡುತ್ತಿದ್ದಾರೆ. ಇವರಂಥ ಶಾಸಕರನ್ನು ಪಡೆದಿರುವ ನಾವೇ ಧನ್ಯರು ಎಂದು ಹೇಳಿದರು.
ಪ್ರಭು ಚವ್ಹಾಣ ಅಭಿಮಾನಿ ಬಳಗದ ಪ್ರಮುಖರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕರಿಗೆ ಹೂಮಾಲೆ ತೊಡಿಸಿ, ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮುಖಂಡರಾದ ಮಾರುತಿ ಚವ್ಹಾಣ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಮಾದಪ್ಪ ಜೀರ್ಗೆ, ಶಿವಾನಂದ ವಡ್ಡೆ, ನಾಗೇಶ ಪತ್ರೆ, ರಾಜಕುಮಾರ ಶೆಳ್ಕೆ, ಧೊಂಡಿಬಾ ನರೋಟೆ, ದಯಾನಂದ ಘೂಳೆ, ಖಂಡೋಬಾ ಕಂಗಟೆ, ಕೇರಬಾ ಪವಾರ್, ಸಂತೋಷ ಪೋಕಲವಾರ್, ಸಂಜು ಒಡೆಯರ್, ಸಂಜು ಮುರ್ಕೆ, ಸಚಿನ್ ಬಿರಾದಾರ, ರವೀಂದ್ರ ರೆಡ್ಡಿ, ರಾಜಕುಮಾರ ಸೋರಳೆ, ಪ್ರದೀಪ್ ಪವಾರ, ಧನಾಜಿ ರಾಠೋಡ, ಶಿವು ವಡ್ಡೆ, ಶಿವು ಝುಲ್ಫೆ, ಸಂಜು ಮಾನಕಾರೆ, ದೀಪಕ ಸಜ್ಜನಶೆಟ್ಟಿ, ಜಗದೀಶ ಪಾಟಿಲ್, ಮಂಜು ಸ್ವಾಮಿ, ಅನಿಲ್ ಬಿರಾದಾರ, ಯೋಗೇಶ್ ಸುರನಾರ, ಬಾಲಾಜಿ ಕಾಸಲೇ, ರಮೇಶಗೌಡಾ, ಬೀರಪ್ಪ ಮೇತ್ರೆ, ರಾಜಕುಮಾರ ಬಿರಾದಾರ, ಗಣೇಶ ಕುಂಬಾರ ಸೇರಿದಂತೆ ಇತರರಿದ್ದರು.