Sunday, July 13, 2025
Homeಭಕ್ತಿಬ್ರಹ್ಮಾಕುಮಾರಿ ಶಿವಶಕ್ತಿ‌ ಭವನದಲ್ಲಿ  ಜರುಗಿದ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ

ಬ್ರಹ್ಮಾಕುಮಾರಿ ಶಿವಶಕ್ತಿ‌ ಭವನದಲ್ಲಿ  ಜರುಗಿದ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ

ಬ್ರಹ್ಮಾಕುಮಾರಿ ಶಿವಶಕ್ತಿ‌ ಭವನದಲ್ಲಿ  ಜರುಗಿದ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ
ಬೀದರ್: ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಶಿವಶಕ್ತಿ ಭವನವು  ಪ್ರತಿ ವರ್ಷದಂತೆ ಈ‌ ವರ್ಷ ಸಹ ಮಕ್ಕಳ ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದರು.. ಮೇ 1 ರಿಂದ 3 ರ ವರೆಗೆ 1 ರಿಂದ 6 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಲಾಗಿತ್ತು.
ಉದ್ಘಾಟನಾ ಕಾರ್ಯಕ್ರಮ:- ಕಾರ್ಯಕ್ರಮದ ಮೊದಲ ದಿನದಂದು, ಬ್ರಹ್ಮಾಕುಮಾರಿ ಶಿವಶಕ್ತಿ ಭವನದ ಸಂಚಾಲಕಿ ರಾಜಯೋಗಿನಿ ಬಿ.ಕೆ. ಸುಮಂಗಲಾ ಅಕ್ಕನವರು ಹಾಗೂ  ರಾಜಯೋಗಿನಿ ಬಿ.ಕೆ. ಸುನಂದಾ ಅಕ್ಕನವರು ಸಾನಿಧ್ಯ ವಹಿಸಿದ್ದರು., ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿರುವ ಅವರು, ಮಕ್ಕಳು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಪೌಷ್ಟಿಕ ಆಹಾರ ಮಾತ್ರ ಸೇವಿಸಬೇಕು, ಯಾವುದೇ ಜಂಕ್ ಫುಡ್ ಗಳನ್ನು ಸೇವಿಸಬಾರದು. ಜೊತೆಗೆ ಮಕ್ಕಳಲ್ಲಿ ಸಂಸ್ಕಾರ- ಸಂಸ್ಕೃತಿ ಹಾಗೂ ಅವರ ಚುರುಕುತನ ಹೆಚ್ಚಾಗಲು ನಿತ್ಯ ಯೋಗ-ಧ್ಯಾನಕ್ಕೆ ಮಾರು ಹೋಗಬೇಕೆಂದು ಕರೆ ನೀಡಿದರು.
ಎನ್.ಕೆ ಜಾಬಶೆಟ್ಟಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಯೋಗೇಶ್ವರಿ ಮಾತನಾಡಿ,  ಆಯುರ್ವೇದ ಹಾಗೂ ಯೋಗ ಮತ್ತು ಧ್ಯಾನಕ್ಕೆ ನಿಕಟ ಸಂಬಂಧವಿದೆ. ಆಯುರ್ವೇದದಿಂದ ಪರಿಪೂರ್ಣ ಆರೋಗ್ಯ ಕಾಪಾಡಿಕೊಳ್ಳಲು ಬಹಳಷ್ಟು ಅವಕಾಶವಿದ್ದು, ಅದು ಅಲೋಪತಿಗಿಂತಲೂ ದೀರ್ಘಕಾಲದ ಆರೋಗ್ಯ ವೃದ್ಧಿಸುತ್ತದೆ ಜೊತೆಗೆ ದೀರ್ಘ ಕಾಲದ ಕಾಯಿಲೆಗಳಿಗೆ ಆಯುರ್ವೇದವೇ ದೊಡ್ಡ ಅಸ್ತ್ರ ಎಂದು ಪ್ರತಿಪಾದಿಸಿದರು.
