ಇಸ್ಕಾನ್ ಕೇಂದ್ರಗಳು ಅಧ್ಯಾತ್ಮಿಕ ಪ್ರಶಿಕ್ಷಣ ಕೇಂದ್ರಗಳಾಗಿವೆ-ಅಮೋಘಲೀಲಾಪ್ರಭು
ಬೀದರ್ : ಇಸ್ಕಾನ್ ಕೇಂದ್ರಗಳು ಬರೀ ಮಂದಿರಗಳಾಗದೇ ಅಧ್ಯಾತ್ಮಿಕ ಶಿಕ್ಷಣ ಕೇಂದ್ರಗಳಾಗಿವೆ. ಇಲ್ಲಿಗೆ ಬರುವವರು ಅಧ್ಯಾತ್ಮಿಕ ವಿದ್ಯಾಲಯಗಳಿಗೆ ವಿದ್ಯಾರ್ಥಿಗಳಾಗಿ ಬಂದAತೆ ಬರಬೇಕು, ವಿದ್ಯಾರ್ಥಿಗಳು ಶಾಲೆಯ ಕಲಿಕೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳದೇ ಹೋದರೆ ಅವರು ವಿಫಲ ವಿದ್ಯಾರ್ಥಿಗಳಾಗಬೇಕಾಗುತ್ತದೆ. ಹಾಗೆಯೇ ಇಸ್ಕಾನ್‌ನಲ್ಲಿ ಬರುವವರು ಕೂಡ ಗಂಭೀರವಾಗಿ ತೊಡಗಿಸಿಕೊಳ್ಳದೇ ಹೋದರೆ ವಿಫಲ ಮನುಷ್ಯನಾಗಬೇಕಾಗುತ್ತದೆ ಎಂದು ನವದೆಹಲಿಯ ದ್ವಾರಕಾ ಇಸ್ಕಾನ್ ಮಂದಿರದ ಉಪಾಧ್ಯಕ್ಷರು ಮತ್ತು ವಿಶ್ವವಿಖ್ಯಾತ ವಾಗ್ಮಿಗಳಾದ ಅಮೋಘಲೀಲಾಪ್ರಭುರವರು ಹೇಳಿದರು. ಅವರು ಬೀದರ ಜಗನ್ನಾಥ ಮಂದಿರದಲ್ಲಿ ಆಯೋಜಿಸಿದ ತಮ್ಮ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಕಲಿಯುಗದಲ್ಲಿ ಭಕ್ತಿರಹಿತವಾದ ಭೋಗ ಜೀವನ ಹೆಚ್ಚಿಗಿದೆ. ಆದರೂ ಎಷ್ಟೋ ಜನರು 60 ವರ್ಷವಾದ ನಂತರ ಅಧ್ಯಾತ್ಮ ಜೀವನ ನಡೆಸಬೇಕೆನ್ನುತ್ತಾರೆ. 60 ವರ್ಷಗಳ ನಂತರ ಅಧ್ಯಾತ್ಮ ಸಾಧನೆ ಮಾಡಬೇಕೆಂದರೆ ಕಷ್ಟವಾಗುತ್ತದೆ. ವೃದ್ಧಾಪ್ಯದಲ್ಲಿ ದೇಹ, ಮನಸ್ಸು ಶಕ್ತಿಹೀನವಾಗುತ್ತದೆ. ಹಾಗಾಗಿ ಬಾಲ್ಯ ಯೌವನದಲ್ಲಿ ಅಧ್ಯಾತ್ಮ ಸಾಧನೆ ಮಾಡಿದರೆ ಪರಿಪೂರ್ಣ ಅಧ್ಯಾತ್ಮ ಸಾಧನೆ ಮಾಡಬಹುದೆಂದು ಹೇಳಿದರು. ಇಸ್ಕಾನ್ ಕೇಂದ್ರಗಳಲ್ಲಿ ಬರುವ ಗಂಡಸರು ಕಾಟನ್ ಧೋತಿ, ಕುರ್ತಾ ಹಾಕಿಕೊಂಡು ತಿಲಕ ಹಚ್ಚಿಕೊಂಡು ಬರಬೇಕು. ಹೆಣ್ಣು ಮಕ್ಕಳು ಕಾಟನ್ ಸೀರೆ, ಕುಪ್ಪಸ ಹಾಕಿಕೊಂಡು ತಲೆಗೆ ಶರಗು ಹೊದ್ದು ಬರಬೇಕು. ಬಾಡಿ ಲಾಂಗ್ವೆಜ್ ಕೂಡ ವಾತಾವರಣ ಶುದ್ಧಿಕರಿಸುವುದರಿಂದ ಇದು ಭಕ್ತಿಯನ್ನು ಹೆಚ್ಚಿಸುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಇಂತಹ ಆಚರಣೆಗಳು ದೇಹಕ್ಕೆ ಮನಸ್ಸಿಗೆ ಹಿತವನ್ನು ಧನಾತ್ಮಕತೆಯನ್ನು ಉಂಟು ಮಾಡುತ್ತದೆ. ಇಸ್ಕಾನ್ ಇಂತಹ ಸನಾತನ ಆಚರಣೆಗಳು ಪಾಲಿಸುವುದರಲ್ಲಿ ಮುಂಚೂಣಿಯಲ್ಲಿದೆ. ಇಸ್ಕಾನ್ ಪಾಶ್ಚಾತ್ಯ ದೇಶಗಳ ಭೋಗ, ವಿಲಾಸಿ ಜೀವನ ಕಡೆಗಣಿಸುತ್ತದೆ ಎಂದರು.
