Saturday, July 12, 2025
HomePopularಜಿಲ್ಲಾಡಳಿತ ಭವನ ನಿರ್ಮಾಣ : ಕಛೇರಿಗಳ ಸ್ಥಳಾಂತರ - ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಜಿಲ್ಲಾಡಳಿತ ಭವನ ನಿರ್ಮಾಣ : ಕಛೇರಿಗಳ ಸ್ಥಳಾಂತರ – ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಜಿಲ್ಲಾಡಳಿತ ಭವನ ನಿರ್ಮಾಣ : ಕಛೇರಿಗಳ ಸ್ಥಳಾಂತರ – ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್ :- ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯ ಕಟ್ಟಡವು ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಹೊಸ ಪ್ರಜಾ ಸೌಧ ನಿರ್ಮಾಣ ಕಾರ್ಯವು ಪ್ರಾರಂಭಗೊಳ್ಳಿಸಬೇಕಾಗಿ ರುವುದರಿಂದ, ಸದರಿ ಸಂಕಿರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಛೇರಿಗಳನ್ನು ಪ್ರಜಾ ಸೌಧ ಕಟ್ಟಡ ನಿರ್ಮಾಣ ಕಾರ್ಯ ಮುಕ್ತಾಯವಾಗುವವರೆಗೆ ಜಿಲ್ಲಾಧಿಕಾರಿಗಳ ಕಛೇರಿ ಕಟ್ಟಡದಲ್ಲಿರುವ ವಿವಿಧ ಇಲಾಖೆಗಳ ಕಛೇರಿಗಳನ್ನು ಜುಲೈ.10 ರಂದು ಈ ಕೆಳಕಂಡ ಸ್ಥಳಗಳಲ್ಲಿ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಳಾಂತರಗೊಣಂಡಿರುವ ಕಚೇರಿಗಳ ವಿವರ: ಬೀದರ ಜಿಲ್ಲಾಧಿಕಾರಿಗಳ ಕಛೇರಿಯನ್ನು ಗಾಂಧಿ ಭವನ ಚಿಕ್ಕಪೇಟ ಬೀದರ ಇಲ್ಲಿಗೆ ಸ್ಥಳಾಂತರಿಸಲಾಗಿದೆ.
ಸಹಾಯಕ ಆಯುಕ್ತರ ಕಛೇರಿಯನ್ನು -ಕೇಂದ್ರ ಗ್ರಂಥಾಲಯ ಕಟ್ಟಡ ಮೊದಲನೇ ಮಹಡಿ ಜನವಾಡ ರಸ್ತೆ ಬೀದರ, ವಿಶೇಷ ಭೂ ಸ್ವಾಧಿನಾಧಿಕಾರಿಗಳ ಕಛೇರಿಯನ್ನು-ಉಪ ನಿರ್ದೇಶಕರು ರೇಷ್ಮೆ ಇಲಾಖೆ ಕಟ್ಟಡ ಮೊದಲನೇ ಮಹಡಿ ಬೀದರ, ಉಪ ನೋಂದಣಾಧಿಕಾರಿಗಳ ಕಛೇರಿಯನ್ನು-ಮೌಲಾನಾ ಆಜಾದ್ ಭವನ ಚಿಕ್ಕಪೇಟ ಬೀದರ, ಉಪನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗರಾಹಕರ ವ್ಯವಹಾರಗಳ ಇಲಾಖೆಯನ್ನು ಮೌಲಾನಾ  ಆಜಾದ್ ಭವನ ಚಿಕ್ಕಪೇಟ ಬೀದರ, ಉಪನಿರ್ದೇಶಕರು ಭೂ ದಾಖಲೆಗಳ ಇಲಾಖೆಯನ್ನು-ಮೌಲಾನಾ ಆಜಾದ್ ಭವನ ಚಿಕ್ಕಪೇಟ ಬೀದರ, ಸಹಾಯಕ ನಿರ್ದೇಶಕರು ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆಯನ್ನು-ಮೌಲಾನಾ ಆಜಾದ್ ಭವನ ಚಿಕ್ಕಪೇಟ ಬೀದರ, ಜಿಲ್ಲಾ ವಕ್ಫ ಸಲಹಾ ಸಮಿತಿ ಬೀದರ ಕಚೇರಿಯನ್ನು-ಮೌಲಾನಾ ಆಜಾದ್ ಭವನ ಚಿಕ್ಕಪೇಟ ಬೀದರ, ಕಾರ್ಯದರ್ಶಿಗಳು, ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೊದ್ದೇಶ, ಸಹಕಾರ ಸಂಘ ನಿಯಮಿತ, ಜಿಲ್ಲಾಧಿಕಾರಿಗಳ ಕಛೇರಿಯನ್ನು-ಮೌಲಾನಾ ಆಜಾದ್ ಭವನ ಚಿಕ್ಕಪೇಟ ಬೀದರ, ಪ್ರವಾಸೋದ್ಯಮ ಇಲಾಖೆಯನ್ನು-ಕನ್ನಡ ಭವನ ಚಿಕ್ಕಪೇಟ ಬೀದರ, ಯೋಜನಾ ನಿರ್ದೇಶಕರು ನಗರಾಭಿವೃದ್ಧಿ ಕೋಶ ಕಛೇರಿಯನ್ನು-ಬೊಮ್ಮಗೊಂಡೇಶ್ವರ ಸಮುದಾಯ (ಗೊಂಡ) ಭವನ ಚಿಕ್ಕಪೇಟ ಬೀದರ ಇಲ್ಲಿಗೆ ಸ್ಥಳಾಂತರಿಸಲಾಗಿದೆ.
****
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3