ಜಿಲ್ಲಾ ಸಹಕಾರಿ ನಿಯಮಿತದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ, ಬೆಂಗಳೂರಿನ ಪ್ರಗತಿಪರ ರೈತ  ಬಸವರಾಜ ಪಾಟೀಲ್ ಮುಂತಾದ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿದ್ದರು.
ಬಿ.ಕೆ. ಪಾರ್ವತಿ  ಕಾರ್ಯಕ್ರಮ ನಿರೂಪಿಸಿದರು. ಕು.ಶ್ರುತಿ ಸ್ವಾಗತ ನೃತ್ಯದೊಂದಿಗೆ  ಅತಿಥಿಗಳನ್ನು ಸ್ವಾಗತಿಸಿದರು.
ಪ್ರತಿದಿನ 80 ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.  ಈ ಸಂದರ್ಭದಲ್ಲಿ, ಬಿ ಕೆ ಶಿಕ್ಷಕರು ನೈತಿಕ ಮೌಲ್ಯ ಶಿಕ್ಷಣ, ರಾಜಯೋಗ ಧ್ಯಾನ, ಸ್ವಯಂ ಪರಿಚಯ – ನಾನು ಯಾರು, ದೇವರ ನಿಜವಾದ ಪರಿಚಯ, ಸ್ಪೂರ್ತಿದಾಯಕ ಕಥೆಗಳು ಇತ್ಯಾದಿ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದರು. ಇದಲ್ಲದೆ, ಮಕ್ಕಳ ಆಂತರಿಕ ಕೌಶಲ್ಯ ಅಭಿವೃದ್ಧಿಗಾಗಿ ವಿವಿಧ ಕಲೆಗಳು ಮತ್ತು ಚಟುವಟಿಕೆಗಳನ್ನು ಸಹ ನಡೆಸಲಾಯಿತು. ಇದರಲ್ಲಿ ಸಂಗೀತ ವ್ಯಾಯಾಮಗಳು, ಚಿತ್ರಕಲಾ ಸ್ಪರ್ಧೆ, ಕಾಗದದ ಕಲೆ ಮತ್ತು ಕರಕುಶಲ ವಸ್ತುಗಳು, ಹಾಡುಗಾರಿಕೆ ಮತ್ತು ನೃತ್ಯ, ಸ್ಮರಣಶಕ್ತಿ ಆಟಗಳು, ದೇವರಿಗೆ ಪತ್ರ… ಇತ್ಯಾದಿ ಸೇರಿವೆ. ಮಕ್ಕಳು ಎಲ್ಲಾ ಚಟುವಟಿಕೆಗಳಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅದ್ಭುತವಾಗಿ ಪ್ರದರ್ಶಿಸಿದರು.
ಬಹುಮಾನ ವಿತರಣೆ: ಮೂರನೇ ಮತ್ತು ಕೊನೆಯ ದಿನದಂದು ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಇದರಲ್ಲಿ ಅತಿಥಿಗಳು ಬಹುಮಾನ ವಿತರಿಸಿದರು. ವಿವಿಧ ಆಟಗಳು ಮತ್ತು ಕಾರ್ಯಾಗಾರಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ವಿತರಿಸಿದರು.
ಈ ಸಮಯದಲ್ಲಿ, ಮಕ್ಕಳು ತಮ್ಮ ಅನುಭವಗಳನ್ನು ಹಂಚಿಕೊಂಡರು, ಮತ್ತು ಈ ಶಿಬಿರವನ್ನು ಆಯೋಜಿಸಿದ್ದಕ್ಕಾಗಿ ಬ್ರಹ್ಮಕುಮಾರೀಸ್ ಶಿಕ್ಷಕರಿಗೆ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ, ಬ್ರಹ್ಮಾಕುಮಾರಿ ಕೇಂದ್ರ ಶಿವಶಕ್ತಿ‌ ಭವನದ   ರಾಜಯೋಗಿನಿ ಬಿ.ಕೆ. ಸುನಂದಾ ದೀದಿ, ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲರಾದ ಬಿ.ಕೆ. ಮೀನಾ, ನಿವೃತ್ತ ಪೊಲೀಸ್ ಕಾನ್ಸ್‌ಟೇಬಲ್ಒ ಸೂರ್ಯಕಾಂತ ಮುಂತಾದವರು ವೇದಿಕೆಯಲ್ಲಿದ್ದರು.

————–
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3