ಭಕ್ತಿಗೆ ಆಸಕ್ತಿ ಉಲ್ಲಾಸ ಬೇಕು. ಇದು ರಿಯಲ್ ಆಗಿರಬೇಕು. ರೀಲ್ ಆಗಿರಬಾರದು. ಸತ್ಸಂಗಿಯಾಗಿರಬೇಕಾದರೆ ಚಮಡಿ, ದಮಡಿ ಆಸೆ ಬಿಡಬೇಕು. ಮೋಸ ಮಾಡುವುದು ಅಪರಾಧ ಮಾಡುವುದು ಆಲಸಿಯಾಗಿರುವುದು ಮಾಡಬಾರದು. ದೇವರಲ್ಲಿ ಒಳಗೊಂದು, ಒಳಗೊಂದು ಭಾವನೆಯಿಂದ ದೇವಾಚರಣೆಗಳು ಮಾಡಬಾರದು. ದೇವರು ಸೈಕೊ ಅಲ್ಲ, ಆತನಿಗೆ ಸಂಪೂರ್ಣ ತಿಳುವಳಿಕೆ ಇರುತ್ತದೆ. ಹಾಗಾಗಿ ಮತಲಪಿ ಭಕ್ತಿ ದೇವರ ಎದುರು ನಡೆಯುವುದಿಲ್ಲ. ಇಸ್ಕಾನ್‌ನಲ್ಲಿ ಜ್ಞಾನಕ್ಕೆ ಭಕ್ತಿಗೆ ಧ್ಯಾನಕ್ಕೆ ಮಹತ್ವಕೊಡಲಾಗಿದೆ. ಅರ್ಜುನನಿಗೆ ಬಹಳಷ್ಟು ಸಂಶಯಗಳಿದ್ದವು, ಮೋಹಗಳಿದ್ದವು, ಅಜ್ಞಾನಗಳಿದ್ದವು. ಇವೆಲ್ಲವನ್ನು ಶ್ರೀಕೃಷ್ಣ ತನ್ನ ಬೋಧೆಯಲ್ಲಿ ವ್ಯಾಪಕವಾಗಿ ಪರಿಣಾಮಕಾರಿಯಾಗಿ ಹೇಳಿ, ಅರ್ಜುನನಿಗೆ ಧರ್ಮದ ಹಾದಿಗೆ ತರುತ್ತಾನೆ. ಆತನಿಂದ ಅಧರ್ಮದ ವಿನಾಶ ಗೈಯುತ್ತಾನೆ. ಹಾಗಾಗಿ ನಾವು ಶ್ರೀಕೃಷ್ಣನ ಬೋಧೆಯಾದ ಭಗವದ್ಗೀತೆ ಅನುಸರಿಸಿದರೆ ನಾವು ಅಧರ್ಮ ಬಿಟ್ಟು, ಧರ್ಮದೆಡೆ ಖಂಡಿತ ವಾಲುತ್ತೇವೆ ಎಂದರು. ನಾವೀಗ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್‌ನಲ್ಲಿ ಫೇಸ್‌ಬುಕ್ ತೆರೆದು ಇನ್ನೊಬಬ್ಬರ ಫೇಸ್ ತೆರೆದು ನೋಡುತ್ತಿದ್ದೇವೆ. ಆದರೆ ನಮ್ಮೊಳಗಿನ ಫೇಸ್ ತೆಗೆದು ನೋಡುತ್ತಿಲ್ಲ. ಇದು ದುರಂತವಾಗಿದೆ ಎಂದರು.
