ಮೇ. 12 ರಂದು 2569ನೇ ಬುದ್ಧ ಪೂರ್ಣಿಮೆ ಮಹೋತ್ಸವ
ಬೀದರ್: ನಾಳೆ ಸಾಯಂಕಾಲ 4:30 ರಿಂದ ರಾತ್ರಿ 8 ಗಂಟೆಯ ವರೆಗೆ ತಾಲೂಕಿನ ಅಣದುರ ಗ್ರಾಮದ ವೈಶಾಲಿ ನಗರದ ಬುದ್ದ ವಿಹಾರದಲ್ಲಿ ಇಂಟರ್ನ್ಯಾಷನಲ್ ಬುದ್ಧಿಸ್ಟ್ ಮೊಂಕ್ಸ್ ಚಾರಿಟೇಬಲ್ ಟ್ರಸ್ಟ್ (ರಿ ) ಹಾಗೂ ಬೀದರ್ ಬುದ್ಧಿಸ್ಟ್ ಮಹಾ ವಿಹಾರ ಧಮ್ಮ ದರ್ಶನ ಭೂಮಿ ವೈಶಾಲಿ ನಗರ ಆಣದೂರ ಇವರ ಸಂಯುಕ್ತಾಶ್ರಯದಲ್ಲಿ ಭಗವಾನ್ ಬುದ್ಧರ 2569ನೆಯ ಬುದ್ಧ ಪೂರ್ಣಿಮೆ ಕಾರ್ಯಕ್ರಮ ಜರುಗಲಿದೆ.
ಭಗವಾನ್ ಬುದ್ಧರು ಬೋಧಿಸಿರುವ ಶಾಂತಿ ಮೈತ್ರಿ ಮತ್ತು ಕರುಣೆಯ ಸಂದೇಶಗಳು ಅತ್ಯವಶ್ಯ. ಭಗವಾನ್ ಬುದ್ಧರ ಹುಟ್ಟು ಜ್ಞಾನೋದಯ ಹಾಗೂ ಮಹಾಪರಿನಿಬ್ಬಾಣ ವೈಶಾಖ ಪೂರ್ಣಿಮೆಯ ದಿನದಂದೇ ಆಗಿರುತ್ತದೆ. ಈ ಸಂದರ್ಭದಲ್ಲಿ ಮೆಡಿಟೇಶನ್ ಹಾಲ್ (ಧಮ್ಮ ಹಾಲ್) ಭೂಮಿ ಪೂಜೆ, ಬುದ್ಧ ವಂದನಾ, ಧ್ಯಾನ ಮತ್ತು ಧಮ್ಮ ಪ್ರವಚನ ನಡೆಯಲಿದೆ.
ಈ ಮಹತ್ತರ ಕಾರ್ಯಕ್ಕೆ ಉಪಾಸಕ ಮತ್ತು ಉಪಾಸಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಭಂತೆ ಸಂಘ ರಖಿತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
————