ಶ್ರೀ ವಾಸವಿ ಕನ್ಯಕಾ ಪರಮೇಶ್ವರಿಯವರ ಜಯಂತೋತ್ಸವ ಭವ್ಯ ಮೇರವಣಿಗೆ
ಬೀದರ್ : ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ಜಯಂತೋತ್ಸವ ಆಚರಿಸಲಾಯಿತು.
ಬೆಳಿಗ್ಗೆ 6:00 ಗಂಟೆಯಿಂದ ಅಭಿಷೇಕ, 9:00 ಗಂಟೆಗೆ ಕುಂಕುಮಾರ್ಚನೆ, ಪುಷ್ಪಾರ್ಚನೆ ಮತ್ತು ಮಧ್ಯಾಹ್ನ 12:00 ಗಂಟೆಗೆ ತೊಟ್ಟಿಲು ಕಾರ್ಯಕ್ರಮ, ಲಲಿತ ಸಹಸ್ರಾನಾಮ ಪಾರಾಯಣ ನಡೆಸಲಾಯಿತು.
ಸಾಯಂಕಾಲ 6 ಗಂಟೆಗೆ ಅತಿ ವಿಜೃಂಭಣೆಯಿಂದ ಭವ್ಯ ಮೆರವಣಿಗೆ ಚೌಬಾರಾ ಪಾಂಡುರಂಗ ಮಂದಿರದಿಂದ ಪ್ರಾರಂಭಗೊಂಡಿತು.

ಮೇರವಣಿಗೆಯಲ್ಲಿ ಮಹಿಳೆಯರು ಹಸಿರು ಬಣ್ಣದ ಶಿರೆ ಉಟ್ಟಿಕೊಂಡು ತಲೆ ಮೇಲೆ ಕಳ¸ದೊಂದಿಗೆ ಪಾಲ್ಗೊಂಡು ಮೇರವಣಿಗೆಯ ಶೋಭೆ ಹೆಚ್ಚಿಸಿದ್ದರು.
ಹೊರ ರಾಜ್ಯದ ಮಹಾರಾಷ್ಟಾçದಿಂದ ಬ್ಯಾಂಡ ಹಾಗೂ ಬಾಜಾ ಮೇರವಣಿಯಲ್ಲಿ ಶೋಭೆ ಹೆಚ್ಚಿಸಿತು.
ಈ ಭವ್ಯ ಮೇರವಣಿಗೆಯಲ್ಲಿ ಹೆಣ್ಣು ಮಕ್ಕಳು ಕೋಲಾಟ, ಭಜನೆ ಹಾಗೂ ನೃತ್ಯದೊಂದಿಗೆ ಮೇರವಣಿಗೆಯಲ್ಲಿ ಪಾಂಲ್ಗೊಂಡಿದ್ದರು.
ಶ್ರೀ ವಾಸವಿ ಕನ್ಯಕಾ ಮರಮೇಶ್ವರಿಯ ಭವ್ಯ ಮೂರ್ತಿಯ ಮೇರವಣಿಗೆಯಲ್ಲಿ ಶೋಭೆ ಹಿಚ್ಚಿಸಿತು.
ಶ್ರೀ ವಾಸವಿ ಕನ್ಯಕಾ ಮರಮೇಶ್ವರಿಯ ಭವ್ಯ ಮೂರ್ತಿಯ ಮೇರವಣಿಗೆಯಲ್ಲಿ ಶೋಭೆ ಹಿಚ್ಚಿಸಿತು.

ಈ ಮೇರವಣಿಗೆಯು ಕನ್ಯಕಾ ಪರಮೇಶ್ವರಿ ದೇವಸ್ಥಾನದಿಂದ ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಕ್ರಾಂತಿ ಗಣೇಶ, ವಿನಾಯಕ್ ವೃತ್ತ, ಮುಖ್ಯ ರಸ್ತೆ, ಚೌಬಾರ, ಮಾರ್ಗವಾಗಿ ಮತ್ತೆ ದೇವಸ್ಥಾನಕ್ಕೆ ತಲುಪಿತು. ದೇವಸ್ಥಾನ ತಲುಪಿದ ಮೇಲೆ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಯಿತು.

ಆರ್ಯ ವೈಶ್ಯ ಸಂಘದ ಪದಾಧಿಕಾರಿಗಳು, ವಾಸವಿ ಮಹಿಳಾ ಮಂಡಳ, ವಾಸವಿ ಯುವಕ ಸಂಘ, ವಾಸವಿ ಯುವತಿ ಸಂಘ, ವಾಸವಿ ಕಿಶೋರ ಸಂಘ, ವಾಸವಿ ಫ್ರೇಂಡ್ಸ್ ಗ್ರೂಪ, ಕನ್ಯಕಾ ಮರಮೇಶ್ವರಿ ಮಿತ್ರ ಮಂಡಳದ ಎಲ್ಲಾ ಪದಾಧಿಕಾರಿಗಳು, ಭಕ್ತಾಧಿಗಳು ಸೇರಿ ಜಯಂತಿಗೆ ಕಳೆ ತಂದುಕೊಟ್ಟರು.
ಸಂಘದ ಅಧ್ಯಕ್ಷರಾದ ಅಶೋಕ ರೆಜಂತಲ್, ಡಿ.ವಿ. ಸಿಂದೋಲ, ಉಪಾಧ್ಯಕ್ಷರಾದ ದಿಗಂಬರ ಪೋಲಾ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ಪೊಲಾ, ಕಾರ್ಯದರ್ಶಿಗಳಾದ ಚಂದ್ರಶೇಖರ ಗಾದಾ, ವೆಂಕಟೇಶ ಪಿ. ಗಾಧಾ ಹಾಗೂ ಖಜಾಂಚಿಗಳಾದ ಸುನೀಲಕುಮಾರ ವಂಗಾಪಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.