ಮನುಷ್ಯನಾಗಿ ಹುಟ್ಟಿದ ಮೇಲೆ ಧರ್ಮಪಾಲನೆ ಮಾಡಬೇಕು. ಇಲ್ಲದೇ ಇದ್ದರೆ ಪ್ರಾಣಿಗಳು ಹುಟ್ಟಿ ಬಂದAತೆ ನಾವೂ ಕೂಡ ಬಂದು ಹೋಗಬೇಕಾಗುತ್ತದೆ. ಹಿಂದಿನ ಎಷ್ಟೋ ಜನ್ಮಗಳ ಪ್ರಾರಬ್ದಗಳು, ಕರ್ಮಗಳು ನಮಗಂಟಿರುವುದರಿಂದ ನಮ್ಮ ಹಿನ್ನಡೆಗೆ ನಾವು ದೇವರಿಗೆ ಶಪಿಸದೇ ಅಧ್ಯಾತ್ಮ ಜೀವಿಗಳ ಸಾಂಗತ್ಯ ಮಾಡಬೇಕು. ಅವರ ಕೃಪೆಯಿಂದ ನಮ್ಮ ಕೆಟ್ಟ ಕರ್ಮಗಳು, ಒಳ್ಳೆಯ ಕರ್ಮಗಳಾಗಿ ಪರಿವರ್ತನೆಯಾಗುತ್ತವೆ ಎಂದರು. ಅಧ್ಯಾತ್ಮಕ್ಕೆ ಒಳ್ಳೆಯ ಸಾಂಗತ್ಯ, ಒಳ್ಳೆಯ ಪರಿಸರ ಕೂಡ ಅವಶ್ಯಕವಾಗಿರುತ್ತದೆ. ಇಸ್ಕಾನ್ ಕೇಂದ್ರದಲ್ಲಿ ನಮಗೆ ಒಳ್ಳೆಯಯವರ ಸಾಂಗತ್ಯ, ಒಳ್ಳೆಯ ಪರಿಸರ ಸಿಗುತ್ತದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಕಲಿಯುಗದಲ್ಲಿ ಸತ್ವಗುಣವುಳ್ಳವರು ತುಂಬಾ ಕಡಿಮೆ ಇದ್ದಾರೆ. ರಜೋಗುಣ, ತಮೋಗುಣವುಳ್ಳವರು ಹೆಚ್ಚಿಗಿದ್ದಾರೆ. ಮನುಷ್ಯನ ಜೀವನದಲ್ಲಿ ಸಾಧುಗಳ, ಭಕ್ತರ ಸಂಗ ಸಿಗುವುದು ಸೌಭಾಗ್ಯವಾಗಿದೆ. ಅದರಲ್ಲೂ ಸಾಧುರ ಸೇವೆ ಮಾಡಲು ಸಿಗುವುದು ಮತ್ತೂ ಸೌಭಾಗ್ಯವಾಗಿದೆ. ಅಸುರನಾದ ಹಿರಣ್ಯಕಶ್ಯಪ್‌ನ ಮಗ ಪ್ರಹ್ಲಾದ ನಾರಾಯಣನ ಸಂಗದಿಂದಾಗಿ ಆತ ನರಸಿಂಹನ ಭಕ್ತನಾಗಿ ಮಾರ್ಪಟ್ಟ. ಹಾಗಾಗಿ ಸಂಗದಿಂದ ಮಾರ್ಪಟ್ಟ ಹಲವಾರು ವ್ಯಕ್ತಿಗಳ ಉದಾಹರಣೆಗಳು ನಮಗೆ ಚರಿತ್ರೆಯಲ್ಲಿ ಸಿಗುತ್ತವೆ ಎಂದರು.
ಇಂದಿನ ಐಷಾರಾಮಿ ಮನುಷ್ಯನಿಗೆ ಬಹುಮಹಡಿಯ ಅಂತಸ್ತಿನ ಮನೆಯಲ್ಲಿದ್ದರೂ ಒಳ್ಳೆಯ ನಿದ್ರೆ ಬರುತ್ತಿಲ್ಲ. ಇವತ್ತಿನ ಹೆಣ್ಣು ಮಕ್ಕಳಿಗೆ ಹೇರುವುದಕ್ಕೆ ವೈದ್ಯರು ಬೇಕಾಗುತ್ತಿದ್ದಾರೆ. ಆದರೆ ಪ್ರಾಣಿಗಳು ಪ್ಲಾಟ್‌ಫಾರ್ಮ್ನಲ್ಲಿ ಮಲಗಿದರೂ ಅವು ಬಲುಬೇಗನೆ ನಿದ್ರೆ ಹೋಗುತ್ತವೆ ಮತ್ತು ಅವು ಮಕ್ಕಳನ್ನು ಹೇರುವುದಕ್ಕೆ ವೈದ್ಯರನ್ನು ಅವಲಂಬಿಸಿರುವುದಿಲ್ಲ. ಇದಕ್ಕೆಲ್ಲಾ ಕಾರಣ ನಮ್ಮ ಪ್ರಕೃತಿ ವಿರುದ್ಧವಾದ ನಡತೆಯೇ ಕಾರಣವಾಗಿದೆ ಎಂದರು.
ಭಕ್ತಿಯಿAದ ಜ್ಞಾನ ಶುದ್ಧಿಯಾಗುತ್ತದೆ, ದಾನದಿಂದ ಧನ ಶುದ್ಧಿಯಾಗುತ್ತದೆ, ಹರಿನಾಮದಿಂದ ಬುದ್ಧಿ ಶುದ್ಧಿಯಾಗುತ್ತದೆ, ಸೇವಾಭಾವದಿಂದ ಅಹಂಕಾರ ಶುದ್ಧಿಯಾಗುತ್ತದೆ ಎಂಬಂತಹ ಬಹಳಷ್ಟು ಅಂಶಗಳನ್ನು ನಮ್ಮ ಶಾಸ್ತçಗಳಲ್ಲಿ ಹೇಳಲಾಗಿದೆ. ಹಾಗಾಗಿ ಶಾಸ್ತçಗಳನ್ನು ಓದಿ ಒಳ್ಳೆಯ ನಡೆ ನುಡಿ ಹೊಂದಬೇಕೆಂದು ಹೇಳಿದರು.
1972 ರಲ್ಲಿ ಭಾರತ ಪಾಕ್ ಯುದ್ಧವಾದಾಗ ರಷ್ಯಾ ಒಂದೇ ಭಾರತದ ಪರವಾಗಿತ್ತು. ಉಳಿದೆಲ್ಲಾ ರಾಷ್ಟçಗಳು ಪಾಕ್‌ನ ಪರವಾಗಿದ್ದವು. ಆದರೆ ಈಗ ಪಾಕ್ ಪರವಾಗಿ ಒಂದೆರಡೆ ರಾಷ್ಟçಗಳು ಇವೆ. ಉಳಿದೆಲ್ಲಾ ರಾಷ್ಟçಗಳು ಭಾರತದ ಪರವಾಗಿವೆ. ಇದಕ್ಕೆಲ್ಲಾ ಭಾರತದ ಅಧ್ಯಾತ್ಮ ಶಕ್ತಿಯೇ ಕಾರಣವಾಗಿದೆ ಎಂದರು. ಇಸ್ಕಾನ್ ಸ್ಥಾಪಕರಾದ ಪ್ರಭುಪಾದರು ದುಶ್ಚಟಗಳಿಂದ ಬಾಧಿತರಾದ ಅಮೇರಿಕಾದ ಹಿಪ್ಪಿಗಳು, ಜೀವನದಲ್ಲಿ ಅನ್ ಹ್ಯಾಪಿಯಾಗಿ ಬಾಳುತ್ತಿದ್ದರು. ಅವರು ಬದಲಾಗಿ ಹ್ಯಾಪಿಯಾಗಿರುವಂತೆ ಸತ್ಸಂಗಿಯಾಗಿರುವಂತೆ ಮಾಡಿದ ಶ್ರೇಯ ಪ್ರಭುಪಾದರಿಗೆ ಸಲ್ಲುತ್ತದೆ. ಇಸ್ಕಾನ್ ಅನುಸರಿಸಿದವರು ಕೇಡಿನ ಹಾದಿಯನ್ನು ಬಿಟ್ಟು, ಒಳಿತಿನ ಹಾದಿ ಹಿಡಿಯುತ್ತಾರೆ ಎಂಬುದಕ್ಕೆ ಬಹಳಷ್ಟು ಉದಾಹರಣೆಗಳು ನಮಗೆ ದೇಶ ವಿದೇಶಗಳಲ್ಲಿ ಹೇರಳವಾಗಿ ಸಿಗುತ್ತವೆ ಎಂದರು. ಇಸ್ಕಾನ್ ಸೆಂಟರಗಳು ಕಸ್ಟಮರ್ ಕೇರ್ ಸೆಂಟರ್‌ಗಳಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಭಕ್ತರೊಂದಿಗೆ ಸಂವಾದ ಕೂಡ ನಡೆಸಿ, ಅವರ ಸಂಶಯ ದೂರ ಮಾಡಿದರು.
ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಗಣ್ಯರು, ಭಕ್ತರು ಪಾಲ್ಗೊಂಡಿದರು.